Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉಡುಪಿ: ನಾಪತ್ತೆಯಾಗಿದ್ದ ಬಾಲಕ 14 ವರ್ಷಗಳ ಬಳಿಕ ಪತ್ತೆ
    ಇತ್ತೀಚಿನ ಸುದ್ದಿ

    ಉಡುಪಿ: ನಾಪತ್ತೆಯಾಗಿದ್ದ ಬಾಲಕ 14 ವರ್ಷಗಳ ಬಳಿಕ ಪತ್ತೆ

    October 11, 2025
    Share

    ಉಡುಪಿ: ಕಳೆದ 14ವರ್ಷಗಳ ಹಿಂದೆ ದತ್ತು ಕೇಂದ್ರದಿಂದ ನಾಪತ್ತೆಯಾಗಿದ್ದ ವಿಶೇಷ ಚೇತನ ಬಾಲಕನನ್ನು ಪತ್ತೆ ಹಚ್ಚುವಲ್ಲಿ ಉಡುಪಿ ಪೊಲೀಸರ ವಿಶೇಷ ತಂಡ ಯಶಸ್ವಿಯಾಗಿದೆ.

    ಉಡುಪಿ ಸಂತೆಕಟ್ಟೆಯಲ್ಲಿರುವ ಶ್ರೀಕೃಷ್ಣಾನುಗ್ರಹ ದತ್ತು ಸ್ವಿಕಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದ ಸಂತೋಷ (12) ಎಂಬ ಬುದ್ದಿ ಮಾಂದ್ಯ ಬಾಲಕ 2011ರ ಫೆ.23ರಂದು ರಾತ್ರಿ ಸಂಸ್ಥೆಯಿಂದ ನಾಪತ್ತೆಯಾಗಿದ್ದನು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಪ್ರಕರಣ ತನಿಖೆಯ ಪತ್ತೆ ಬಗ್ಗೆ ವಿಶೇಷ ತಂಡವನ್ನು ರಚಿಸಲಾಗಿದ್ದು, ಈ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಪ್ರಸ್ತುತ ಕಾರ್ಕಳದ ವಿಜೇತ ವಿಶೇಷ ಮಕ್ಕಳ ಶಾಲೆಯಲ್ಲಿ 2018ರಿಂದ ಆಶ್ರಯ ಪಡೆದಿರುವ ಬಿಪಿನ್ ಎಂಬ ಹೆಸರಿನ ಹುಡುಗ, ನಾಪತ್ತೆಯಾಗಿದ್ದ ಸಂತೋಷನಿಗೆ ಹೋಲಿಕೆಯಾಗುತ್ತಿರುವುದು ಕಂಡುಬಂತು.

    ಈ ಬಗ್ಗೆ ಅವನ ಮುಖ ಚಹರೆ, ಈಗಿನ ಅಂದಾಜು ಪ್ರಾಯ, ಕುಳಿತುಕೊಳ್ಳುವ ಭಂಗಿ, ಸಂಪೂರ್ಣ ಚಲನವಲನದ ಬಗ್ಗೆ ಖಚಿತಪಡೆಸಿಕೊಂಡು, ದೂರುದಾರೆ ಮೆರಿನಾ ಎಲಿಜಬೆತ್ ಹಾಗೂ ಸಂತೋಷ ಕಾಣೆಯಾದ ಸಮಯದಲ್ಲಿ ಆ ಸಂಸ್ಥೆನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಸಿಬ್ಬಂದಿ ಶಾಂತಿ ಜೊತೆಯಾಗಿ ವಿಜೇತ ವಿಶೇಷ ಮಕ್ಕಳ ಶಾಲೆಗೆ ತೆರಳಿ ನೋಡಿದಾಗ ಈತನೇ ಸಂತೋಷ ಎಂಬುದಾಗಿ ದೃಢಪಟ್ಟಿತು.

    ಬಾಲಕನು ಬುದ್ದಿ ಮಾಂಧ್ಯನಾಗಿರುವುದರಿಂದ ಅವನ ಪೋಷಕರು ಪತ್ತೆಯಾಗುವ ತನಕ ವಿಜೇತ ವಿಶೇಷ ಮಕ್ಕಳ ಶಾಲೆಯಲ್ಲಿಯೇ ಪಾಲನೆ ಮಾಡುವ ಬಗ್ಗೆ ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ನೀಡಿದ ಸಲಹೆಯಂತೆ ಆತನನ್ನು ಕಾರ್ಕಳದ ವಿಜೇತ ವಿಶೇಷ ಮಕ್ಕಳ ಶಾಲೆಯಲ್ಲಿಯೇ ಇರಿಸಲಾಗಿದೆ.

    ಈ ಪತ್ತೆ ತಂಡದಲ್ಲಿ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಎಸ್ಸೆಗಳಾದ ಸುದರ್ಶನ ದೊಡಮನಿ, ಈರಣ್ಣ ಶಿರಗುಂಪಿ, ಸಿಬ್ಬಂದಿ ಇಮ್ರಾನ್, ಚೇತನ್, ಸಂತೋಷ ದೇವಾಡಿಗ, ಮಲ್ಲಯ್ಯ ಹಿರೇಮಠ ಇದ್ದರು.

    Post Views: 141

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.