ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎನ್‌ಐಟಿಕೆ ಸುರತ್ಕಲ್ ಟೋಲ್ ಪ್ಲಾಜಾ ಹೆಜಮಾಡಿ ಟೋಲ್‌ಪ್ಲಾಜಾದ ಜತೆಗೆ ವಿಲೀನಗೊಂಡಿದ್ದರೂ, ಹೆಚ್ಚುವರಿ ಟೋಲ್ ಸಂಗ್ರಹ ಸದ್ಯಕ್ಕಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಡಿ.1ರಿಂದ ಎನ್‌ಐಟಿಕೆ- ಸುರತ್ಕಲ್ ಟೋಲ್‌ಪ್ಲಾಜಾದಲ್ಲಿ ಶುಲ್ಕ ವಸೂಲಿ ಸ್ಥಗಿತಗೊಂಡಿದೆ. ಸುರತ್ಕಲ್‌ನ ಶುಲ್ಕವನ್ನು ಸೇರಿಸಿ ಹೆಜಮಾಡಿಯಲ್ಲಿ ಟೋಲ್ ಸಂಗ್ರಹಕ್ಕೆ ಪರಿಷ್ಕೃತ ದರವನ್ನು ಡಿ.4ರಿಂದ ಜಾರಿಗೊಳಿಸುವ ಬಗ್ಗೆ ನವಯುಗ ಸಂಸ್ಥೆ ಅಧಿಕೃತ ಪ್ರಕಟಣೆ ಇತ್ತೀಚೆಗೆ ಹೊರಡಿಸಿತ್ತು. ಆದರೆ ಹೆಚ್ಚುವರಿ ಟೋಲ್ ವಸೂಲಿಗೆ ಸರ್ಕಾರದಿಂದ ಈವರೆಗೆ ಅವಕಾಶ ಸಿಕ್ಕಿಲ್ಲ ಎಂದು ಎನ್‌ಎಚ್‌ಐ ಮಂಗಳೂರು ಯೋಜನಾ ನಿರ್ದೇಶಕ ಎಚ್.ಎಸ್.ಲಿಂಗೇ ಗೌಡ ತಿಳಿಸಿದ್ದಾರೆ.