Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ದ.ಕ ಜಿಲ್ಲೆಯ ಯಾವ ಮೂಲೆಗೂ ನೀರಿನ ಸಮಸ್ಯೆ‌ ಆಗದಂತೆ ನೋಡುತ್ತೇವೆ: ಜಿಲ್ಲಾಧಿಕಾರಿ
    ಇತ್ತೀಚಿನ ಸುದ್ದಿ

    ದ.ಕ ಜಿಲ್ಲೆಯ ಯಾವ ಮೂಲೆಗೂ ನೀರಿನ ಸಮಸ್ಯೆ‌ ಆಗದಂತೆ ನೋಡುತ್ತೇವೆ: ಜಿಲ್ಲಾಧಿಕಾರಿ

    June 7, 2023
    Share

    ಮಂಗಳೂರು: ಮಳೆಯ ಅಭಾವದಿಂದ ದಕ್ಷಿಣ ಕನ್ನಡದ ಹಲವೆಡೆ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಈ ಬಗ್ಗೆ ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಪ್ರತಿಕ್ರಿಯೆ ನೀಡಿದ್ದಾರೆ. ದ.ಕ ಜಿಲ್ಲೆಯಲ್ಲಿ ಪ್ರತೀ ವರ್ಷ ಜೂನ್ ತಿಂಗಳಲ್ಲಿ ಮಳೆ‌ ಬರಬೇಕಿತ್ತು.

    ತಡವಾದ ಕಾರಣ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ‌ ತಲೆದೂರಿದೆ. ಆದರೂ ಜಿಲ್ಲಾಡಳಿತ ಶಾಲಾ, ಕಾಲೇಜು ಸೇರಿ ಎಲ್ಲಾ ಕಡೆ ನೀರು ಪೂರೈಸಲು ವ್ಯವಸ್ಥೆ ಮಾಡಿದೆ. ಸದ್ಯ ತುಂಬೆ ಡ್ಯಾಂನಲ್ಲಿ 1.86 ಮೀ. ಮಟ್ಟಕ್ಕೆ ನೀರು ಇಳಿದಿದೆ. ಇದರಿಂದ ಮಂಗಳೂರು ನಗರಕ್ಕೆ ನೀರಿನ ಸಮಸ್ಯೆ ಇದೆ ಅಂತ ಪಾಲಿಕೆ ಕಮಿಷನರ್ ಹೇಳಿದ್ದರು. ಹೀಗಾಗಿ ಎಎಂಆರ್ ಡ್ಯಾ ನಿಂದ ಈಗಾಗಲೇ ನೀರು ಬಿಡಲಾಗಿದೆ. ಇವತ್ತು ಸಂಜೆಯೊಳಗೆ ಆ ನೀರು ತುಂಬೆ ಡ್ಯಾಂ ಬಂದು ಸೇರಲಿದೆ. ತುಂಬೆ ಡ್ಯಾಂನಲ್ಲಿ 4 ಮೀ ನೀರು ತುಂಬಲಿದೆ ಎಂದರು. ಕಳೆದ ಎರಡು ದಿನ ಪೈಪ್ ಲೈನ್ ಹಾಗೂ ಮೋಟಾರ್ ರಿಪೇರಿ ಕೆಲಸ ಇತ್ತು. ಹೀಗಾಗಿ ಎರಡು ದಿನ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಪೈಪ್ ಲೈನ್ ಕಾಮಗಾರಿ ಹಿನ್ನೆಲೆಯಲ್ಲಿ ನೀರಿನ ಪೂರೈಕೆ ಆಗಿಲ್ಲ. ಹೀಗಾಗಿ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಆದರೆ ಅವರು ತಮ್ಮ ಖಾಸಗಿ ಬೋರ್ ವೆಲ್ ಮೂಲಕ ನೀರಿನ ವ್ಯವಸ್ಥೆ ಮಾಡಬೇಕು ದ.ಕ ಜಿಲ್ಲಾಡಳಿತ ಕೂಡ ಈ ನಿಟ್ಟಿನಲ್ಲಿ ನೆರವು ನೀಡಲಿದೆ. ಜಿಲ್ಲೆಯ ಯಾವ ಮೂಲೆಗೂ ನೀರಿನ ಸಮಸ್ಯೆ‌ ಆಗದಂತೆ ನೋಡುತ್ತೇವೆ. ಪಾಲಿಕೆ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕವೂ ನೀರಿನ ಪೂರೈಕೆ ಆಗುತ್ತಿದೆ ಎಂದರು.

    ರಾಜ್ಯ ಮತ್ತು ಕೇಂದ್ರದ ಹವಾಮಾನ ವರದಿಯಂತೆ ಮೂರ್ನಾಲ್ಕು ದಿನ ಮಳೆ ಆಗುವ ಮುನ್ಸೂಚನೆ ಸಿಕ್ಕಿದೆ. ಮುಂದಿನ ಮೂರು ದಿನಗಳ ಕಾಲ ಮಳೆಯಾಗುತ್ತದೆ ಅಂತ ಸೂಚನೆ ಸಿಕ್ಕಿದೆ. ಅನಾಹುತ ಆಗದಂತೆ ತಡೆಯಲು ಸರ್ಕಾರ ನಿರ್ದೇಶನ ‌ಕೊಟ್ಟಿದೆ ಈ ನಿಟ್ಟಿನಲ್ಲಿ ನಾವು ಅಲರ್ಟ್ ಆಗಿದ್ದು, ತಯಾರಿ ಆಗಿದೆ ಎಂದರು.

    Post Views: 160

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.