Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಟ್ರೇಡಿಂಗ್ ಕಂಪೆನಿಯಲ್ಲಿ ಮಹಿಳಾ ಸಿಬ್ಬಂದಿಯಿಂದ 48 ಲಕ್ಷ ವಂಚನೆ – ದೂರು ದಾಖಲು
    ಇತ್ತೀಚಿನ ಸುದ್ದಿ

    ಮಂಗಳೂರು: ಟ್ರೇಡಿಂಗ್ ಕಂಪೆನಿಯಲ್ಲಿ ಮಹಿಳಾ ಸಿಬ್ಬಂದಿಯಿಂದ 48 ಲಕ್ಷ ವಂಚನೆ – ದೂರು ದಾಖಲು

    August 29, 2024
    Share

    ಮಂಗಳೂರು: ಶ್ರೀಮಡಪ್ಪುರಾಯಿಲ್ ಶರ್ಫುದ್ದೀನ್ ಟ್ರೇಡಿಂಗ್ ಕಂಪೆನಿಯ ಮಹಿಳಾ ಲೆಕ್ಕಪರಿಶೋಧಕಿ 48 ಲಕ್ಷ ರೂ‌ ಹಣಕಾಸು ವಂಚನೆಗೈದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಶ್ರೀಮಡಪ್ಪುರಾಯಿಲ್ ಶರ್ಫುದ್ದೀನ್ ಟ್ರೇಡಿಂಗ್ ಕಂಪೆನಿಯ ಹಣಕಾಸು ವ್ಯವಹಾರಗಳನ್ನು ಲೆಕ್ಕಪರಿಶೋಧಕಿ ಪುಷ್ಪಲತಾ ನೋಡಿಕೊಳ್ಳುತ್ತಿದ್ದರು. ಮಾಲಕ ಮತ್ತು ಆಡಿಟರ್ ಕಂಪೆನಿಯ ಹಣಕಾಸು ವ್ಯವಹಾರಗಳ ಸಮಗ್ರ ಪರಿಶೀಲನೆ ನಡೆಸಿದಾಗ ಕಳೆದ ಮೂರು ವರ್ಷಗಳಿಂದ ದೊಡ್ಡ ಹಣಕಾಸು ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ. 2024ರ ಜ.11ರಿಂದ 2024ರ ಆ.20ರವರೆಗೆ, 48,83,405 ರೂ. ಹಣ ಕಂಪೆನಿಯ ಸೌತ್ ಇಂಡಿಯನ್ ಬ್ಯಾಂಕ್ ಖಾತೆಯಿಂದ ಅಕ್ಸಿಸ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಪುಷ್ಪಲತಾ ಈ ಹಣವನ್ನು ತನ್ನ ಪರಿಚಿತ ರಿತೇಶ್ ಎಂಬಾತನ ಖಾತೆಗೆ ವರ್ಗಾಯಿಸಿದ್ದು, ಬಳಿಕ ತನ್ನ ಸೌತ್ ಇಂಡಿಯನ್ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದು ಕಂಡುಬಂದಿದೆ. ಪುಷ್ಪಲತಾ ಕಂಪನಿಯ ಜಿಎಸ್‌ಟಿ ಪಾವತಿಗೆ ಮೀಸಲಾಗಿದ್ದ 48,83,405 ರೂ. ಹಣವನ್ನು ತನ್ನ ಮತ್ತು ರಿತೇಶ್ ಖಾತೆಗೆ ವರ್ಗಾಯಿಸಿ, ವಿಶ್ವಾಸಘಾತುಕ ಮತ್ತು ವಂಚನೆ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    Post Views: 189

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.