ಕಾಸರಗೋಡು: ಲಾಡ್ಜ್ ನಲ್ಲಿ ಎಂಡಿಎಂಎ ಮಾದಕ ದ್ರವ್ಯದೊಂದಿಗೆ ಯುವತಿ ಮತ್ತು ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೇಳ ಕಡಂಬಳ ನಿವಾಸಿ ಶೆರೀಫಾ (35) ಮತ್ತು ಕಾಞಂಗಾಡ್ ಕರುವಳಂ ಪೂಮಾಡತ್ ಹೌಸ್ ನಿವಾಸಿ ಮುಹಮ್ಮದ್ ರಾಫಿ (31) ಎಂದು ಗುರುತಿಸಲಾಗಿದೆ. ಕಾಸರಗೋಡು ಟೌನ್ ಸಬ್ ಇನ್ಸ್ಪೆಕ್ಟರ್ ಪಿ.ವಿ. ಮನು ಅವರ ನೇತೃತ್ವದಲ್ಲಿ ಜಿಲ್ಲಾ ಮಾದಕ ದ್ರವ್ಯ ನಿರೋಧಕ ವಿಶೇಷ ಕಾರ್ಯಪಡೆ ಮತ್ತು ನಾರ್ಕೋಟಿಕ್ಸ್ ಸೆಲ್ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.




