Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕಳೆದ ಬಜೆಟ್​ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಿಕ್ಕ7 ಘೋಷಣೆಯಲ್ಲಿ ಈಡೇರಿದ್ದೆಷ್ಟು?
    ಇತ್ತೀಚಿನ ಸುದ್ದಿ

    ಕಳೆದ ಬಜೆಟ್​ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಿಕ್ಕ7 ಘೋಷಣೆಯಲ್ಲಿ ಈಡೇರಿದ್ದೆಷ್ಟು?

    February 13, 2024
    Share

    ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಬಾರಿ ಅಧಿಕಾರಕ್ಕೇರಿದ ಬಳಿಕ ಮಂಡಿಸಿದ ಮೊದಲ ರಾಜ್ಯ ಬಜೆಟ್​ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹಲವು ಘೋಷಣೆಗಳನ್ನು ಮಾಡಿತ್ತು. ಈ ಘೋಷಣೆಯಲ್ಲಿ ಅರ್ಧದಷ್ಟು ಘೋಷಣೆಗಳು ಜಾರಿಯಾಗಿದ್ದರೆ, ಇನ್ನೂ ಹಲವು ಘೋಷಣೆಗಳು ಜಾರಿಗೆ ಬಾಕಿ ಉಳಿದಿವೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ 7 ಘೋಷಣೆಗಳನ್ನು ಮಾಡಲಾಗಿತ್ತು. ಅವುಗಳಲ್ಲಿ 4 ಘೋಷಣೆಗಳು ಮೀನುಗಾರಿಕೆಗೆ ಸಂಬಂಧಪಟ್ಟವುಗಳಾಗಿವೆ.

    ಘೋಷಣೆಗಳ ಸ್ಥಿತಿ ಏನು? :

    1. ಮೀನುಗಾರ ಮಹಿಳೆಯರಿಗೆ ಬ್ಯಾಂಕುಗಳಲ್ಲಿ ಬಡ್ಡಿ ರಹಿತವಾಗಿ ನೀಡುವ ಸಾಲದ ಮಿತಿ 50 ಸಾವಿರದಿಂದ 3 ಲಕ್ಷ ರೂ. ವರೆಗೆ ಹೆಚ್ಚಳ – ಈ ಘೋಷಣೆ ಜಾರಿಯಾಗಿದ್ದು, ಪ್ರಸಕ್ತ ಮೀನುಗಾರ ಮಹಿಳೆಯರು ಬ್ಯಾಂಕುಗಳಲ್ಲಿ ಬಡ್ಡಿ ರಹಿತವಾಗಿ 3 ಲಕ್ಷ ರೂ ವರೆಗೆ ಸಾಲ ಪಡೆಯುತ್ತಿದ್ದಾರೆ.

    2. ಮೀನುಗಾರ ದೋಣಿಗಳಿಗೆ ರಿಯಾಯಿತಿ ದರದ ಡೀಸೆಲ್​​ ಅನ್ನು 2 ಲಕ್ಷ ಕಿಲೋಮೀಟರ್ ವರೆಗೆ ಹೆಚ್ಚಿಸಲು 250 ಕೋಟಿ ರೂ. ನೆರವು – ಈ ಘೋಷಣೆ ಜಾರಿಯಾಗಿದ್ದು, ಮೀನುಗಾರರು 2 ಲಕ್ಷ ಕಿಲೋಮೀಟರ್ ವರೆಗೆ ರಿಯಾಯತಿ ದರದಲ್ಲಿ ಡೀಸೆಲ್ ಪಡೆಯುತ್ತಿದ್ದಾರೆ.

    3. ಮೀನುಗಾರಿಕಾ ದೋಣಿಗಳ ಸೀಮೆ ಎಣ್ಣೆ ಇಂಜಿನ್​ಗಳನ್ನು ಪೆಟ್ರೋಲ್ ಇಂಜಿನ್​ಗಳಾಗಿ ಬದಲಾಯಿಸಲು ತಲಾ 50 ಸಾವಿರ ರೂ. ಸಹಾಯಧನ, 5 ಕೋಟಿ ರೂ. ನೆರವು- ಈ ಘೋಷಣೆ ಜಾರಿಯಾಗಿದ್ದು, ಮೀನುಗಾರರು ಸೀಮೆ ಎಣ್ಣೆ ಇಂಜಿನ್​ಗಳನ್ನು ಪೆಟ್ರೋಲ್ ಇಂಜಿನ್​ಗಳಾಗಿ ಬದಲಾಯಿಸಲು 50 ಸಾವಿರ ಸಹಾಯಧನ ಪಡೆಯುತ್ತಿದ್ದಾರೆ.

    4. ಮೀನುಗಾರಿಕಾ ದೋಣಿಗಳು ತಂಗುವ ಜೆಟ್ಟಿಗಳು ಹಾಗೂ ಬಂದರುಗಳಲ್ಲಿ ಹೂಳು ತೆಗೆಯುವುದು – ಈ ಘೋಷಣೆಯಂತೆ ಬಂದರುಗಳಲ್ಲಿ ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ.

    5. ಧರ್ಮಸ್ಥಳದಲ್ಲಿ airstrip ಅಭಿವೃದ್ದಿಪಡಿಸಲು ಕ್ರಮ – ಈ ಘೋಷಣೆಗೆ ಸಂಬಂಧಿಸಿದಂತೆ ಜಾಗದ ಸರ್ವೇ ಕಾರ್ಯ ಮಾತ್ರ ನಡೆದಿದ್ದು, ಮುಂದಿನ ಪ್ರಕ್ರಿಯೆಗಳು ಆರಂಭವಾಗಿಲ್ಲ.

    6. ಕಡಲತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಬೀಚ್ ಪ್ರವಾಸೋದ್ಯಮ ಕಾರ್ಯಪಡೆ ರಚನೆ, ಅಂತಾರಾಷ್ಟ್ರೀಯ ಸರ್ಫಿಂಗ್ ತಾಣವಾಗಿ ಸಸಿಹಿತ್ಲು ಕಡಲ ತೀರದ ಅಭಿವೃದ್ದಿ- ಈ ಘೋಷಣೆ ಕಾರ್ಯ ಇನ್ನೂ ಆರಂಭವಾಗಿಲ್ಲ.

    7. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಕ್ರಮ – ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಟ್ಟಡ ಕಾಮಗಾರಿ ಸ್ಥಗಿತಗೊಂಡು ಎರಡ್ಮೂರು ವರ್ಷಗಳು ಸಂದಿದೆ. ಬಜೆಟ್​ನಲ್ಲಿ ಈ ಘೋಷಣೆಯಾದರೂ ಯಾವುದೇ ಕ್ರಮಗಳು ಆಗಿಲ್ಲ.

    ಇದೇ ವೇಳೆ, ಬಜೆಟ್​ನಲ್ಲಿ ಘೋಷಣೆಯಾದ ಮೀನುಗಾರಿಕಾ ಯೋಜನೆಗಳ ಬಗ್ಗೆ ಮೀನುಗಾರ ಮುಖಂಡ ರಾಜರತ್ನ ಸನಿಲ್ ಮಾತನಾಡಿ, ಕಳೆದ ಬಾರಿ ಬಜೆಟ್ ನಲ್ಲಿ ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದೆವು. ಅದಕ್ಕೆ ಕಳೆದ ಬಜೆಟ್ ನಲ್ಲಿ ಸರಕಾರದ ಹಣ ಇಟ್ಟಿದ್ದಾರೆ. ಎಲ್ಲ ಯೋಜನೆಗಳು ಸರಿಯಾದ ಸಂದರ್ಭದಲ್ಲಿ , ಸರಿಯಾದ ಸಮಯದಲ್ಲಿ ಬಳಕೆಯಾಗಬೇಕು. ಮಂಗಳೂರು ಧಕ್ಕೆ ಬಗ್ಗೆ ಗಮನ ಕಡಿಮೆ ಆಗಿದೆ. ಕಳೆದ ಬಜೆಟ್​ನಲ್ಲಿ ಘೋಷಣೆಯಾದ ಯೋಜನೆಗಳಿಗೆ ಹಣ ಬಂದಿದೆ. ಅದು ಜಾರಿಯಾಗಿದೆ ಎಂದು ಹೇಳಿದರು.

    Post Views: 225

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.