Year: 2023

ಪಂಜಾಬ್‌: ಲುಧಿಯಾನದ ಗಿಯಾಸ್ಪುರ ಪ್ರದೇಶದಲ್ಲಿ ಅನಿಲ ಸೋರಿಕೆ ಘಟನೆಯಿಂದಾಗಿ 9 ಜನರು ಸಾವನ್ನಪ್ಪಿದ್ದು, ಇತರ 10 ಜನರು ಅಸ್ವಸ್ಥರಾಗಿರುವ ಘಟನೆ ವರದಿಯಾಗಿದೆ. ಎನ್‌ಡಿಆರ್‌ಎಫ್ ತಂಡಗಳು ಕಾರ್ಖಾನೆಗೆ ಧಾವಿಸಿದ್ದು, ವೈದ್ಯರ…

ಮಂಗಳೂರು: ವರ್ಕ್‌ ಫ್ರಂ ಹೋಮ್‌ ಹೆಸರಿನಲ್ಲಿ ಲಿಂಕ್‌ ಕಳುಹಿಸಿ ಟಾಸ್ಕ್ ನೀಡಿ 1.45 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ. 20ರಂದು…

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಪ್ರಸಿದ್ಧ ‘ಮನ್‌ ಕೀ ಬಾತ್‌’ನ 100ನೇ ಕಂತಿನ ವಿಶೇಷ ಭಾಷಣ ಭಾನುವಾರ ಬೆಳಿಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ. 2014ರಲ್ಲಿ…

ಪುತ್ತೂರು : ದರ್ಬೆ ಲಿಟ್ಲ್ ಫ್ಲವರ್ ಶಾಲಾ ಸಮೀಪದ ಚೈತ್ರಾ ಇಲೆಕ್ಟ್ರಾನಿಕ್ಸ್ ಕಾರ್ ಆಕ್ಸಸರೀಸ್ ಶಾಪ್ ಮಾಲಕ ರಮೇಶ್ (49 ವ.) ತಮ್ಮ ಶಾಪ್ ನಲ್ಲೇ ನೇಣು…

ಕಡಬ : ಕಡಬ ಠಾಣಾ ವ್ಯಾಪ್ತಿಯ ಆತೂರು ಚೆಕ್ ಪೋಸ್ಟ್ ನಲ್ಲಿ ಪೋಲೀಸರ ಸೂಚನೆಯನ್ನೂ ಲೆಕ್ಕಿಸದೆ ದನದ ಮಾಂಸ ಸಾಗಾಟ ಮಾಡುತ್ತಿದ್ದ ಎನ್ನಲಾದ ಪಿಕ್ ಅಪ್ ವಾಹನವೊಂದು ಪರಾರಿಯಾದ ಘಟನೆ ಶನಿವಾರ ಮಧ್ಯಾಹ್ನದ ವೇಳೆಗೆ ನಡೆದಿದೆ. ಚೆಕ್ಕ್ ಪೋಸ್ಟ್ ನಲ್ಲಿ ಹಾಕಲಾದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಬದಿಗೆ ತಳ್ಳಿರುವುದಲ್ಲದೆ ಕರ್ತವ್ಯದಲ್ಲಿದ್ದ ಪೋಲೀಸ್ ಸಿಬ್ಬಂದಿಯ ಮೇಲೆಯೂ ಪಿಕ್ ಅಪ್ ಹಾಯಿಸಲು ಹೋಗಿದ್ದು, ಪೋಲೀಸ್ ಸಿಬ್ಬಂದಿ ಬದಿಗೆ ಹಾರಿ ಅಪಾಯನ್ನು ತಪ್ಪಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಪರಾರಿಯಾದ ಪಿಕ್ ಅಪ್ ನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೆನ್ನಟ್ಟಿದಾಗ ಚಾಲಕ ಪಿಕ್ ಅಪ್ ನ್ನು ಗೋಳಿತ್ತಡಿ ಸಮೀಪದ ಶಾರದಾನಗರದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಪಿಕ್ ಅಪ್ ನಲ್ಲಿ ದ್ದ ಮಾಂಸದ ಕಟ್ಟನ್ನು ಚಾಲಕ ವಾಹನದಿಂದ ತಪ್ಪಿಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೋಲೀಸರು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ವಾಹನ ಸದಾ ಗೋಮಾಂಸ ಹಾಗೂ ಅಕ್ರಮ ಗೋಸಾಗಾಟ ನಡೆಸುತ್ತಿರುವ ವಾಹನ ಎನ್ನಲಾಗಿದೆ. ಕೊಯಿಲ ಪರಿಸರದಲ್ಲಿ ನಿರಂತರ ಅಕ್ರಮ ಗೋವಧೆ ನಡೆಯುತ್ತಿದ್ದು, ಇಲ್ಲಿಂದಲೇ ವಾಹನಗಳಲ್ಲಿ ಇತರೆಡೆಗೆ ಮಾಂಸ ಸಾಗಾಟವಾಗುತ್ತಿದೆ ಎಂದು ಹೇಳಲಾಗಿದೆ. ವಿಶೇಷವೆಂದರೆ ದಿನಾ ಬೆಳ್ಳಂಬೆಳಿಗ್ಗೆ ವಾಹನಗಳಲ್ಲಿ ಚೆಕ್ ಪೋಸ್ಟ್ ಮೂಲಕವೇ ಹಾದು ಹೋಗುತ್ತದೆ. ಇದರಿಂದಾಗಿ ಪೋಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿರುವ ಸಾರ್ವಜನಿಕರು ಪೋಲೀಸರ ಅನುಮತಿಯಲ್ಲೇ ಅಕ್ರಮ ಗೋಮಾಂಸ ಸಾಗಾಟವಾಗುತ್ತಿದೆ ಎಂದು ಆರೋಪಿಸುತ್ತಾರೆ. ಇಲ್ಲಿ ಪೋಲೀಸರು ಜೀವ ಭಯದಿಂದಲೇ ಕರ್ತವ್ಯ ನಿರ್ವಹಿಸಬೇಕಾಗಿದೆ. ಈ ಹಿಂದೆ ಇದೇ ಆತೂರು ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸನೆ ವೇಳೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಪೋಲೀಸರ ಮೇಲೆ ಹಲ್ಲೆಗೆ ಮುಂದಾಗಿ ಚೆಕ್ ಪೋಸ್ಡ್ ನ ಶೆಡ್ಡನ್ನು ಧ್ವಂಸ ಮಾಡಿದ್ದರು, ಈ ಸಂದರ್ಭದಲ್ಲಿ ಪೋಲೀಸರು ಲಾಟಿ ಚಾರ್ಜ್ ಮಾಡಿ ಕಿಡಿಗೇಡಿಗಳನ್ನು ಚದುರಿಸಿದ್ದರು. ಇದೀಗ ಮತ್ತೊಮ್ಮೆ ಅಕ್ರಮ ವ್ಯವಹಾರದ ವ್ಯಕ್ತಿಗಳಿಂದ ಅಟ್ಟಹಾಸ ನಡೆದಿದೆ. ಇಲ್ಲಿ ಯಾವುದೇ ಜೀವ‌ಭದ್ರತೆಯಿಲ್ಲದೆ ಕರ್ತವ್ಯ ನಿರ್ವಹಿಸುವ ಹೋಂಗಾರ್ಡ್ ಗಳು ಕರ್ತವ್ಯದಲ್ಲಿರುತ್ತಾರೆ. ಅವರಿಗೇನಾದರೂ ಸಮಸ್ಯೆಯಾದರೆ ಅವರ ಕುಟುಂಬವನ್ನು ನೋಡುವವರು ಯಾರು ಎಂದು ಪ್ರಶ್ನಿಸುವ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆರೋಪಿಯನ್ನು ಶೀಘ್ರ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಜರಗಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಬೆಳ್ತಂಗಡಿ:ಖಾಸಗಿ ಕಾಲೇಜೊಂದರಲ್ಲಿ ನೀಟ್‌ ಕೋಚಿಂಗ್ ಗೆ ಎಂದು ಬಂದ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ನಿವಾಸಿ ಉಮೆ ಉಜ್ಮಾ ಎಸ್‌.(19) ಮೃತಪಟ್ಟ…

ಉಡುಪಿ: ಉಡುಪಿ, ದ.ಕನ್ನಡದಲ್ಲಿ ಬೇಸಿಗೆಯ ಕಾಲದಲ್ಲಿ ಬಿಯರ್ ಗೆ ಹೆಚ್ಚು ಡಿಮ್ಯಾಂಡ್ ಇದ್ದು, ಬೇಡಿಕೆಗೆ ಸ್ಪಂದಿಸಿ ಸೂಕ್ತ ರೀತಿಯ ಸರಬರಾಜು ಕಂಪೆನಿಯವರು ಮಾಡುತ್ತಿಲ್ಲ.ಇಲಾಖೆ, ಕೆಎಸ್‌ಬಿಸಿಎಲ್‌ ಹಾಗೂ ಡಿಪೋದವರ ಹತ್ತಿರ…

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳು, ಸ್ಟಾರ್ ಪ್ರಚಾರಕರ ಅಬ್ಬರ ಜೋರಾಗಿದೆ. ಈ ನಡುವೆ ಏಪ್ರಿಲ್ 29ರ ಶನಿವಾರದ ಇಂದಿನಿಂದ ವಿಧಾನಸಭಾ ಚುನಾವಣೆಗೆ ಮತದಾನ ಆರಂಭಗೊಳ್ಳಲಿದೆ. 80…

ನವದೆಹಲಿ: ಯಾವುದೇ ದ್ವೇಷ ಭಾಷಣ ( Hate Speech ) ಮಾಡಿದಾಗ, ಯಾವುದೇ ದೂರುಗಳಿಲ್ಲದೆ ಎಫ್‌ಐಆರ್ ದಾಖಲಿಸಲು ಸ್ವಯಂಪ್ರೇರಿತ ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ (…

ಸವಣೂರು: ತೋಟದ ಕೆರೆಯಲ್ಲಿದ್ದ ಪಾಚಿ ತೆಗೆಯಲು ಹೋದ ಯುವಕ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ತಾಡಿ ಗ್ರಾಮದಿಂದ ವರದಿಯಾಗಿದೆ. ಮೃತಪಟ್ಟ ಯುವಕನನ್ನು…