ವಿಟ್ಲ: ಸಾಲೆತ್ತೂರು-ವಿಟ್ಲ ರಸ್ತೆಯ ಕಡಂಬು ಎಂಬಲ್ಲಿ ವಿಟ್ಲದ ಕಡೆಗೆ ತೆರಳುತ್ತಿದ್ದ ಹೋಂಡಾ ಡಿಯೋ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಮಾರುತಿ ಓಮ್ನಿ ಕಾರನ್ನು ಸಾರ್ವಜನಿಕರು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ ಘಟನೆ ನಡೆದಿದೆ.
ಎರಡು ದಿನದ ಹಿಂದೆ ಕೆ.ಎ.19ಎಮ್.ಹೆಚ್ 1518 ನಂಬರಿನ ಮಾರುತಿ ಓಮ್ನಿ ಕಾರು ಕಡಂಬು ಸಮೀಪ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಘಟನೆಯ ಮಾಹಿತಿ ಸಹಿತ ಓಮ್ನಿ ಕಾರಿನ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಫೆ.6ರಂದು ವಿಟ್ಲ-ಸಾಲೆತ್ತೂರು ರಸ್ತೆಯಲ್ಲಿ ಓಮ್ನಿ ಕಾರನ್ನು ಕಂಡ ಸಾರ್ವಜನಿಕರು ಬೆನ್ನಟ್ಟಿದ್ದು, ಆದರೆ ಕಾರು ಸಾರ್ವಜನಿಕರ ಕಣ್ತಪ್ಪಿಸಿ ಹೋಗಿದೆ. ಹುಡುಕಾಟ ಮುಂದುವರಿಸಿದಾಗ, ತಾಮರಾಜೆ ಎಂಬಲ್ಲಿ ಮನೆಯೊಂದರ ಅಂಗಳದಲ್ಲಿ ಕಾರು ಕಂಡುಬಂದಿದ್ದು, ಬೀಡಿ ಗುತ್ತಿಗೆದಾರ ಇಸ್ಮಾಯಿಲ್ ಮಾಲಿಕತ್ವದ ಕಾರು ಎಂದು ತಿಳಿದು ಬಂದಿದೆ. ಸಾರ್ವಜನಿಕರು ಮಾಹಿತಿಯ ಮೇರೆಗೆ ತಕ್ಷಣ ಪೊಲೀಸರು ವಾಹನವನ್ನು ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.




