Facebook Twitter Instagram
    Friday, October 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಫ್ಲ್ಯಾಟ್ ನೀಡದೆ ಜಾಗದ ಮಾಲೀಕರಿಗೆ ವಂಚನೆ ಆರೋಪ-ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಕೇಸ್ ದಾಖಲು
    ಇತ್ತೀಚಿನ ಸುದ್ದಿ

    ಮಂಗಳೂರು: ಫ್ಲ್ಯಾಟ್ ನೀಡದೆ ಜಾಗದ ಮಾಲೀಕರಿಗೆ ವಂಚನೆ ಆರೋಪ-ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಕೇಸ್ ದಾಖಲು

    October 23, 2026
    Share

    ಮಂಗಳೂರು: ನಗರದ ಅತ್ತಾವರ ಬಳಿಯ ಮಾರ್ನನಮಿಕಟ್ಟೆ ಸರ್ಕಲ್ ಬಳಿಯಲ್ಲಿ 16.75 ಸೆಂಟ್ಸ್ ಜಾಗವನ್ನು ಬಡ ಕುಟುಂಬದಿಂದ ಅಪಾರ್ಟ್ಮೆಂಟ್ ಕಟ್ಟುವ ಉದ್ದೇಶದಿಂದ ಪಡೆದಿದ್ದ ರಿಯಲ್ ಎಸ್ಟೇಟ್ ಬಿಲ್ಡರ್ ಒಬ್ಬರು ಅಲ್ಲಿ ಕಟ್ಟಡವನ್ನು ನಿರ್ಮಿಸಿದ್ದರೂ, ಕುಟುಂಬಕ್ಕೆ ಒಂದು ಮನೆಯನ್ನೂ ಕೊಡದೆ ಬೀದಿಗೆ ತಳ್ಳುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಬಿಲ್ಡರ್ ಡೊನಾಲ್ಡ್ ಪಿಂಟೋ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

    66 ವರ್ಷದ ದೂರುದಾರ ಮಹಿಳೆ ಮತ್ತು ಅವರ ಕುಟುಂಬಸ್ಥರಿಗೆ ಸೇರಿದ ಭೂಮಿಯನ್ನು 2013ರಲ್ಲಿ ಡೊನಾಲ್ಡ್ ಪಿಂಟೋ ಕರಾರು ಪತ್ರದ ಮೂಲಕ ಪಡೆದಿದ್ದು, ಅದರಲ್ಲಿ ಅಪಾರ್ಟ್ಮೆಂಟ್ ಕಟ್ಟಿ ಎರಡು ಮನೆಗಳನ್ನು ದೂರುದಾರ ವಸಂತ ಎಂಬ ಮಹಿಳೆಗೆ ಮತ್ತು ಇನ್ನೊಂದು ಮನೆಯನ್ನು ಸಂಬಂಧಿ ವಸುಮತಿ ಎಂಬವರಿಗೆ ನೀಡುವುದಾಗಿ ಹೇಳಿ ಕರಾರು ಪತ್ರ ಮಾಡಲಾಗಿತ್ತು. ಈ ಬಗ್ಗೆ 2013ರ ಮೇ 7ರಂದು ರೂಪಾಯಿ 99.90 ಲಕ್ಷಕ್ಕೆ ಕುಟುಂಬಸ್ಥರ ಹೆಸರಲ್ಲಿ ಕರಾರು ಪತ್ರ ಮಾಡಿದ್ದರೂ, ಉಪ ನೋಂದಣಿ ಕಚೇರಿಯಲ್ಲಿ ಮಹಿಳೆಗೆ ತಿಳಿಯದ ಇಂಗ್ಲಿಷ್ ಭಾಷೆಯಲ್ಲಿ ರೂ. 47 ಲಕ್ಷಕ್ಕೆ ಜಾಗ ಮಾರಾಟ ಮಾಡಿದ್ದಾಗಿ ರಿಜಿಸ್ಟರ್ ಮಾಡಿದ್ದರು. ಹಳೆ ಮನೆಯಿಂದ ಎಬ್ಬಿಸಿದ ನಂತರ ಬಡ ಕುಟುಂಬವನ್ನು ಬಾಡಿಗೆ ಮನೆಯಲ್ಲಿ ಇರಿಸಿ ಅದರ ಬಾಬ್ತು ನೀಡುವುದಾಗಿ ಹೇಳಿ ಬಿಲ್ಡರ್ ಪ್ರತ್ಯೇಕ ಕುಳ್ಳಿರಿಸಿದ್ದರು. ಸದ್ರಿ ಜಾಗದಲ್ಲಿ 13 ವರ್ಷಗಳಲ್ಲಿ ನಾಲ್ಕು ಅಂತಸ್ತಿನ ಬೃಹತ್ ಅಪಾರ್ಟ್ಮೆಂಟ್ ಕಟ್ಟಡ ತಲೆಯೆತ್ತಿದ್ದು, ಅದರಲ್ಲಿ 12 ಫ್ಲಾಟ್ ಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ, ಕೆಳ ಅಂತಸ್ತಿನಲ್ಲಿ ರಸ್ತೆಯ ಭಾಗ ಇರುವುದರಿಂದ ಕಮರ್ಶಿಯಲ್ ಉದ್ದೇಶಕ್ಕೆ ಕೊಡಲಾಗಿದೆ. ಈ ವೇಳೆ, ಸಂತ್ರಸ್ತ ಕುಟುಂಬಕ್ಕೆ ಮನೆಯನ್ನು ಕೊಡಿಸುತ್ತೇನೆಂದು ನಂಬಿಸುತ್ತ ಬಂದಿದ್ದು, ಇಲ್ಲಿ ವರೆಗೂ ಯಾವುದೇ ಮನೆಯನ್ನು ನೀಡದೆ ಬಿಲ್ಡರ್ ಡೊನಾಲ್ಡ್ ಪಿಂಟೋ ವಂಚಿಸಿದ್ದಾರೆ. ಅಲ್ಲದೆ, ಈವರೆಗೆ ಕೇವಲ 17 ಲಕ್ಷ ರೂ.ಗಳನ್ನು ಕಂತುಗಳ ರೂಪದಲ್ಲಿ ನೀಡಿದ್ದಾರೆ. ಬಾಡಿಗೆ ಮನೆ ಮಾಡಿಕೊಟ್ಟು ಸದರಿ ಬಾಡಿಗೆಯನ್ನೂ ನೀಡದೆ ವಂಚಿಸಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.

    ವಂಚನೆಯ ಬಗ್ಗೆ ಒಂದು ವರ್ಷದ ಹಿಂದೆಯೇ ಸಂತ್ರಸ್ತ ಕುಟುಂಬಸ್ಥರು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿದ್ದು ಅಹವಾಲು ಹೇಳಿಕೊಂಡಿದ್ದರು. ಇದರಂತೆ ಪೊಲೀಸರು ಬಿಲ್ಡರ್ ವ್ಯಕ್ತಿಯನ್ನು ಪಾಂಡೇಶ್ವರ ಠಾಣೆಗೆ ಕರೆಸಿದ್ದು ಈ ವೇಳೆ ಮೂರು ತಿಂಗಳಲ್ಲಿ ಮನೆಯನ್ನು ಕೊಡಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದರೂ ಅದರಂತೆ ನಡೆದುಕೊಂಡಿಲ್ಲ. ಆದರೂ ಮನೆಯನ್ನು ಕೊಡದೆ ವಂಚಿಸಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದು ಇತ್ತೀಚೆಗೆ ಪಾಂಡೇಶ್ವರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

    ಮಾರ್ನಮಿಕಟ್ಟೆ ವೃತ್ತದ ಬಳಿಯಿರುವ ಈ ಅಪಾರ್ಟ್ಮೆಂಟ್ ಬಳಿ ಪರಿಶೀಲನೆ ನಡೆಸಿದಾಗ, ಸ್ಥಳೀಯರು ಹೇಳುವಂತೆ ಅಲ್ಲಿರುವ 11 ಮನೆಗಳಿಗೆ ಬ್ಯಾಂಕ್ ಸಾಲವಿದ್ದು ಅದನ್ನು ಜಪ್ತಿ ಮಾಡಿದ್ದಾರಂತೆ. ಅಲ್ಲದೆ, ಅಲ್ಲಿಯೇ ಹತ್ತಿರವಿದ್ದ ಡೊನಾಲ್ಡ್ ಪಿಂಟೋ ಅವರ ಸ್ವಂತ ಮನೆಯನ್ನೂ ಬ್ಯಾಂಕ್ ಸಾಲದಿಂದಾಗಿ ಜಪ್ತಿ ಮಾಡಿದ್ದಾರೆ. ಬಿಲ್ಡರ್ ಆಗಿದ್ದ ಡೊನಾಲ್ಡ್ ಪಿಂಟೋ ಸದ್ಯ ನಾಪತ್ತೆಯಾಗಿದ್ದಾರೆ.

    Post Views: 1

    Related Posts

    ನವೆಂಬರ್ 20ರಿಂದ 26 ರವರೆಗೆ ಬೀ-ಹೂಮನ್ ವತಿಯಿಂದ “ಹೂಮ್ಯಾನಿಟಿ ಕಪ್ 2026” ಕ್ರಿಕೆಟ್ ಪಂದ್ಯಾವಳಿ

    October 23, 2026

    ಅ.23 ರಂದು ಬನ ತುಳು ಸಿನೆಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ

    October 22, 2026

    ನೆಲ್ಯಾಡಿ ಬಳಿ ಭೀಕರ ಅಪಘಾತ: ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ, ವಿದ್ಯಾರ್ಥಿ ಸಾವು

    October 22, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಂಗಳೂರು: ಫ್ಲ್ಯಾಟ್ ನೀಡದೆ ಜಾಗದ ಮಾಲೀಕರಿಗೆ ವಂಚನೆ ಆರೋಪ-ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಕೇಸ್ ದಾಖಲು

    October 23, 2026

    ನವೆಂಬರ್ 20ರಿಂದ 26 ರವರೆಗೆ ಬೀ-ಹೂಮನ್ ವತಿಯಿಂದ “ಹೂಮ್ಯಾನಿಟಿ ಕಪ್ 2026” ಕ್ರಿಕೆಟ್ ಪಂದ್ಯಾವಳಿ

    October 23, 2026

    ಅ.23 ರಂದು ಬನ ತುಳು ಸಿನೆಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ

    October 22, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.