Facebook Twitter Instagram
    Thursday, November 19
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಮೂವರ ಬಂಧನ!! ರೂ. 8,80,000 ಮೌಲ್ಯದ 88 ಗ್ರಾಂ MDMA ಮಾದಕ ವಸ್ತು ವಶ
    ಇತ್ತೀಚಿನ ಸುದ್ದಿ

    ಮಂಗಳೂರು: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಮೂವರ ಬಂಧನ!! ರೂ. 8,80,000 ಮೌಲ್ಯದ 88 ಗ್ರಾಂ MDMA ಮಾದಕ ವಸ್ತು ವಶ

    November 19, 2026
    Share

    ಮಂಗಳೂರು: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಮೂವರು ಯುವಕರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಅವರಿಂದ ರೂ. 8,80,000 ಮೌಲ್ಯದ 88 ಗ್ರಾಂ MDMA ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

    ಬಂಧಿತ ಆರೋಪಿಗಳನ್ನು 1) ರಾಶೀದ್ ಖಾನ್ (32), ತಂದೆ ದಿಲ್ ದಾರ್ ಖಾನ್, ವಾಸ ಡೋರ್ ನಂ 5-455 A1, ಬುಂದರ್ ಕುಂಜತ್ತ್ ಬೆಟ್ಟು ಅಂಚೆ, ಉಡುಪಿ ಜಿಲ್ಲೆ 2) ಮೊಹಮ್ಮದ್ ಅನ್ವರ್ (43), ತಂದೆ ಅಬ್ದುಲ್ ಖಾದರ್, ವಾಸ ಡೋರ್ ನಂ 2-23 A, ಕೆತ್ತಿಕಲ್ ಅನೆಬದಿ, ತಿರುವೈಲ್ ಗ್ರಾಮ, ವಾಮಂಜೂರು, ಮಂಗಳೂರು ತಾಲೂಕು 3) ಅಬ್ದುಲ್ ಮಜೀದ್ (40), ತಂದೆ ದಿ. ಎಂ. ಬಿ. ಹುಸೈನ್, ವಾಸ ಡೋರ್ ನಂ 122, ರಫೀಕ್ ಮಂಜಿಲ್, ಕೋಟಿಯಾರ್ ಹೌಸ್, ಸೂರಿಂಜೆ, ಸುರತ್ಕಲ್, ಮಂಗಳೂರು ಎಂದು ಗುರುತಿಸಲಾಗಿದೆ.

    ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರಾಮಾ ನಾಯ್ಕ್ ವೈ. ಅವರು ಸಂಜೆ 4:00 ಗಂಟೆಯಿಂದ ಸಿಬ್ಬಂದಿಗಳೊಂದಿಗೆ ಪಚ್ಚನಾಡಿ ಗ್ರಾಮದ ಪಚ್ಚನಾಡಿ ಡಂಪಿಂಗ್ ಯಾರ್ಡ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸಂಜೆ ಸುಮಾರು 4:45 ಗಂಟೆಗೆ ಬಾತ್ಮೀದಾರರೊಬ್ಬರು KA 19 MK 3297 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ವೆನ್ಯೂ ಕಾರಿನಲ್ಲಿ ಮೂವರು MDMA ಮಾದಕ ವಸ್ತುವನ್ನು ವಶದಲ್ಲಿಟ್ಟುಕೊಂಡು ವಾಮಂಜೂರು ಕಡೆಗೆ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.

    ಅದರಂತೆ ಸಂಜೆ ಸುಮಾರು 5:30 ಗಂಟೆಗೆ ಬೋಂದೇಲ್ ಕಡೆಯಿಂದ ವಾಮಂಜೂರು ಕಡೆಗೆ ಮಾಹಿತಿಯಲ್ಲಿ ತಿಳಿಸಿದ ಕಾರು ಬಂದಿದ್ದು, ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಕಾರಿನಲ್ಲಿ 3 ಜನ ಯುವಕರು ಇದ್ದರು. ವಿಚಾರಣೆ ವೇಳೆ ತಮ್ಮ ಪ್ಯಾಂಟ್ ಕಿಸೆಯಲ್ಲಿ MDMA ಮಾದಕ ವಸ್ತು ಇರುವ ಬಗ್ಗೆ ಅವರು ತಿಳಿಸಿದ್ದಾರೆ.

    ಆರೋಪಿಗಳ ವಶದಿಂದ ಒಟ್ಟು 88 ಗ್ರಾಂ ತೂಕದ ಅಂದಾಜು ಮೌಲ್ಯ ರೂ. 8,80,000/- ಬೆಲೆಬಾಳುವ MDMA ಮಾದಕ ವಸ್ತು, 4 ಮೊಬೈಲ್ ಫೋನ್‌ಗಳು ಅಂದಾಜು ಮೌಲ್ಯ ರೂ. 20,000/-, ನಗದು ಹಣ ರೂ. 18,440/-, ಪಾರದರ್ಶಕ ಜಿಪ್ ಲಾಕ್ ಕವರ್‌ಗಳು -13, ಡಿಜಿಟಲ್ ತೂಕ ಮಾಪನ ಯಂತ್ರ ಮತ್ತು KA 19 MK 3297 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ವೆನ್ಯೂ ಕಾರು -1, ಅಂದಾಜು ಮೌಲ್ಯ ರೂ. 5,00,000/- ನ್ನು ವಶಪಡಿಸಿಕೊಳ್ಳಲಾಗಿದೆ.

    ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    Post Views: 1

    Related Posts

    ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರಾಗಿ ಎನ್. ಶಶಿಕುಮಾರ್ ಅಧಿಕಾರ ಸ್ವೀಕಾರ!

    November 19, 2026

    ಮಂಗಳೂರು: ಮತ್ತೊಂದು ಪೋಕ್ಸೊ ಪ್ರಕರಣದಲ್ಲಿ ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ ಮತ್ತೆ ಅರೆಸ್ಟ್!!

    November 19, 2026

    ಜಾನುವಾರು ಕಳ್ಳತನಕ್ಕೆ ಯತ್ನ: ಇಬ್ಬರು ಅರೆಸ್ಟ್, ಎರಡು ಜಾನುವಾರು ಸಹಿತ ಬೈಕ್ ವಶಕ್ಕೆ

    November 19, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಂಗಳೂರು: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಮೂವರ ಬಂಧನ!! ರೂ. 8,80,000 ಮೌಲ್ಯದ 88 ಗ್ರಾಂ MDMA ಮಾದಕ ವಸ್ತು ವಶ

    November 19, 2026

    ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರಾಗಿ ಎನ್. ಶಶಿಕುಮಾರ್ ಅಧಿಕಾರ ಸ್ವೀಕಾರ!

    November 19, 2026

    ಮಂಗಳೂರು: ಮತ್ತೊಂದು ಪೋಕ್ಸೊ ಪ್ರಕರಣದಲ್ಲಿ ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ ಮತ್ತೆ ಅರೆಸ್ಟ್!!

    November 19, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.