Facebook Twitter Instagram
    Sunday, March 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಸುಳ್ಯ : ಪತಿಯಿಂದಲೇ ಪತ್ನಿಗೆ ಚೂರಿ ಇರಿತ..!
    ಇತ್ತೀಚಿನ ಸುದ್ದಿ

    ಸುಳ್ಯ : ಪತಿಯಿಂದಲೇ ಪತ್ನಿಗೆ ಚೂರಿ ಇರಿತ..!

    June 30, 2024
    Share

    ಸುಳ್ಯ : ತವರು ಮನೆಯಲ್ಲಿದ್ದ ಪತ್ನಿಗೆ ಪತಿಯೇ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಜಾಲ್ಸೂರು ಎಂಬಲ್ಲಿ ನಡೆದಿದೆ. ಪತಿಯ ಚೂರಿ ಇರಿತದಿಂದ ಗಾಯಗೊಂಡ ಪತ್ನಿಯನ್ನು ಅಶ್ವಿನಿ ಕೆ ವಿ (25) ಎಂದು ಗುರುತಿಸಲಾಗಿದ್ದು, ಆರೋಪಿ ಪತಿ ನವೀನ್ ಕುಮಾರ್ ಮತ್ತು ಅಶ್ವಿನಿ ಅವರು 6 ವರ್ಷಗಳ ಹಿಂದೆ ವಿವಾಹವಾಗಿದ್ದು, ಆ ಬಳಿಕ ಆತ ವಿನಃ ಕಾರಣ ಕಿರುಕುಳ ನೀಡುತ್ತಾ ಜಗಳವಾಡುತ್ತಾ ಬಂದಿರುವ ಕಾರಣಕ್ಕೆ ಪತ್ನಿ ಅಶ್ವಿನಿ ಕಳೆದ 4 ವರ್ಷಗಳಿಂದ ತನ್ನ ತವರು ಮನೆಯಾದ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ವಿನೋಭನಗರ ಎಂಬಲ್ಲಿ ವಾಸವಾಗಿರುತ್ತಾರೆ. ಅಲ್ಲಿಗೂ ಬರುತ್ತಿದ್ದ ಪತಿ ನವೀನ್ ಕುಮಾ‌ರ್ ವಿನಾಃ ಕಾರಣ ಪತ್ನಿಗೆ ಬಯ್ಯುತ್ತಿದ್ದ ಎನ್ನಲಾಗಿದೆ. ಶುಕ್ರವಾರ ರಾತ್ರಿ (ಜೂನ್ 28) ಪತ್ನಿ ಅಶ್ವಿನಿ ಅವರು ಪಕ್ಕದ ಮನೆಗೆ ಹೋದಾಗ ಅಲ್ಲಿಗೆ ಬಂದ ಆರೋಪಿ ಪತಿ ಆತನಲ್ಲಿದ್ದ ಚೂರಿಯಿಂದ ಪತ್ನಿಗೆ ಹಲ್ಲೆ ನಡೆಸಿದ್ದಾನೆ. ಇರಿತದಿಂದ ಗಾಯಗೊಂಡ ಪತ್ನಿ ಬೊಬ್ಬೆ ಹೊಡೆದಿದ್ದು, ಈ ಸಂದರ್ಭ ಆರೋಪಿ ಪತಿ ಚೂರಿಯನ್ನು ಸ್ಥಳದಲ್ಲಿ ಬಿಸಾಡಿ ಹೋಗಿದ್ದಾನೆ. ಗಾಯಾಳು ಅಶ್ವಿನಿ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ: 89/2024 ಕಲಂ: 324.307 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

    Post Views: 190

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.