ಪಂಜಾಬ್: ಸರ್ಕಾರಿ ಆಸ್ಪತ್ರೆಯೊಂದು ರೋಗಿಗಳಿಗೆ ಎಕ್ಸ್-ರೇ ಯ ಹಾರ್ಡ್ ಕಾಪಿ ಕೊಡದೇ ಅದರ ಫೋಟೋವನ್ನು ಮೊಬೈಲ್ ಫೋನ್‌ನಲ್ಲೇ ಕ್ಲಿಕ್ಕಿಸಿ ಕೊಟ್ಟಿರುವ ಘಟನೆ ಪಂಜಾಬ್‌ನಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಪಂಜಾಬ್‌ನ ಪಟಿಯಾಲಾ ನಗರದ ಆಸ್ಪತ್ರೆಯ ಸರ್ಕಾರಿ ನೌಕರರು ʻಸ್ಮಾರ್ಟ್‌ಫೋನ್ ಹೊಂದಿರುವವರು ಮಾತ್ರ ಎಕ್ಸ್-ರೇಗಾಗಿ ಬರಬೇಕು.
ಎಕ್ಸ್-ರೇ ಸ್ಕ್ಯಾನಿಂಗ್ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ತನ್ನಿʼ ಎಂದು ಪ್ರಕಟಣೆ ಮಾಡಿದ್ದರು ಎನ್ನಲಾಗಿದೆ.
ಸಿಎಂ ಭಗವಂತ್ ಮಾನ್ ಅವರು ಪಂಜಾಬ್‌ನ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಹಾತೊರೆಯುತ್ತಿದ್ದರೆ, ಇತ್ತ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಹಾರ್ಡ್ ಕಾಪಿ ವರದಿ ನೀಡುವ ಬದಲು ಸ್ಮಾರ್ಟ್‌ಫೋನ್‌ಗಳಲ್ಲಿ ಎಕ್ಸ್-ರೇಗಳ ಚಿತ್ರಗಳನ್ನು ಕ್ಲಿಕ್ಕಿಸಿ ಕೊಡುವ ಮೂಲಕ ವಿಲಕ್ಷಣವಾಗಿ ವರ್ತಿಸುತ್ತಿವೆ.
ಆಸ್ಪತ್ರೆಯಲ್ಲಿ ಎಕ್ಸ್-ರೇ ಫಿಲ್ಮ್ ಖಾಲಿಯಾದಾಗ ಅವರು ಸಾಮಾನ್ಯವಾಗಿ ಈ ಘೋಷಣೆ ಮಾಡುತ್ತಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿಕೊಂಡಿದ್ದಾರೆ. ಈ ವಿಲಕ್ಷಣ ವರ್ತನೆಯು ಬಡ ರೋಗಿಗಳ ಮೇಲೆ ಪರಿಣಾಮ ಬೀರಿದೆ. ಸ್ವಂತ ಸೆಲ್ ಫೋನ್ ಹೊಂದಿರದ ಬಡ ರೋಗಿಗಳನ್ನು ವಿಚಾರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
53 ವರ್ಷದ ಫುಲ್ಜಾರಿಯಾ ದೇವಿ ಎಂಬ ಹೆಸರಿನ ರೋಗಿಯೊಬ್ಬರು ಸ್ಮಾರ್ಟ್‌ಫೋನ್ ಹೊಂದಿಲ್ಲದ ಕಾರಣ ಆಸ್ಪತ್ರೆಯಿಂದ ಚಿಕಿತ್ಸೆ ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಾರೆ. ನಾನು ಕಟ್ಟಡ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಸ್ಮಾರ್ಟ್‌ಫೋನ್ ಖರೀದಿಸುವ ಶಕ್ತಿಯಿಲ್ಲ. ನನ್ನ ಮಗ ಫೋಕಲ್ ಪಾಯಿಂಟ್ ಬಳಿ ಕೆಲಸ ಮಾಡುತ್ತಾನೆ. ಅವನ ಬಳಿ ಮಾತ್ರ ಸ್ಮಾರ್ಟ್ ಫೋನ್ ಇದೆ. ಈಗ ನಾನು ಎಕ್ಸ್-ರೇ ಮಾಡಿಸಲು ನನ್ನ ಮಗನನ್ನು ಇಲ್ಲಿಗೆ ಕರೆತರಬೇಕಾಗಿದೆ ಎಂದಿದ್ದಾರೆ.
ಸ್ಮಾರ್ಟ್‌ಫೋನ್‌ನಲ್ಲಿ ಎಕ್ಸ್-ರೇಗಳನ್ನು ಪರೀಕ್ಷಿಸಲು ನಿಯೋಜಿಸಲಾದ ಹಿರಿಯ ವೈದ್ಯರೊಬ್ಬರು ಮಾತನಾಡಿ, ಇದು ರೋಗಿಗಳನ್ನು ಅವ್ಯವಸ್ಥೆಗೆ ತರುವ ದುರದೃಷ್ಟಕರ ಪರಿಸ್ಥಿತಿ. ಸ್ಮಾರ್ಟ್‌ಫೋನ್‌ಗಳಲ್ಲಿ ಎಕ್ಸ್-ರೇಗಳು ಸರಿಯಾಗಿ ಗೋಚರಿಸುವುದಿಲ್ಲ. ಇದರಿಂದ ರೋಗಿಗಳ ಪರಿಸ್ಥಿತಿಯನ್ನು ಪತ್ತೆಹಚ್ಚಲು ನಮಗೆ ಆಗಾಗ್ಗೆ ತೊಂದರೆ ಉಂಟಾಗಿದೆ ಎಂದು ಹೇಳಿದ್ದಾರೆ.
ವಿರ್ಯಾಸವೆಂದರೆ, ಇತ್ತೀಚೆಗೆ ಆರೋಗ್ಯ ಸಚಿವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಮಾತಾ ಕೌಶಲ್ಯ ರಾಜ್ಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಸಂದೀಪ್ ಕೌರ್ ಆಸ್ಪತ್ರೆಯ ಕ್ರಮವನ್ನು ಶ್ಲಾಘಿಸಿದರು. ಇದು ಹಣವನ್ನು ಹೊರತುಪಡಿಸಿ ಏನನ್ನೂ ಉಳಿಸಲಿಲ್ಲ. ರೋಗಿಯ ಬಳಿ ಸ್ಮಾರ್ಟ್‌ಫೋನ್ ಇಲ್ಲದಿದ್ದರೆ ಎಕ್ಸ್-ರೇ ವಿಭಾಗದಲ್ಲಿನ ನಮ್ಮ ಸಿಬ್ಬಂದಿ ಫೋಟೋವನ್ನು ತೆಗೆದು ತಕ್ಷಣವೇ ವೈದ್ಯರಿಗೆ ಇಮೇಲ್ ಮಾಡುತ್ತಾರೆ ಎಂದಿದ್ದಾರೆ.