Facebook Twitter Instagram
    Saturday, April 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕುಂದಾಪುರ : ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ..!
    ಇತ್ತೀಚಿನ ಸುದ್ದಿ

    ಕುಂದಾಪುರ : ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ..!

    January 15, 2024
    Share

    ಕುಂದಾಪುರ : ಡೀಸೆಲ್ ಹಾಕಲು ಬಂದ ಜೀಪೊಂದು ಪೆಟ್ರೋಲ್ ಬಂಕಿನಲ್ಲಿ ಬೈಕಿಗೆ ತಾಗಿದೆ ಎನ್ನುವ ಕಾರಣಕ್ಕೆ ಮಾತಿಗೆ ಮಾತು ಬೆಳೆದು, ಬಳಿಕ ಮನೆ ಸಮೀಪ ಬಂದು ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಡ್ಕಲ್ ಗ್ರಾಮ ಪಂಚಾಯತ್ ನ ಬೀಸಿನ ಪಾರೆ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ

    ಜಡ್ಕಲ್ ಗ್ರಾಮ ಪಂಚಾಯತ್ ನ ಬೀಸಿನಪಾರೆ ವಾರ್ಡಿನ ಚಂದ್ರಮೋಹನ ನಾಯ್ಕ್ ಎಂಬುವರೇ ಗಂಭಿರ ಗಾಯಗೊಂಡು ಆಸ್ಪತ್ರೆ ಸೇರಿದವರು.ಚಂದ್ರಮೋಹನ್ ನಾಯ್ಕ್ ಭಾನುವಾರ ಸಂಜೆ ಇಡೂರು ಕುಂಜ್ಞಾಡಿಯಲ್ಲಿರುವ ಪೆಟ್ರೋಲ್ ಬಂಕೊಂದಕ್ಕೆ ಡೀಸೆಲ್ ಹಾಕಿಸಿಕೊಳ್ಳಲು ತಮ್ಮ ಜೀಪಿನಲ್ಲಿ ಹೋಗಿದ್ದರು. ಈ ವೇಳೆ ಬಂಕ್‌ನಲ್ಲಿ ನಿಲ್ಲಿಸಿದ್ದ ಬೈಕೊಂದಕ್ಕೆ ಚಂದ್ರಮೋಹನ್ ಅವರ ಜೀಪ್ ತಾಗಿದೆಯೆನ್ನಲಾಗಿದೆ. ಆಗ ಚಂದ್ರಮೋಹನ ಬೈಕ್ ಚಾಲಕನಲ್ಲಿ ಕ್ಷಮೆ ಕೇಳಿದ್ದಾರೆ.ಆದರೆ ಅದನ್ನೇ ಗಂಭಿರವಾಗಿ ತೆಗೆದುಕೊಂಡಿದ್ದ ಬೈಕ್ ಚಾಲಕ ಅವಾಚ್ಯವಾಗಿ ಬೈದು ಗಲಾಟೆ ನಡೆಸಿದ್ದು, ಜೀಪ್ ಚಾಲಕ ಚಂದ್ರಮೋಹನ್ ಡೀಸೆಲ್ ತುಂಬಿಸಿಕೊಂಡು ಬೀಸಿನಪಾರೆಯಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಬಳಿಕ ಮನೆಯಲ್ಲಿ ಜೀಪ್ ನಿಲ್ಲಿಸಿ ಸಮೀಪದಲ್ಲಿದ್ದ ಅಂಗಡಿಗೆ ಬಂದಿದ್ದ ಸಂದರ್ಭ ಸುಮಾರು 35 ಜನರ ತಂಡವೊಂದು ಬಂದು ಗಂಭೀರ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದು, ಜಾತಿನಿಂದನೆ ಮಾಡಿ ಪರಾರಿಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಗಂಭೀರ ಗಾಯಗೊಂಡ ಚಂದ್ರಮೋಹನ್ ನಾಯ್ಕ್ 108 ವಾಹನದಲ್ಲಿ ಬಂದು ರಾತ್ರಿ ಕುಂದಾಪುರ ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

    Post Views: 245

    Related Posts

    ಭಾರತದ ನಕ್ಷೆಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ರಾಜಧಾನಿಗೆ ಸಂಸತ್ತಿನ ಕಾನೂನು ಮಾನ್ಯತೆ

    April 24, 2026

    ಪಾತ್ರೆಯಲ್ಲಿ ಸಿಲುಕಿದ ಪುಟ್ಟ ಮಗು: ಪೊಲೀಸರ ಸಮಯೋಚಿತ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ

    April 24, 2026

    ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು

    April 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.