ಕಾರ್ಕಳ: ಭಾರತ- ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಆದರೆ ಶತ್ರು ರಾಷ್ಟ್ರ ಪಾಕಿಸ್ತಾನ ಭಾರತದ ಮೇಲೆ ಸೈಬರ್ ದಾಳಿಯನ್ನೂ ನಡೆಸುತ್ತಿದೆ. ಎಚ್ಚರವಾಗಿರಿ ಎನ್ನುವಂತಹ ಮಾಹಿತಿಯೂ ಇತ್ತೀಚೆಗೆ ಲಭ್ಯವಾಗಿತ್ತು. ಇದರ ಬೆನ್ನಲ್ಲೇ ಕಾರ್ಕಳದ ಬಜಗೋಳಿಯ ಯುವಕನಿಗೆ ಪಾಕಿಸ್ತಾನದಿಂದ ಮೆಸೇಜ್ ಬಂದಿದೆ.

ಪಾಕಿಸ್ತಾನದ ನಂಬರ್ ನಿಂದ ಬಜಗೋಳಿಯ ಸುಶಾಂತ್ ಎಂಬವರಿಗೆ ಹಾಯ್ ಹೌ ಆರ್ ಯು ಎನ್ನುವಂತಹ ಸಂದೇಶ ಬಂದಿದೆ. ಇದು ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿರುವ ಅವರು ಪಾಕಿಸ್ತಾನದಿಂದ ಈ ರೀತಿಯ ಮೆಸೇಜ್ ಗಳು ಬರುತ್ತಿದೆ. ನಾನು ಅದಕ್ಕೆ ಪ್ರತಿಕ್ರಿಯೆ ನೀಡದೆ ಬ್ಲಾಕ್ ಮಾಡಿದ್ದೇನೆ ಎಂದು ಹೇಳಿದರು. ಸಾರ್ವಜನಿಕರು ಈ ರೀತಿಯ ಮೆಸೇಜ್ ಬಂದ್ರೆ ಕೂಡಲೇ ಬ್ಲಾಕ್ ಮಾಡಬೇಕು ಎಂದು ಕಾರ್ಕಳ ಎಎಸ್ ಪಿ ಡಾ. ಹರ್ಷಪ್ರಿಯಂವದ ಸೂಚನೆ ನೀಡಿದ್ದಾರೆ.