Facebook Twitter Instagram
    Monday, June 15
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಟಿಪ್ಪರ್ ನ ಒಳಗೆ ಯುವಕ ನಿಗೂಢ ಸಾವು
    ಇತ್ತೀಚಿನ ಸುದ್ದಿ

    ಮಂಗಳೂರು: ಟಿಪ್ಪರ್ ನ ಒಳಗೆ ಯುವಕ ನಿಗೂಢ ಸಾವು

    January 16, 2025
    Share

    ಮಂಗಳೂರು : ಗಡಿ ಭಾಗದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಯರ್‌ಕಟ್ಟೆಯಲ್ಲಿ ನಿಲ್ಲಿಸಿದ್ದ ಟಿಪ್ಪರ್‌ನೊಳಗೆ ವ್ಯಕ್ತಿಯೊಬ್ಬನ ಮೃತ ದೇಹ ಸಿಕ್ಕಿದ್ದು, ಪೈವಳಿಕೆ ಬಾಯಾರು ಪದವು ಕ್ಯಾಂಪ್ಕೋ ಕಂಪೌಂಡ್‌ ಬಳಿಯ ಮುಹಮ್ಮದ್‌ ಆಶಿಫ್‌ (29) ಎಂದು ಗುರುತಿಸಲಾಗಿದೆ.

    ಬುಧವಾರ ಮುಂಜಾನೆ 3.20ಕ್ಕೆ ಟಿಪ್ಪರ್‌ನೊಳಗೆ ಆಶಿಫ್‌ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದು, ಹೈವೇ ಪಟ್ರೋಲಿಂಗ್‌ ಪೊಲೀಸ್‌ ಹಾಗೂ ಸ್ಥಳೀಯರು ಅಶಿಫ್ ಅವರನ್ನು ಬಂದ್ಯೋ ಡ್‌ನ‌ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಕುಂಬಳೆಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ, ಫೋನ್‌ ಕರೆ ಬಂದ ಹಿನ್ನೆಲೆಯಲ್ಲಿ ಮುಂಜಾನೆ 2 ಕ್ಕೆ ಆಶಿಫ್‌ ತನ್ನ ಟಿಪ್ಪರ್‌ ಸಹಿತ ಮನೆ ಯಿಂದ ತೆರಳಿದ್ದರು.

    ಸಂಬಂಧಿಕನೋರ್ವ ಫೋನ್‌ ಮಾಡಿದ್ದಾಗಿ ಹೇಳಲಾಗಿದೆ. ಉಪ್ಪಳಕ್ಕೆ ತಲುಪಬೇಕಾದ ಸಮಯವಾದರೂ ತಲುಪದ ಕಾರಣ, ಮನೆಯಿಂದ 3 ಕಿ.ಮೀ ದೂರದ‌ ಕಾಯರ್‌ಕಟ್ಟೆಯ ರಸ್ತೆ ಬದಿ ಟಿಪ್ಪರ್‌ ನಿಲ್ಲಿಸಿದ್ದು ಕಂಡುಬಂದಿತು. ಆಶಿಫ್‌ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೃದಯಾಘಾತದಿಂದ ಸಾವು ಸಂಭವಿ ಸಿರಬಹುದು ಎಂದು ಶಂಕಿಸಿದ್ದರೂ ಪ್ರಕರಣ ನಿಗೂಢವಾಗಿದೆ. ಟಿಪ್ಪರ್‌ನೊಳಗೆ ಬೆತ್ತ, ರಕ್ತದ ಕಲೆಗಳು ಪತ್ತೆ ಚಾಲಕನ ಸೀಟಿನ ಬಳಿಯ ಬಾಗಿಲು ಹಾಗೂ ಟಿಪ್ಪರ್‌ನೊಳಗೆ ರಕ್ತದ ಕಲೆಗಳು, ದಾರಿಯಲ್ಲಿ ಒಂದು ಬೆತ್ತ ಕೂಡಾ ಕಂಡುಬಂದಿದೆ. ಆಶಿಫ್‌ ಅವರ ಪಾದರಕ್ಷೆಗಳು ರಸ್ತೆ ಬದಿಯಲ್ಲಿದ್ದವು. ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Post Views: 155

    Related Posts

    ಪಿಕಪ್ ಪಲ್ಟಿ; ಅಕ್ರಮ ಜಾನುವಾರು ಸಾಗಾಟ ಬಯಲು – ಇಬ್ಬರ ವಿರುದ್ಧ ಪ್ರಕರಣ ದಾಖಲು

    June 15, 2026

    ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕನಿಗೆ ಹೊಸ ಬದುಕು; ಕುಟುಂಬದೊಂದಿಗೆ ಪುನರ್ಮಿಲನ

    June 15, 2026

    ಆರೋಪಿಯಿಂದಲೇ ಹಣಕ್ಕೆ ಬೇಡಿಕೆ ಇಟ್ಟ ಹೆಚ್‌ಎಎಲ್ ಪೊಲೀಸರು: ಪಿಎಸ್ಐ ಸೇರಿ ಮೂವರು ಎಸಿಬಿ ಬಲೆಗೆ

    June 15, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪಿಕಪ್ ಪಲ್ಟಿ; ಅಕ್ರಮ ಜಾನುವಾರು ಸಾಗಾಟ ಬಯಲು – ಇಬ್ಬರ ವಿರುದ್ಧ ಪ್ರಕರಣ ದಾಖಲು

    June 15, 2026

    ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕನಿಗೆ ಹೊಸ ಬದುಕು; ಕುಟುಂಬದೊಂದಿಗೆ ಪುನರ್ಮಿಲನ

    June 15, 2026

    ಆರೋಪಿಯಿಂದಲೇ ಹಣಕ್ಕೆ ಬೇಡಿಕೆ ಇಟ್ಟ ಹೆಚ್‌ಎಎಲ್ ಪೊಲೀಸರು: ಪಿಎಸ್ಐ ಸೇರಿ ಮೂವರು ಎಸಿಬಿ ಬಲೆಗೆ

    June 15, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.