Facebook Twitter Instagram
    Monday, June 15
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉಳ್ಳಾಲ: ಸಮೀರ್ ಹತ್ಯೆ ಪ್ರಕರಣ- ನಾಲ್ವರು ಪೊಲೀಸರ ವಶಕ್ಕೆ..!
    ಇತ್ತೀಚಿನ ಸುದ್ದಿ

    ಉಳ್ಳಾಲ: ಸಮೀರ್ ಹತ್ಯೆ ಪ್ರಕರಣ- ನಾಲ್ವರು ಪೊಲೀಸರ ವಶಕ್ಕೆ..!

    August 14, 2024
    Share

    ಮಂಗಳೂರು ನಗರದ ಉಳ್ಳಾಲ ಸಮೀಪ ಟಾರ್ಗೆಟ್‌ ಇಲ್ಯಾಸ್‌ ಕೊಲೆಗೆ ಪ್ರತಿಕಾರವಾಗಿ ಕೊಲೆಯ ಪ್ರಮುಖ ಆರೋಪಿಯಾಗಿದ್ದ ಕಡಪ್ಪರ ಸಮೀರ್‌ ಹತ್ಯೆಗೆ ಸಂಬಂಧಿಸಿದಂತೆ ಹಲವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ ಪೊಲೀಸರಿಗೆ, ಈ ಕೊಲೆಯಲ್ಲಿ ಐವರು ಭಾಗಿಯಾಗಿರುವುದನ್ನು ಖಚಿತಪಡಿಸಿಕೊಂಡಿದ್ದು, ಇಲ್ಯಾಸ್‌ ಪತ್ನಿಯ ಸಹೋದರ ಮೊಹಮ್ಮದ್‌ ನೌಷದ್‌ ಈ ಕೊಲೆಯ ಪ್ರಮುಖ ರೂವಾರಿಯಾಗಿದ್ದು, ಆತನ ತಂಡ ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ.

    ಕಡಪ್ಪರ ಸಮೀರ್‌ ತನ್ನ ತಾಯಿ ಮತ್ತು ಕುಟುಂಬದ ಸದಸ್ಯರೊಂದಿಗೆ ಪಂಪ್‌ವೆಲ್‌ನಲ್ಲಿರುವ ತನ್ನ ಫ್ಲ್ಯಾಟ್‌ಗೆ ತೆರಳುವ ಸಂದರ್ಭದಲ್ಲಿ ಕಲ್ಲಾಪುವಿನ ವಾಣಿಜ್ಯ ಸಂಕೀರ್ಣದ ಬಳಿ ಫೋನ್‌ನಲ್ಲಿ ಮಾತನಾಡುತ್ತಿದ್ದ ಸಮೀರ್‌ನನ್ನು ಕಾರಿನಲ್ಲಿ ಬಂದಿದ್ದ ಅಪರಿಚಿತರ ತಂಡ ತಲವಾರಿನಿಂದ ತಲೆ ಮತ್ತು ಕುತ್ತಿಗೆಗೆ ಕಡಿದು ಪರಾರಿಯಾಗಿತ್ತು.ಇಲ್ಯಾಸ್‌ ಹತ್ಯೆಗೆ ಪ್ರತಿಕಾರವಾಗಿ ಈ ಕೊಲೆ ನಡೆದಿತ್ತು ಎಂಬ ಪ್ರಾಥಮಿಕ ಮಾಹಿತಿಯಂತೆ ಕಮಿಷನರ್‌ ಅನುಪಮ ಅಗರವಾಲ್‌ ನೇತೃತ್ವದ‌ ತಂಡ ಹಲವರನ್ನು ವಶಕ್ಕೆ ತೆಗೆದುಕೊಂಡು ಕೊಲೆ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.

    ಕೊಲೆ ಕಣ್ಣಾರೆ ಕಂಡಿದ್ದ ನೌಷಾದ್‌: ದಾವೂದ್‌, ಸಮೀರ್‌ ಕಡಪ್ಪರ ನೇತೃತ್ವದಲ್ಲಿ 2018ರ ಜ. 13ರಂದು ಬೆಳ್ಳಂಬೆಳಗ್ಗೆ ಮಂಗಳೂರಿನ ಫ್ಲ್ಯಾಟ್‌ನಲ್ಲಿ ಇಲ್ಯಾಸ್‌ ಮಲಗಿದ್ದ ವೇಳೆಯೇ ನುಗ್ಗಿ ಕೊಲೆ ಮಾಡಿ ಪರಾರಿಯಾಗಿತ್ತು. ಮನೆಯಲ್ಲಿ ಇಲ್ಯಾಸ್‌ ಅವರ ಅತ್ತೆ ಆಸ್ಮತ್‌, ಬಾವ ಮೊಹಮ್ಮದ್‌ ನೌಷದ್‌ ಮತ್ತು ಇಲ್ಯಾಸ್‌ನ ಸಣ್ಣ ಮಗು ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಆದರೆ ಕೊಲೆ ಕೇಸ್‌ 2013ರ ಡಿಸೆಂಬರ್‌ನಲ್ಲಿ ಖುಲಾಸೆಯಾದ ಹಿನ್ನೆಲೆಯಲ್ಲಿ ಇಲ್ಯಾಸ್‌ನ ತಂಡ ಪ್ರತಿಕಾರಕ್ಕಾಗಿ ಕಾದಿತ್ತು. ಕೊಲೆ ನಡೆದ ಸಂದರ್ಭದಲ್ಲಿಯೇ ಇಲ್ಯಾಸ್‌ನ ದೊಡ್ಡ ಬಾವ ಫಾರೂಕ್‌ ಕೊಲೆಗೆ ಸ್ಕಚ್‌ ರೂಪಿಸಿರುವ ಮಾಹಿತಿಯನ್ನು ಪೊಲೀಸರು ಪಡೆದು ಆ ಸಂದರ್ಭದಲ್ಲಿ ಕಾಲಿಗೆ ಶೂಟ್‌ ಮಾಡಿ ಆರೋಪಿಗಳನ್ನು ಹಿಮ್ಮೆಟ್ಟಿಸಿದ್ದರು. ಆದರೆ ಕೊಲೆಯನ್ನು ಕಣ್ಣಾರೆ ಕಂಡಿದ್ದ ನೌಷಾದ್‌ ಈ ಕೊಲೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

    ಈ ಕೊಲೆಯಲ್ಲಿ ನೌಷದ್‌ನೊಂದಿಗೆ ನಾಟೇಕಲ್‌ನ ನಿಯಾಝ್, ಬಜಾಲ್‌ನ ತನ್ವೀರ್‌, ಪಡುಬಿದ್ರೆಯ ಇಕ್ಬಾಲ್‌ ಸಹಕರಿಸಿರುವ ಮಾಹಿತಿಯಂತೆ ಆವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಸಮೀರ್‌ನನ್ನು ಚಿನ್ನ ದರೋಡೆ ವಿಚಾರದಲ್ಲಿ ಉಪ್ಪಳದ ತಂಡ ಕೊಲೆ ನಡೆಸಿರಬೇಕು ಎಂದು ಶಂಕಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಈ ಹತ್ಯೆ ಇಲ್ಯಾಸ್‌ ಕೊಲೆಗೆ ಪ್ರತಿಕಾರವಾಗಿ ನಡೆದಿರುವುದು ದೃಡಪಟ್ಟಿದೆ.

    ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಕೆಲವರ ವಿಚಾರಣೆ ನಡೆಸಿದ್ದಾರೆ.

    Post Views: 217

    Related Posts

    ಪಿಕಪ್ ಪಲ್ಟಿ; ಅಕ್ರಮ ಜಾನುವಾರು ಸಾಗಾಟ ಬಯಲು – ಇಬ್ಬರ ವಿರುದ್ಧ ಪ್ರಕರಣ ದಾಖಲು

    June 15, 2026

    ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕನಿಗೆ ಹೊಸ ಬದುಕು; ಕುಟುಂಬದೊಂದಿಗೆ ಪುನರ್ಮಿಲನ

    June 15, 2026

    ಆರೋಪಿಯಿಂದಲೇ ಹಣಕ್ಕೆ ಬೇಡಿಕೆ ಇಟ್ಟ ಹೆಚ್‌ಎಎಲ್ ಪೊಲೀಸರು: ಪಿಎಸ್ಐ ಸೇರಿ ಮೂವರು ಎಸಿಬಿ ಬಲೆಗೆ

    June 15, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪಿಕಪ್ ಪಲ್ಟಿ; ಅಕ್ರಮ ಜಾನುವಾರು ಸಾಗಾಟ ಬಯಲು – ಇಬ್ಬರ ವಿರುದ್ಧ ಪ್ರಕರಣ ದಾಖಲು

    June 15, 2026

    ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕನಿಗೆ ಹೊಸ ಬದುಕು; ಕುಟುಂಬದೊಂದಿಗೆ ಪುನರ್ಮಿಲನ

    June 15, 2026

    ಆರೋಪಿಯಿಂದಲೇ ಹಣಕ್ಕೆ ಬೇಡಿಕೆ ಇಟ್ಟ ಹೆಚ್‌ಎಎಲ್ ಪೊಲೀಸರು: ಪಿಎಸ್ಐ ಸೇರಿ ಮೂವರು ಎಸಿಬಿ ಬಲೆಗೆ

    June 15, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.