ಉಳ್ಳಾಲ: ಸಮುದ್ರಕ್ಕೆ ಸ್ಥಾನಕ್ಕೆ ಇಳಿದ ವ್ಯಕ್ತಿ ಸಮುದ್ರಪಾಲಾಗಿರುವ ಘಟನೆ ಉಳ್ಳಾಲ ಸೋಮೇಶ್ವರ ಸಮುದ್ರತೀರದಲ್ಲಿ ಸಂಭವಿಸಿದೆ.
ಅಂಬಿಕಾರೋಡ್ ನಿವಾಸಿ ಪ್ರಶಾಂತ್ ಬೇಕಲ್ (47) ಮೃತರು.
ಪ್ರಶಾಂತ್ ಉಳ್ಳಾಲ ಸೋಮೇಶ್ವರ ಸಮದ್ರಕ್ಕೆ ಪುತ್ರ ಚಿರಾಯು, ಸಹೋದರ ವರದರಾಜ್ ಅವರ ಪುತ್ರ ವಂದನ್, ಸ್ನೇಹಿತ ಮಣಿ ಎಂಬವರ ಜತೆಗೆ ತೆರಳಿ ಈಜಲು ಸಮುದ್ರಕ್ಕೆ ಇಳಿದಿದ್ದರು.
ಮೃತ ಪ್ರಶಾಂತ್ ಅವರ ಪುತ್ರ ಚಿರಾಯು ಈಜುಪಟುವಾಗಿದ್ದಾನೆ. ತಂದೆ ನೀರುಪಾಲಾಗುವುದು ನೋಡಿ ಹಗ್ಗದ ಸಹಾಯದಿಂದ ಅಲೆಗಳ ನಡುವಿನಿಂದ ಮೇಲಕ್ಕೆತ್ತಿದ್ದಾನೆ. ಆದರೆ ಪ್ರಶಾಂತ್ ಮೃತಪಟ್ಟಿದ್ದಾರೆ