ಮಂಗಳೂರು: ಕೊಂಕಣ ರೈಲು ಮಾರ್ಗದಲ್ಲಿ ಮಂಗಳೂರು ಸಮೀಪದ ತೋಕೂರು ನಿಲ್ದಾಣದ ಪಾಯಿಂಟ್ ನಂ.122ರಲ್ಲಿ ಅ.18ರಿಂದ 20ರವರೆಗೆ ಬದಲಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ಮೂರು ದಿನಗಳಂದು ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟನೆ ತಿಳಿಸಿದೆ. ಅ.18ರ ಬೆಳಗ್ಗೆ 7:15ರಿಂದ 9:45ರವರೆಗೆ ವಿವಿಧ ಕಾಮಗಾರಿ ನಡೆಯಲಿದ್ದು, ಈ ವೇಳೆ ಅ.17ರಂದು ಮುಂಬೈಯಿಂದ ಹೊರಟ ರೈಲು ನಂ.12619 ಲೋಕಮಾನ್ಯ ತಿಲಕ ಮುಂಬೈ ಹಾಗೂ ಮಂಗಳೂರು ಸೆಂಟ್ರಲ್ ನಡುವಿನ ಮತ್ಸ್ಯಗಂಧ ಎಕ್ಸ್ ಪ್ರೆಸ್‌ನ್ನು 30 ನಿಮಿಷಗಳ ಕಾಲ ಸುರತ್ಕಲ್ ನಿಲ್ದಾಣದಲ್ಲಿ ತಡೆ ಹಿಡಿಯಲಾಗುವುದು. ಅ.19ರ ಮುಂಜಾನೆ 6:40ರಿಂದ 9:10ರವರೆಗೆ ವಿವಿಧ ಕಾಮಗಾರಿ ನಡೆಯಲಿದ್ದು, ಈ ವೇಳೆ ಅ.17ರಂದು ಹೊರಟ ರೈಲು ನಂ.16311 ಗಾಂಧಿ ನಗರ ಹಾಗೂ ಕೊಚ್ಚುವೇಲಿ ಎಕ್ಸ್‌ಪ್ರೆಸ್‌ನ್ನು 30 ನಿಮಿಷ ಸುರತ್ಕಲ್ ನಿಲ್ದಾಣದಲ್ಲಿ ತಡೆ ಹಿಡಿಯಲಾಗುವುದು. ಅ.20ರ ಬೆಳಗ್ಗೆ 6:40ರಿಂದ 9:40ರವರೆಗೆ ಕಾಮಗಾರಿ ಹಾಗೂ ಪರೀಕ್ಷೆಗಳು ನಡೆಯಲಿದ್ದು, ಈ ವೇಳೆ ಅ.19ರಂದು ಮುಂಬೈಯಿಂದ ಹೊರಟ ರೈಲು ನಂ.12619 ಲೋಕಮಾನ್ಯ ತಿಲಕ್- ಮಂಗಳೂರು, ಸೆಂಟ್ರಲ್ ಮತ್ಸ್ಯಗಂಧ ಎಕ್ಸ್ ಪ್ರೆಸ್‌ನ್ನು 30 ನಿಮಿಷಗಳ ಕಾಲ ಕುಮಟಾ ಹಾಗೂ ಉಡುಪಿ ನಡುವೆ ತಡೆ ಹಿಡಿಯಲಾಗುವುದು. ಅದೇ ದಿನ ಮುಂಜಾನೆ ಮಡಗಾಂವ್ ನಿಂದ ಹೊರಡುವ ರೈಲು ನಂ. 10107 ಮಡಗಾಂವ್, ಜಂಕ್ಷನ್ – ಮಂಗಳೂರು ಸೆಂಟ್ರಲ್ ಮೆಮು ಎಕ್ಸ್ ಪ್ರೆಸ್ ಸುರತ್ಕಲ್ ನಿಲ್ದಾಣದಲ್ಲಿ ಪ್ರಯಾಣವನ್ನು ಕೊನೆಗೊಳಿಸಲಿದೆ. ಹೀಗಾಗಿ ಸುರತ್ಕಲ್ ಮಂಗಳೂರು ಸೆಂಟ್ರಲ್ ನಡುವಿನ ಸಂಚಾರ ರದ್ದಾಗಲಿದೆ. ಅದೇ ದಿನ ಮಂಗಳೂರು ಸೆಂಟ್ರಲ್ ನಿಂದ ತೆರಳ ಬೇಕಿದ್ದ ರೈಲು ನಂ.10108 ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ಜಂಕ್ಷನ್ ಮೆಮು ಎಕ್ಸ್ ಪ್ರೆಸ್ ತನ್ನ ಪ್ರಯಾಣವನ್ನು ನಿಗದಿತ ಸಂಜೆ 4:34ಕ್ಕೆ ಸುರತ್ಕಲ್ ನಿಲ್ದಾಣದಿಂದ ಪ್ರಾರಂಭಿಸಲಿದೆ. ಹೀಗಾಗಿ ಮಂಗಳೂರು ಸೆಂಟ್ರಲ್- ಸುರತ್ಕಲ್ ನಡುವಿನ ಸಂಚಾರ ರದ್ದಾಗಲಿದೆ. ಅಲ್ಲದೇ ಅ.18ರಂದು ತನ್ನ ಪ್ರಯಾಣ ಆರಂಭಿಸುವ ರೈಲು ನಂ. 22475 ಹಿಸ್ಸಾರ್ – ಕೊಯಮತ್ತೂರು ಎಕ್ಸ್ ಪ್ರೆಸ್‌ನ ಅ.20ರ ಸಂಚಾರವನ್ನು ಕುಂದಾಪುರ ಹಾಗೂ ಸುರತ್ಕಲ್ ನಿಲ್ದಾಣಗಳ ನಡುವೆ 45 ನಿಮಿಷಗಳ ಕಾಲ ತಡೆ ಹಿಡಿಯಲಾಗುತ್ತದೆ ಎಂದು ಕೊಂಕಣ ರೈಲ್ವೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.