ಉಪ್ಪಿನಂಗಡಿ: ಆಟೊ ರಿಕ್ಷಾ ಹಾಗೂ ಲಾರಿಯ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೊದಲ್ಲಿದ್ದ ಮೂವರು ಗಂಭೀರ ಗಾಯಗೊಂಡ ಘಟನೆ ಕುಮಾರಧಾರಾ ನದಿಯ ಸೇತುವೆಯಲ್ಲಿ ನಡೆದಿದೆ. ಗಾಯಗೊಂಡವರನ್ನು ಆಟೊ ಚಾಲಕ ಪ್ರಾಂಕ್ಲಿನ್ ಗ್ಲನ್ ಲೋಬೋ(23), ಪ್ರಯಾಣಿಕರಾದ ಉತ್ತರ ಭಾರತ ಮೂಲದ ಅಜಯ್ ಖಾರ್ವಾಲ್ (17), ಪೂರನ್ ಸಿಂಗ್ ಖಾರ್ವಾಲ್ (29) ಎಂದು ಗುರುತಿಸಲಾಗಿದೆ. ಪೆರ್ನೆಯ ಪ್ರಾಂಕ್ಲಿನ್ ಗ್ಲನ್ ಲೋಬೊ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಅಟೋ ರಿಕ್ಷಾಕ್ಕೆ ಲಾರಿಯೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಉಪ್ಪಿನಂ ಗಡಿಯ ಆ್ಯಂಬುಲೆನ್ಸ್ ಚಾಲಕ ಫಾರೂಕ್ ಜಿಂದಗಿ ಪುತ್ತೂರು ಆಸ್ಪತ್ರೆಗೆ ರವಾನಿಸುವಲ್ಲಿ ಸಹಕರಿಸಿದ್ದಾರೆ.