ಉಡುಪಿ : ವೀಸಾ ಮಾಡಿಕೊಡುವ ನೆಪದಲ್ಲಿ ವ್ಯಕ್ತಿಯೋರ್ವರಿಂದ ಲಕ್ಷಾಂತರ ರೂ. ಹಣ ವರ್ಗಾಯಿಸಿಕೊಂಡ ಘಟನೆ ನಡೆದಿದೆ. ಜಯರಾಜ ಆಚಾರ್ಯ ಅವರು ವಿದೇಶದಲ್ಲಿ ಉದ್ಯೋಗಕ್ಕಾಗಿ ವಾಟ್ಸ್ ಆ್ಯಪ್ ನಲ್ಲಿ ಕಂಡು ಬಂದ ವೀಸಾ ಮಾಡಿಕೊಡುವ ಪ್ರಕಟನೆಯನ್ನು ಓದಿ ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಆ ವ್ಯಕ್ತಿ ತಾನು ಪಾಸ್‌ಪೋರ್ಟ್ ಮತ್ತು ವೀಸಾ ಮಾಡಿಕೊಡುವ ಏಜೆಂಟ್ ಎಂದು ನಂಬಿಸಿ ವಂಚನೆ ಮಾಡಿದ್ದಾನೆ. ಆನ್‌ಲೈನ್ ಮೂಲಕ ಇಂಟರ್ ವ್ಯೂ ನಡೆಸಿ, ವೀಸಾ ಮಾಡಿಸಲು ಚಾರ್ಜ್ ಮತ್ತು ಇನ್ನಿತರ ಖರ್ಚುಗಳ ನೆಪ ಹೇಳಿ ಜನವರಿ 9ರಿಂದ ಫೆಬ್ರವರಿ 8ರವರೆಗೆ ಒಟ್ಟು 6,90,343 ರೂ.ಗಳನ್ನು ಆರೋಪಿಗಳ ವಿವಿಧ ಖಾತೆಗೆ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ವೀಸಾವನ್ನೂ ನೀಡದೆ ಹಣವನ್ನೂ ವಾಪಸು ನೀಡದೇ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.