ಕಡಬ: ಅನಾರೋಗ್ಯ ಪೀಡಿತ ವೃದ್ಧೆಯನ್ನು ಹೊತ್ತುಕೊಂಡು ಸಾಗಾಟ ನಡೆಸಿದ ಪ್ರಕರಣದಲ್ಲಿ ಕಡಬ ಸುದ್ದಿಯಾಗಿತ್ತು. ಇದೀಗ ಅದೇ ಮನೆಯಿಂದ ಅಡಿಕೆಯನ್ನು ಜೀಪಿನಲ್ಲಿ ಸಾಗಿಸಿರುವ ಬಗ್ಗೆ ಆರೋಪಿಸಲಾಗಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಳಕ್ಕ ಎಂಬಲ್ಲಿ ರಸ್ತೆ ಸರಿ ಇಲ್ಲದೆ ಕಮಲ ಎಂಬ 70 ವರ್ಷದ ವೃದ್ಧೆಯನ್ನು ಬಡಿಗೆಗೆ ಬಟ್ಟೆ ಕಟ್ಟಿ ಆಸ್ಪತ್ರೆಗೆ ಸಾಗಾಟ ನಡೆಸಿದ್ದರು. ರಸ್ತೆ ಸಂಪರ್ಕ ವ್ಯವಸ್ಥಿತವಾಗಿಲ್ಲ ಎಂಬ ಆರೋಪ ವ್ಯಕ್ತವಾಗಿ ರಾಜ್ಯವಾಪಿ ಸುದಿಯಾಗಿತ್ತು.ಅದರೆ ನಿನ್ನೆ ವೃದ್ಧೆಯ ಮನೆಯಿಂದಲೇ ಅಡಿಕೆಯನ್ನು ಜೀಪಿನಲ್ಲಿ ಸಾಗಾಟ ನಡೆಸಿದ್ದಾರೆಂದು ಕೆಲವರು ತರಾಟೆಗೆ ತೆಗೆದುಕೊಂಡರು.
2-3 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದರೂ ಅಡಿಕೆ ಸಾಗಾಟಕ್ಕೆ ಟೂ ವೀಲ್ ಜೀಪು ಬಳಿಸಿದ್ದೀರಾ,ಮೊನ್ನೆ ವೃದ್ಧೆಯನ್ನು ಹೊತ್ತುಕೊಂಡು ಸಾಗಿಸುತ್ತಾ ರಸ್ತೆ ಸರಿಯಿಲ್ಲ ಎಂದು ಅಪಪ್ರಚಾರ ನಡೆಸಿದ್ದೀರಾ ಎಂದು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿದೆ. ಇದು ಸ್ಥಳೀಯ ಶಾಸಕರ ಹಾಗೂ ನೂಜಿಬಾಳ್ತಿಲ ಗ್ರಾ.ಪಂ. ಬಗ್ಗೆ ತೇಜೋವಧೆ ನಡೆಸಲು ಮೊನ್ನೆ ನಡೆಸಲಾದ ವ್ಯವಸ್ಥಿತ ಸಂಚು ಎಂದು ಸ್ಥಳೀಯ ಗ್ರಾ.ಪಂ.ಸದಸ್ಯರು ಆರೋಪಿಸಿದ್ದಾರೆ.