ಉಡುಪಿ: ಗಾಳಿ ತುಂಬುವಾಗ ಟೈರ್ ಸ್ಫೋಟಗೊಂಡು ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಸಂಭವಿಸಿದೆ. ಕೆಪಿಎಸ್ ಪಿಯು ಕಾಲೇಜ್ ಹಿಂಭಾಗದಲ್ಲಿನ ಟೈರ್ ಪಂಚರ್ ಶಾಪ್‌ನಲ್ಲಿ ಬಸ್ಸಿನ ಟೈರ್‌ಗೆ ಗಾಳಿ ತುಂಬುವ ಸಂದರ್ಭ ಟೈರ್ ಸಿಡಿದಿದೆ.
ಈ ವೇಳೆ ಗಾಳಿ ಹಾಕುತ್ತಿದ್ದ ಯುವಕ ಅಬ್ದುಲ್ ರಜೀದ್ (19) ಗಾಯಗೊಂಡಿದ್ದಾರೆ. ಖಾಸಗಿ ಶಾಲೆ ಬಸ್ಸೊಂದರ ಚಾಲಕ ಟೈರ್ ಪ್ಯಾಚ್ ಗೆಂದು ಇಲ್ಲಿಗೆ ಬಂದಿದ್ದ. ಈ ವೇಳೆ ಗಾಳಿ ತುಂಬಿದ ಕೆಲವೇ ನಿಮಿಷಗಳಲ್ಲಿ ಟೈರ್ ಸಿಡಿದು ಸ್ಫೋಟಗೊಂಡಿದೆ. ಗಾಳಿ ತುಂಬಿಸುತ್ತಿದ್ದ ಯುವಕ ಎದ್ದು ನಿಲ್ಲುವಷ್ಟರಲ್ಲಿ ಸ್ಫೋಟವಾಗಿದ್ದು, ಟೈರ್‌ನ ಸಿಡಿತಕ್ಕೆ ಕೆಲವು ಅಡಿ ಎತ್ತರಕ್ಕೆ ಯುವಕ ಎಸೆಯಲ್ಪಟ್ಟಿದ್ದಾನೆ. ಅಪಘಾತದ ಹೊಡೆತಕ್ಕೆ ಯುವಕನ ಕೈ ಮುರಿತಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಭಯಾನಕವಾಗಿದೆ.