Facebook Twitter Instagram
    Tuesday, June 9
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಕರಾವಳಿ ಸುದ್ದಿ»ಮಂಗಳೂರು: ವರ್ಕ್‌ ಫ್ರಂ ಹೋಮ್‌ ನೆಪದಲ್ಲಿ 1.45 ಲಕ್ಷ ರೂ. ವಂಚನೆ
    ಕರಾವಳಿ ಸುದ್ದಿ

    ಮಂಗಳೂರು: ವರ್ಕ್‌ ಫ್ರಂ ಹೋಮ್‌ ನೆಪದಲ್ಲಿ 1.45 ಲಕ್ಷ ರೂ. ವಂಚನೆ

    April 30, 2023
    Share

    ಮಂಗಳೂರು: ವರ್ಕ್‌ ಫ್ರಂ ಹೋಮ್‌ ಹೆಸರಿನಲ್ಲಿ ಲಿಂಕ್‌ ಕಳುಹಿಸಿ ಟಾಸ್ಕ್ ನೀಡಿ 1.45 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಫೆ. 20ರಂದು ಫೇಸ್‌ಬುಕ್‌ನಲ್ಲಿ “ವರ್ಕ್‌ ಫ್ರಂ ಹೋಮ್‌ ವಿದ್‌ ಅಮೆಜಾನ್‌’ ಎಂಬ ಜಾಹೀರಾತು ಕಂಡ ವ್ಯಕ್ತಿಯೊಬ್ಬರು ಅದನ್ನು ಕ್ಲಿಕ್‌ ಮಾಡಿದಾಗ ವಾಟ್ಸ್‌ಆ್ಯಪ್‌ ಪೇಜ್‌ ತೆರೆದುಕೊಂಡಿತ್ತು. ಅದರಲ್ಲಿ ಲಿಂಕ್‌ವೊಂದನ್ನು ಕಳುಹಿಸಲಾಗಿತ್ತು. ಫೆ.21ರಂದು ಲಿಂಕ್‌ನ್ನು ಕ್ಲಿಕ್‌ ಮಾಡಿ ಅದರಲ್ಲಿ ತಿಳಿಸಿದಂತೆ ನೋಂದಣಿ ಮೊತ್ತವಾಗಿ 200 ರೂ. ಪಾವತಿಸಿದ್ದರು.

    ಇನ್ನು ಟೆಲಿಗ್ರಾಂನಲ್ಲಿ ದೂರುದಾರ ವ್ಯಕ್ತಿಯನ್ನು ಸಂಪರ್ಕಿಸಿದ ಅಪರಿಚಿತ ವ್ಯಕ್ತಿ ಹಲವು ಟಾಸ್ಕ್‌ಗಳನ್ನು ಪೂರೈಸಿ ಕಮಿಷನ್‌ ಪಡೆದುಕೊಳ್ಳುವಂತೆ ತಿಳಿಸಿ 500 ರೂ. ವರ್ಗಾಯಿಸಿಕೊಂಡಿದ್ದಾರೆ.ಫೆ.23ರಂದು ಟಾಸ್ಕ್ ನೆಪದಲ್ಲಿ ಆದಾಯ ತೆರಿಗೆ, ಕಮಿಷನ್‌ ಮೊದಲಾದ ಹಲವು ಕಾರಣಗಳನ್ನು ತಿಳಿಸಿ ಹಂತ ಹಂತವಾಗಿ ಒಟ್ಟು 1,45,225 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದು, ಈ ಬಗ್ಗೆ ದೂರು ದಾಖಲಾಗಿದೆ.

    Post Views: 237

    Related Posts

    ಮಂಗಳೂರು: ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

    June 9, 2026

    ವೆನ್‌ಲಾಕ್ ಆಸ್ಪತ್ರೆಯಲ್ಲಿ ಕನ್ನಡ ಕಡ್ಡಾಯ: ವೈದ್ಯರಿಗೆ ಅಧೀಕ್ಷಕರ ಕಟ್ಟುನಿಟ್ಟಿನ ಸೂಚನೆ

    June 9, 2026

    ಆಂಬ್ಯುಲೆನ್ಸ್ ಸಿಗದೆ ಹೃದಯಾಘಾತ ರೋಗಿ ಸಾವು; ಕೊಕ್ಕಡ ಆರೋಗ್ಯ ವ್ಯವಸ್ಥೆ ವಿರುದ್ಧ ಆಕ್ರೋಶ

    June 8, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.