Facebook Twitter Instagram
    Sunday, September 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»Uncategorized»Health : ವೀಳ್ಯದೆಲೆದೊಂದಿಗೆ ಸುಣ್ಣವಲ್ಲ, ಲವಂಗ ಸೇರಿಸಿಕೊಂಡು ತಿಂದು ನೋಡಿ.!
    Uncategorized

    Health : ವೀಳ್ಯದೆಲೆದೊಂದಿಗೆ ಸುಣ್ಣವಲ್ಲ, ಲವಂಗ ಸೇರಿಸಿಕೊಂಡು ತಿಂದು ನೋಡಿ.!

    October 17, 2024
    Share

     ವೀಳ್ಯದೆಲೆಯು ವಿಟಮಿನ್ ಸಿ , ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್, ಕ್ಯಾರೋಟಿನ್ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದ್ದು, ಭೋಜನದ ಬಳಿಕ ವೀಳ್ಯದೆಲೆ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಅದ್ಭುತ ಪ್ರಯೋಜನಗಳಿವೆ.

    ಆದರೆ ವೀಳ್ಯದೆಲೆಯನ್ನು ಸಣ್ಣದೊಂದಿಗೆ ತಿನ್ನುವುದಕ್ಕಿಂತ ಲವಂಗದ ಜೊತೆ ಸೇವಿಸಿದರೆ ಎಷ್ಟೊಂದು ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?

    ಹೊಟ್ಟೆಯ ಹುಣ್ಣು :
    ಗ್ಯಾಸ್ಟ್ರಿಕ್ ಲೋಳೆಯ ಉತ್ಪಾದನೆ ಹೆಚ್ಚಾದಾಗ ಹೊಟ್ಟೆಯ ಹುಣ್ಣು ಗುಣವಾಗಲು ಸಹಾಯ ಮಾಡುತ್ತದೆ. ವೀಳ್ಯದೆಲೆ ಮತ್ತು ಲವಂಗವನ್ನು ಸೇವಿಸಿದಾಗ ಗ್ಯಾಸ್ಟಿಕ್ ಲೋಳೆಯ ಪ್ರಮಾಣ ಹೆಚ್ಚಾಗುತ್ತದೆ. ಇದು ಹೊಟ್ಟೆ ಹುಣ್ಣಿನಿಂದ ಉಮಶಮನ ನೀಡಬಹುದು.

    ತಲೆನೋವಿಗೆ ಮನೆಮದ್ದು :
    ತಜ್ಞರ ಪ್ರಕಾರ ವೀಳ್ಯದೆಲೆ ತಲೆನೋವಿಗೆ ಮನೆಮದ್ದಾಗಿದೆ. ಇದನ್ನು ಲವಂಗದ ಜೊತೆಗೆ ತಿನ್ನುವುದರಿಂದ ಮೈಗ್ರೇನ್‌ನಿಂದ ಸ್ವಲ್ಪ ಮಟ್ಟಿಗೆ ಉಪಶಮನ ದೊರೆಯಬಹುದು.

    ಉಸಿರಾಟದ ತೊಂದರೆ :
    ಲವಂಗ ಮತ್ತು ವೀಳ್ಯದೆಲೆ ಉಸಿರಾಟದ ತೊಂದರೆಯನ್ನು ಕಡಿಮೆ ಮಾಡುತ್ತವೆ. ಇದರ ಆಂಟಿಮೈಕ್ರೋಬಿಯಲ್ ಗುಣಲಕ್ಷಣಗಳು ಕೆಮ್ಮು, ಆಸ್ತಮಾ ಮತ್ತು ಬ್ರಾಂಕೈಟಿಸ್‌ನಂತಹ ಉಸಿರಾಟದ ತೊಂದರೆಗಳಿಂದ ಪರಿಹಾರ ನೀಡಲು ನೆರವಾಗುತ್ತದೆ.

    ಸಮೃದ್ಧ ಆಂಟಿಆಕ್ಸಿಡೆಂಟ್‌ಗಳು :
    ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿರುವ ವೀಳ್ಯದೆಲೆ ಮತ್ತು ಲವಂಗ ಒಟ್ಟಿಗೆ ತಿಂದಾಗ ಆಕ್ಸಿಡೇಟಿವ್ ಒತ್ತಡ ಮತ್ತು ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹೃದಯ ಕಾಯಿಲೆ ಸೇರಿ ಇತರ ಸಮಸ್ಯೆಗಳ ಅಪಾಯ ತಗ್ಗಿಸುವುದಕ್ಕೂ ಇದು ಸಹಾಯಕ.

    ಜೀರ್ಣಕಾರಿ ಆರೋಗ್ಯ :
    ಲವಂಗ ಮತ್ತು ವೀಳ್ಯದೆಲೆ ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತವೆ. ಇದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜಠರಗರುಳಿನ ಆರೋಗ್ಯವನ್ನು ಉತ್ತೇಜಿಸುವ ಮೂಲಕ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಮತ್ತು ಅಜೀರ್ಣದಿಂದ ಪರಿಹಾರವನ್ನು ಒದಗಿಸುತ್ತದೆ.

    ಹಲ್ಲುನೋವು ನಿವಾರಣೆ :
    ಲವಂಗ ಹಲ್ಲು ನೋವಿಗೆ ಉಪಶಮನ ನೀಡುತ್ತದೆ. ವೀಳ್ಯದೆಲೆ ಜೊತೆ ಒಂದು ಲವಂಗ ಸೇರಿಸಿ ತಿಂದಾಗ ಬಾಯಿಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬಾಯಿಯ ಬ್ಯಾಕ್ಟಿರಿಯಾವನ್ನು ಕಡಿಮೆ ಮಾಡಿ ಹಲ್ಲು ನೋವನ್ನು ಇದು ನಿವಾರಿಸುತ್ತದೆ.

    ಖಿನ್ನತೆ ವಿರುದ್ಧ ಹೋರಾಡಲು :
    ವೀಳ್ಯದೆಲೆ ಮತ್ತು ಲವಂಗ ಜಗಿದಾಗ ಉತ್ತಮ ಪರಿಮಳ ಬರುತ್ತದೆ. ಇದು ನರಮಂಡಲದ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಇದರಿಂದ ಸಂತೋಷದ ಭಾವನೆಗಳು ಉಂಟಾಗುತ್ತವೆ. ಇದು ಖಿನ್ನತೆಯಂತಹ ಭಾವ ತಗ್ಗಿಸುವುದಕ್ಕೂ ಸಹಾಯ ಮಾಡುತ್ತದೆ.

    ದುರ್ವಾಸನೆಯಿಂದ ಉಪಶಮನ :
    ಲವಂಗವು ಯುಜೆನಾಲ್ ಎಂಬ ಸಂಯುಕ್ತವನ್ನು ಹೊಂದಿದೆ. ವೀಳ್ಯದೆಲೆ ಸಹ ಬ್ಯಾಕ್ಟಿರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಲವಂಗ ಮತ್ತು ವೀಳ್ಯದೆಲೆಯನ್ನು ಒಟ್ಟಿಗೆ ತಿಂದಾಗ ದುರ್ವಾಸನೆಯಿಂದ ಉಪಶಮನವನ್ನು ನೀಡುತ್ತದೆ.

    ಕೀಲು ನೋವಿನಿಂದ ಪರಿಹಾರ :
    ಲವಂಗದಲ್ಲಿ ಯುಜೆನಾಲ್ ಮತ್ತು ವೀಳ್ಯದೆಲೆಯಲ್ಲಿ ಪ್ಲೇವನಾಯ್ಡ್ ಗಳಂತಹ ಸಂಯುಕ್ತಗಳು ಕಂಡುಬರುತ್ತವೆ. ಇದು ದೇಹದಲ್ಲಿ ಊತವನ್ನು ಕಡಿಮೆ ಮಾಡುತ್ತದೆ. ಸಂಧಿವಾತ, ಕೀಲು ನೋವಿನಿಂದ ಪರಿಹಾರ ನೀಡಲು ಇದು ನೆರವಾಗುತ್ತದೆ.

    Post Views: 316

    Related Posts

    ನ್ಯಾಯಾಲಯಕ್ಕೆ ಹಾಜರಾಗದೆ ಆರು ವರ್ಷಗಳಿಂದ ಪರಾರಿಯಾಗಿದ್ದ ಆರೋಪಿ ವಶಕ್ಕೆ

    May 16, 2026

    ಕಾಪು: ಸ್ಕೂಟಿಗೆ ಬಸ್ ಡಿಕ್ಕಿ- ಬಾಲಕಿ ಸಾವು

    April 22, 2026

    ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ- ಮೆಸ್ಕಾಂ ಸಿಬ್ಬಂದಿ ಮೃತ್ಯು

    March 25, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.