ಧರ್ಮಸ್ಥಳ: ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗು ಕೊಲೆ ಪ್ರಕರಣ ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿದೆ. ರಾಜ್ಯವ್ಯಾಪಿ ಹೋರಾಟದ ಕಿಚ್ಚು ಹೆಚ್ಚಾಗುತ್ತಿದೆ. ಇದೀಗ ಉಜಿರೆ ಯಿಂದ ಬೆಂಗಳೂರಿಗೆ ಸೌಜನ್ಯ ಪರ ನ್ಯಾಯಕ್ಕಾಗಿ ತ್ರಿಶುಲ್ ಸೇನೆ 305ಕಿ.ಮೀ ಪಾದಯಾತ್ರೆ ಕೈಗೊಂಡಿದೆ.
ಬೆಳ್ತಂಗಡಿ ಪಾಂಗಳದ ಸೌಜನ್ಯ ಮನೆಯಿಂದ ಪಾದಯಾತ್ರೆ ಪ್ರಾರಂಭಗೊಂಡಿದೆ. ಸೌಜನ್ಯ ಪೋಷಕರು ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ನಿರಂತರವಾಗಿ 3ದಿನ ಪಾದಯಾತ್ರೆ ಕೈಗೊಂಡಿರುವ ತ್ರಿಶುಲ್ ಸೇನೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ದೊರಕಿಸಲು ತ್ರಿಶುಲ್ ಸೇನೆಯಿಂದ ಸರಕಾರಕ್ಕೆ ಹಕ್ಕೊತ್ತಾಯ ಮಾಡುತ್ತಿದ್ದಾರೆ. ಇನ್ನು ಇದೇ ಆಗಸ್ಟ್ 27ರಂದು ದ.ಕ ಹಾಗು ಉಡುಪಿ ಬಿಜೆಪಿ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯಲಿದೆ. ಆಗಸ್ಟ್ 28ರಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೆಳ್ತಂಗಡಿ ಚಲೋ ನಡೆಯಲಿದೆ. ವಿವಿಧ ಜನ ಪ್ರತಿನಿಧಿಗಳು ಹಾಗು ಸಂಘಟನೆಗಳಿಂದ ಸರಕಾರಕ್ಕೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಲು ಆಗ್ರಹಿಸುತ್ತಿದ್ದಾರೆ.