ಮಂಗಳೂರು: ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದ ಮೇಲೆ ಕೇವಲ ತುಳುನಾಡಿನ ಇಬ್ಬರು ಮುಖ್ಯ ಮಂತ್ರಿಗಳನ್ನು ಹೊರತು ಪಡಿಸಿ ಬಹುತೇಕ ಬೇರೆಯವರಿಗೇ ಸ್ಥಾನ ಮಾನ ದೊರಕಿದೆ.ಹಾಗೂ ತುಳುನಾಡಿಗೆ ಯಾವುದೇ ಸಹಕಾರ ದೊರಕಿರುವುದಿಲ್ಲ ಹಲವಾರು ಸಮಯದ ಈ ಕೆಳಗಿನ ಬೇಡಿಕೆಗಳು ಇದುವರೆಗೆ ಈಡೇರದೇ ಇರುವುದು ವಿಪರ್ಯಾಸವೇ ಸರಿ.ಈ ಹಿನ್ನೆಲೆ ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಯೋಗೀಶ್ ಶೆಟ್ಟಿ ಜಪ್ಪು ರವರು ತುಳುನಾಡಿನಲ್ಲಿ ಆಯ್ಕೆಯಾದ ಶಾಸಕರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿ ಎಂದರು.
ಹಲವಾರು ಸಮಯಗಳಿಂದ ಇಟ್ಟುಕೊಂಡು ಬಂದತುಳುವರ ಬೇಡಿಕೆಗಳನೆಂದರೆ :
1. ತುಳುನಾಡಿನಲ್ಲಿ ಆಯ್ಕೆಯಾದಜನಪ್ರತಿನಿಧಿಗಳು ತುಳುವಪ್ಪೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕು.
2. ತುಳು ಭಾಷೆಯನ್ನುರಾಜ್ಯದ ಅಧಿಕೃತ ಎರಡನೇ ಭಾಷೆಯಾಗಿ ಘೋಷಿಸುವುದು.
3. ತುಳು ಭಾಷೆಯನ್ನುಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವುದು.
4. ಮಂಗಳೂರಿನಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ
5. ತುಳುನಾಡು ಅಭಿವೃದ್ಧಿ ಪ್ರಾಧಿಕಾರ ರಚನೆ
6. ಕಚೇರಿ, ಕೋರ್ಟುಗಳಲ್ಲಿ ತುಳು ಭಾಷೆಗೆ ಪ್ರಾಧಾನ್ಯತೆ
7. ತುಳುನಾಡಿಗೆ ಪ್ರತ್ಯೇಕ ಹೈಕೋರ್ಟು ಪೀಠ ಸ್ಥಾಪನೆ
8. ತುಳುನಾಡಿನ ಜನಪದಕಲಾವಿದರಿಗೆ ಮಾಶಾಸನ ನೀಡುವುದು
9. ತುಳುನಾಡಿನ ಜಾತಿ, ಮತ, ಭಾಷಾ ಸಾಮರಸ್ಯಕ್ಕೆಒತ್ತುಕೊಡುವುದು
10. ತುಳುನಾಡು ಕೃಷಿ ಅಭಿವೃದ್ಧಿ ಮಂಡಳಿ ರಚನೆ
11. ತುಳುನಾಡಿನ ಸ್ಥಳ ನಾಮಗಳ ಪುನರ್ ಪರಿಶೀಲನೆ
12. ತುಳುನಾಡಿನ ದೈವಾರದನೆಯ ಬಗ್ಗೆ ಜಾನಪದ ವಿಶ್ವವಿದ್ಯಾಲಯ ರಚನೆ
13. ಮಂಗಳೂರನ್ನು ಕೇಂದ್ರಿಕರಿಸಿ ಪ್ರತ್ಯೇಕರೈಲ್ವೇ ವಲಯ ರಚನೆ
14. ತುಳುನಾಡಿನ ಕಲರಿಸಮರ ಕಲೆಪುನಶ್ಚೇತನಕ್ಕೆ ಪ್ರತ್ಯೇಕಅಭಿವೃದ್ಧಿ ನಿಗಮ
15. ತುಳುನಾಡಿನಲ್ಲಿರುವ 14 ಬುಡಕಟ್ಟು ಜನಾಂಗದವರಿಗೆ ಪ್ರತ್ಯೇಕ ನಿಗಮ.
16. ತುಳುನಾಡಿನ ಕರಕುಶಲ ಕಾರ್ಮಿಕರ ಅಭಿವೃದ್ಧಿ ನಿಗಮ
17. ತುಳುನಾಡಿಗೆ ಪ್ರತ್ಯೇಕವಾದ ಪ್ರವಾಸೋದ್ಯಮ ನಿಗಮ
18. ಬಿಡುಗಡೆಯಾಗುವ ಎಲ್ಲಾ ತುಳು ಚಲನಚಿತ್ರಗಳಿಗೆ ಸಬ್ಸಿಡಿ ನೀಡುವುದು
19. ತುಳುನಾಡಿನ ಬ್ಯಾಂಕ್, ಪೊಲೀಸ್ ಇತರ ಸರಕಾರಿ ಕಚೇರಿಗಳಲ್ಲಿ ಶೇಕಡಾ 70 ರಷ್ಟು ಉದ್ಯೋಗ ಹಾಗೂ ಕೈಗಾರಿಕೆಗಳಲ್ಲಿ ಶೇಕಡ 80% ತುಳುವರಿಗೆ ಉದ್ಯೋಗ
ಸೇರಿದಂತೆಬೇಡಿಕೆಗಳನ್ನು ಹಲವಾರು ದಶಕಗಳಿಂದ ಕೇಳುತ್ತಾ ಬಂದಿದ್ದೇವೆ. ಆದರೆ ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿರಾಜಕೀಯ ಪಕ್ಷಗಳಿಂದ ನಿರ್ಲಕ್ಷ್ಯಧೋರಣೆ ಸಾಗುತ್ತಾ ಬಂದಿದೆ.ಇದೇರೀತಿ ಮುಂದೆ ಸಾಗಿದರೆ ತುಳವರೆಲ್ಲರೂ ಒಕ್ಕೂರಲಿನಿಂದ ಪ್ರತ್ಯೇಕರಾಜ್ಯ ಕೇಳುವುದರಲ್ಲಿ ಹೆಚ್ಚು ಸಮಯ ಬೇಕಿಲ್ಲ, ಅಲ್ಲದೆತುಳುವರ ಒಕ್ಕೂರಲಿನ ಬೇಡಿಕೆಗೆ ಪ್ರತ್ಯೇಕ ಪಕ್ಷಗಳನ್ನು ಮಾಡಿಇದಕ್ಕೆಉತ್ತರವನ್ನುಕೊಡಬೇಕಾಗುತ್ತದೆ.ಇದುವರೆಗೆಬೆರಳಣಿಕೆಯ ಜನಪ್ರತಿನಿಧಿಗಳು ತುಳು ಪರವಾಗಿ ಮಾತಾಡಿದ್ದಾರೆಹೊರತುಯಾವುದೇರಾಜಕೀಯ ಪಕ್ಷಗಳು ತಮ್ಮಚುನಾವಣಾ ಪ್ರಣಾಳಿಕೆಯಲ್ಲಿ ತುಳುವರ ಸ್ಥಾನಮಾನಗಳ ಬಗ್ಗೆ ಬೇಡಿಕೆಗಳ ಬಗ್ಗೆ ಚಕಾರಎತ್ತಿಲ್ಲ. ಈ ಬಗ್ಗೆ ರಾಜಕೀಯ ಪಕ್ಷಗಳು ಗಮನಿಸದಿದ್ದಲ್ಲಿತುಳುಪರ ಅಭ್ಯರ್ಥಿಗಳಿಗೆ ಬೆಂಬಲಿಸುವುದು ಸೇರಿದಂತೆದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಹೆಚ್ಚಿನ ವಿಧಾನ ಸಭಾ ಕ್ಷೇತ್ರಗಳಲ್ಲಿ ತುಳುಪರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು ಅನಿವಾರ್ಯವಾಗುತ್ತದೆಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು,ಸಮಾಜ ಸೇವಕರು ಹಾಗೂ ಮಾಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು, ಯೋಗೀಶ್ ಶೆಟ್ಟಿಜಪ್ಪು, ಸ್ಥಾಪಕ ಅಧ್ಯಕ್ಷರು ತುಳುನಾಡ ರಕ್ಷಣಾ ವೇದಿಕೆ,
ಡಾ| ರಾಜೇಶ್ ಆಳ್ವ ಬದಿಯಡ್ಕ, ಅಧ್ಯಕ್ಷರು ತುಳು ವರ್ಲ್ಡ್, ಜಿ.ವಿ.ಎಸ್. ಉಳ್ಳಾಲ್, ಅಧ್ಯಕ್ಷರು ನಮ್ಮ ತುಳುನಾಡ ಟ್ರಸ್ಟ್, ರೋಶನ್ ರೆನೊಲ್ಡ್, ತುಳುಪರ ಹೋರಾಟಗಾರರು, ಜ್ಯೋತಿ ಜೈನ್,ತುಳು ಚಲನಚಿತ್ರ ನಿರ್ಮಾಪಕರು, ಪ್ರಶಾಂತ್ ಭಟ್ ಕಡಬ, ಕೇಂದ್ರಿಯ ಸಂಘಟನೆ ಕಾರ್ಯದರ್ಶಿ ತುಳುನಾಡ ರಕ್ಷಣಾ ವೇದಿಕೆ ಮತ್ತಿತರರು ಉಪಸ್ಥಿತರಿದ್ದರು.