Facebook Twitter Instagram
    Saturday, September 12
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ರಸ್ತೆ ವಿಚಾರದಲ್ಲಿ ಗಲಾಟೆ, ವಕೀಲ ದಂಪತಿಗೆ ಹಲ್ಲೆ..!
    ಇತ್ತೀಚಿನ ಸುದ್ದಿ

    ಮಂಗಳೂರು: ರಸ್ತೆ ವಿಚಾರದಲ್ಲಿ ಗಲಾಟೆ, ವಕೀಲ ದಂಪತಿಗೆ ಹಲ್ಲೆ..!

    June 25, 2024
    Share

    ಮಂಗಳೂರು: ನಗರದ ಜೆಪ್ಪಿನಮೊಗರು ಎಂಬಲ್ಲಿ ರಸ್ತೆಯನ್ನು ಅಗೆದು ಹಾಕಿರುವ ವಿಚಾರದಲ್ಲಿ ಗಲಾಟೆ ನಡೆದು ವಕೀಲ ದಂಪತಿಗೆ ಹಲ್ಲೆ ನಡೆಸಿ, ಮಾನಭಂಗಕ್ಕೆ ಯತ್ನಿಸಿದ್ದಾರೆಂದು ಸ್ಥಳೀಯ ವ್ಯಕ್ತಿಯೊಬ್ಬರ ಮೇಲೆ ದೂರು ದಾಖಲಾಗಿದೆ. ವಕೀಲ ದಂಪತಿಯೂ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ವ್ಯಕ್ತಿ ಪ್ರತಿದೂರು ದಾಖಲಿಸಿದ್ದಾರೆ. ನ್ಯಾಯವಾದಿ ಜಯಪ್ರಕಾಶ್ ಅವರ ಮನೆಗೆ ಹೋಗುವ ದಾರಿಯ ವಿಚಾರದಲ್ಲಿ ಸ್ಥಳೀಯ ರಾಬರ್ಟ್ ವೆಲೆರಿಯನ್ ಮೆಂಡೋನ್ಸಾ ಅವರ ನಡುವೆ ತಕಾರಾರು ಎದ್ದಿತ್ತು. ಈ ಬಗ್ಗೆ ಎರಡೂ ಕಡೆಯವರ ನಡುವೆ ಈ ಹಿಂದೆಯೇ ಜಗಳ ನಡೆದಿತ್ತು‌. ಈ ನಡುವೆ ಜಾಗದ ಮಾಲಕ ರಾಬರ್ಟ್ ವೆಲೆರಿಯನ್ ಮೆಂಡೋನ್ಸಾ ಅವರು ಜಯಪ್ರಕಾಶ್ ಅವರ ಮನೆಗೆ ಹೋಗುವ ದಾರಿಯನ್ನು ಅಗೆದು ಹಾಕಿದ್ದರು. ಪರಿಣಾಮ ರಸ್ತೆ ತುಂಬಾ ನೀರು ನಿಂತು ಮೊಣಕಾಲು ಮುಳುಗುವಷ್ಟು ನೀರಿನಲ್ಲಿಯೇ ಜನ ಸಂಚಾರ ಮಾಡಬೇಕಿತ್ತು. ಈ ಬಗ್ಗೆ ವೀಡಿಯೋ ಮಾಡಿ ವಕೀಲ ಜಯಪ್ರಕಾಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ವೀಡಿಯೋದಲ್ಲಿ ಸ್ಥಳೀಯ ಕಾರ್ಪೊರೇಟರ್ ವೀಣಾ ಮಂಗಳ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದ್ದರಿಂದ ಕಾರ್ಪೋರೇಟರ್ ವೀಣಾ ಮಂಗಳ ಅವರು ಜೆಸಿಬಿ ಮೂಲಕ ದುರಸ್ತಿ ಕಾರ್ಯ ನಡೆಸಿದ್ದರು. ವೀಡಿಯೋ ಮಾಡಿರುವ ಬಗ್ಗೆ ರಾಬರ್ಟ್ ವೆಲೆರೀಯನ್ ಮೆಂಡೊನ್ಸಾ ತಕರಾರು ಎತ್ತಿ ಜಯಪ್ರಕಾಶ್ ಅವರಿಗೆ ಹಲ್ಲೆ ನಡೆಸಿದ್ದಾರೆ‌. ಈ ವೇಳೆ ಇಬ್ಬರ ನಡುವೆಯೂ ಹೊಯ್‌ಕೈ ನಡೆದಿದೆ. ಅಲ್ಲದೆ ಜಗಳ ನಿಲ್ಲಿಸಲು ಬಂದಿದ್ದ ವಕೀಲ ಜಯಪ್ರಕಾಶ್ ಅವರ ಪತ್ನಿಯ ಮೇಲೆ ವೆಲೆರಿಯನ್ ಅವರು ಕೈಹಾಕಿ ಮಾನಭಂಗಕ್ಕೆ ಯತ್ನಿಸಿದ ಆರೋಪ ಕೇಳಿ ಬಂದಿದೆ. ಆದ್ದರಿಂದ ಜಯಪ್ರಕಾಶ್ ದಂಪತಿ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಹಲ್ಲೆ , ಮಾನಭಂಗ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆ ಕುರಿತು ಪ್ರತಿದೂರು ದಾಖಲಿಸಿರುವ ಆರೋಪಿ ರಾಬರ್ಟ್ ವಲೇರಿಯನ್ ಮೆಂಡೋನ್ಸಾ ಅವರು ಬಳಿ ಬಂದಿದ್ದ ತನಗೆ ಜಯಪ್ರಕಾಶ್ ಹಾಗೂ ಇತರರು ಹಲ್ಲೆ ನಡೆಸಿದ್ದಾರೆಂದು ಪ್ರತಿದೂರು ದಾಖಲಿಸಿದ್ದಾರೆ. ಜೊತೆಗೆ ರಾಬರ್ಟ್ ವಲೇರಿಯನ್ ಮೆಂಡೋನ್ಸಾ ಹಾಗೂ ಜಯಪ್ರಕಾಶ್ ಅವರು ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.

    Post Views: 325

    Related Posts

    ಉಡುಪಿ: ಪಿಕಪ್ ವಾಹನದಲ್ಲಿ ಮಕ್ಕಳನ್ನು ನಿಲ್ಲಿಸಿಕೊಂಡು ಚಾಲನೆ- ಪಿಕಪ್ ವಾಹನ ವಶಕ್ಕೆ, ಚಾಲಕನ ವಿರುದ್ಧ FIR

    September 12, 2026

    ಉಡುಪಿ: ಸರಕಾರಿ ಜಮೀನಿನಲ್ಲಿ ಸ್ಫೋಟಕ ಬಳಸಿ ಬಂಡೆ ಸ್ಫೋಟ – ಇಬ್ಬರು ಆರೋಪಿಗಳ ಬಂಧನ

    September 12, 2026

    ಬೆಳ್ತಂಗಡಿ: ಬಾವಿಗೆ ಹಾರಿ ಯುವತಿ ಆತ್ಮಹತ್ಯೆ..!!

    September 11, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಉಡುಪಿ: ಪಿಕಪ್ ವಾಹನದಲ್ಲಿ ಮಕ್ಕಳನ್ನು ನಿಲ್ಲಿಸಿಕೊಂಡು ಚಾಲನೆ- ಪಿಕಪ್ ವಾಹನ ವಶಕ್ಕೆ, ಚಾಲಕನ ವಿರುದ್ಧ FIR

    September 12, 2026

    ಉಡುಪಿ: ಸರಕಾರಿ ಜಮೀನಿನಲ್ಲಿ ಸ್ಫೋಟಕ ಬಳಸಿ ಬಂಡೆ ಸ್ಫೋಟ – ಇಬ್ಬರು ಆರೋಪಿಗಳ ಬಂಧನ

    September 12, 2026

    ಬೆಳ್ತಂಗಡಿ: ಬಾವಿಗೆ ಹಾರಿ ಯುವತಿ ಆತ್ಮಹತ್ಯೆ..!!

    September 11, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.