ಮಂಗಳೂರು: ಉದ್ಯಮಿಯೊಬ್ಬರಿಗೆ ಭೂಗತ ಪಾತಕಿಯಿಂದ ಇಂಟರ್ ನೆಟ್ ಕರೆ ಮಾಡಿ ಹಣದ ಬೇಡಿಕೆಯನ್ನು ಮಾಡಲಾಗಿದ್ದು,ಈ ಬಗ್ಗೆ ಬಜಪೆ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಮಿ ರೋನಾಲ್ಡ್ ಫೆರ್ನಾಂಡಿಸ್ ಅವರಿಗೆ ಭೂಗತ ಪಾತಕಿ ಕಲಿ ಯೋಗೀಶ್ ಹೆಸರಿನಲ್ಲಿ ಇಂಟರ್ ನೆಟ್ ಮೂಲಕ ಕರೆಮಾಡಿ 3 ಕೋಟಿಯ ಹಣದ ಬೇಡಿಕೆಯನ್ನು ನೀಡಿದ್ದು ಮಾತ್ರವಲ್ಲದೆ ಮನೆಯಲ್ಲಿರುವ ಎಲ್ಲರನ್ನು ಕೊಲೆ ಮಾಡುದಾಗಿ ಬೆದರಿಕೆ ಹಾಕಲಾಗಿದೆ.
ಸಾಮಾಜಿಕ ,ಶೈಕ್ಷಣಿಕ,ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅವರು ಕೆಂಪುಕಲ್ಲಿನ ಕೋರೆ ಸಹಿತ ಇನ್ನಿತರ ಉದ್ಯಮವನ್ನು ನಡೆಸುತ್ತಿದ್ದಾರೆ.
ಈ ಬಗ್ಗೆ ಬಜಪೆ ಪೊಲೀಸ್ ಠಾಣಿಯಲ್ಲಿ ಪ್ರಕರಣ ಕೂಡ ದಾಖಲಾಗಿದ್ದು,ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.