ಮಂಗಳೂರು : ನಗರದ ಹೊರವಲಯದ ಗುರುಪುರ ಕೈಕಂಬದ ವಿಕಾಸನಗರದಲ್ಲಿ ಟೆಂಪೊದಲ್ಲಿ ಅಕ್ರಮ ಸಾಗಾಟದ 300ಕೆಜಿ ಗೋಮಾಂಸ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಜ್ಪೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೂಲರಪಟ್ಣ ನಿವಾಸಿ ಅಝೀಝ್ ಮತ್ತು ಮೂಡುಬಿದಿರೆ ಹಂಡೇಲು ನಿವಾಸಿ ಅಬೂಬಕ್ಕರ್ ಬಂಧಿತ ಆರೋಪಿಗಳು. ಸಾರ್ವಜನಿಕರು ನೀಡಿದ ಮಾಹಿತಿಯಂತೆ ಪೋಲಿಸರು ದಾಳಿ ನಡೆಸಿದ್ದರು. ಈ ವೇಳೆ ರಿಕ್ಷಾಟೆಂಪೊದಲ್ಲಿ ಗೋಮಾಂಸ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ತಕ್ಷಣ ಪೊಲೀಸರು ಮಾಂಸ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳು ಹಾಗೂ ಸುಮಾರು 300 ಕೆ.ಜಿ. ಗೋಮಾಂಸ ಮತ್ತು ಮಾಂಸ ಸಾಗಾಟಕ್ಕೆ ಬಳಸಿದ್ದ ರಿಕ್ಷಾ ಟೆಂಪೋವನ್ನು ಬಜಪೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.