Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉಳ್ಳಾಲ : ದ್ವಿಚಕ್ರ ವಾಹನ ಕಳ್ಳ ಅರೆಸ್ಟ್..!
    ಇತ್ತೀಚಿನ ಸುದ್ದಿ

    ಉಳ್ಳಾಲ : ದ್ವಿಚಕ್ರ ವಾಹನ ಕಳ್ಳ ಅರೆಸ್ಟ್..!

    December 4, 2023
    Share

    ಉಳ್ಳಾಲ : ದ್ವಿಚಕ್ರ ವಾಹನ ಕಳ್ಳನನ್ನು ಕೊಣಾಜೆ ಪೊಲೀಸರು ಅರೆಸ್ಟ್ ಮಾಡಿದ್ದು, ಆರೋಪಿಯಿಂದ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಉಳ್ಳಾಲ ತಾಲೂಕಿನ ನಿತ್ಯಾನಂದ ನಗರ ಬೆಳ್ಮ ಕನಕೂರು ಸೈಟ್‌ ನಿವಾಸಿ ಹುಸೈನ್ ಜಾಹೀದ್ (24) ಎಂದು ಗುರುತಿಸಲಾಗಿದೆ.

    ಆರೋಪಿ ಅಕ್ಟೋಬರ್ 22 ರಂದು ಅಂಬ್ಲಮೊಗರು ಗ್ರಾಮದ ತಿಲಕನಗರ ಎಂಬಲ್ಲಿನ ಐಸಮ್ಮ ಎಂಬವರ ಹೋಂಡಾ ಡೀಯೋ ಮತ್ತು ನವೆಂಬರ್ 16 ರಂದು ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಬಳಿ ಗುಲಾಮ್ ಹುಸೇನ್ ಎಂಬವರು ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ವಾಹನ ಕಳುವು ಮಾಡಿದ್ದ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ತನಿಖೆಯನ್ನು ಕೈಗೆತ್ತಿಕೊಂಡಿದ್ದ ಕೊಣಾಜೆ ಠಾಣೆಯ ಪಿ.ಎಸ್.ಐ ಅಶೋಕ್‌ ಮತ್ತು ಸಿಬಂದಿ ಈ ಎರಡೂ ಪ್ರಕರಣಗಳ ಆರೋಪಿ ಹುಸೇನ್ ಜಾಹೀದ್ ನನ್ನು ಡಿಸೆಂಬರ್ 1 ರಂದು ಬಂಧಿಸಿ ಅಂಬ್ಲಮೊಗರು ಹಾಗೂ ದೇರಳಕಟ್ಟೆಯಲ್ಲಿ ಕಳ್ಳತನ ಮಾಡಿದ್ದ ಎರಡು ದ್ವಿಚಕ್ರ ವಾಹನಗಳನ್ನು ಹಾಗೂ ನಂಬರ್‌ ಪ್ಲೇಟ್ ಇಲ್ಲದ ಇನ್ನೊಂದು ಕೆಂಪು ಬಣ್ಣದ ಸುಜುಕಿ ಆ್ಯಕ್ಸೆಸ್‌ ಸ್ಕೂಟರನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

    Post Views: 363

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.