ಮಂಗಳೂರು :ಪ್ರೇಮಿಗಳ ದಿನಾಚರಣೆಗೆ ಅವಕಾಶ ನೀಡಬಾರದಂದು ಎಂದು ಒತ್ತಾಯಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಿಂದು ಜನಜಾಗೃತಿ ಸಮಿತಿಯ ಮಂಗಳೂರು ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯಂದು ಪ್ರೀತಿ,ಪ್ರೇಮದ ಹೆಸರಿನಲ್ಲಿ ಸಮಾಜದಲ್ಲಿ ಅನಾಚಾರಗಳು, ಅತ್ಯಾಚಾರಗಳು ಹೆಣ್ಣುಮಕ್ಕಳನ್ನು ಹೆಚ್ಚಾಗುತ್ತಿದೆ. ಹೆಣ್ಮಕ್ಕಳನ್ನು ಚುಡಾಯಿಸುವುದು, ಕೆಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಘಟನೆಗಳು ನಡೆಯುತ್ತಿದೆ. ಇದು ನಮ್ಮ ಹಿಂದು ಸಂಸ್ಕೃತಿ ಅಲ್ಲ. ಹೀಗಾಗಿ ಇಂತಹ ಪ್ರೇಮಿಗಳ ದಿನಾಚರಣೆಗೆ ಅವಕಾಶ ನೀಡಬಾರದಂದು ಎಂದು ಒತ್ತಾಯಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಿಂದು ಜನಜಾಗೃತಿ ಸಮಿತಿಯ ಮಂಗಳೂರು ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಸಮಿತಿಯ ಭವ್ಯ ಗೌಡ ಅವರು, ಹಿಂದೂ ಸಂಸ್ಕೃತಿ ಅಲ್ಲದ ಪ್ರೇಮಿಗಳ ದಿನಾಚರಣೆಗೆ ಅವಕಾಶ ನೀಡಬಾರದು. ಯುವಜನತೆ ಇಂದು ದಾರಿ ತಪ್ಪುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲೂ ಕೂಡಾ ವಿಶೇಷ ಪೊಲೀಸ್ ದಳ ರಚನೆ ಮಾಡಬೇಕು ಎಂದರು. 2019ರ ಫೆಬ್ರವರಿ 14ರಂದೇ ಪುಲ್ವಾಮಾ ದಾಳಿ ನಡೆದು ನಾವು ಯೋಧರನ್ನು ಕಳೆದುಕೊಂಡಿದ್ದೇವೆ. ಅದೇ ದಿನವನ್ನು ನಾವು ಸೈನಿಕರ ಸ್ಮರಣೀಯ ದಿನವನ್ನಾಗಿ ಮಾಡಲು ಜಾಗೃತಿ ಮೂಡಿಸಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ರಣರಾಗಿಣಿ ಮಹಿಳಾ ಶಾಖೆ, ಸಂಘಟನೆಯ ಪ್ರಮುಖರಾದ ಉಪೇಂದ್ರ ಆಚಾರ್ಯ, ಪ್ರಭಾಕರ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.