Facebook Twitter Instagram
    Monday, June 15
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಆನ್‌ಲೈನ್‌ ಟ್ರೇಡಿಂಗ್‌ ನೆಪದಲ್ಲಿ 32 ಲ. ರೂ. ವಂಚನೆ
    ಇತ್ತೀಚಿನ ಸುದ್ದಿ

    ಮಂಗಳೂರು: ಆನ್‌ಲೈನ್‌ ಟ್ರೇಡಿಂಗ್‌ ನೆಪದಲ್ಲಿ 32 ಲ. ರೂ. ವಂಚನೆ

    November 4, 2025
    Share

    ಮಂಗಳೂರು : ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೆಚ್ಚು ಲಾಭ ದೊರೆಯುವುದಾಗಿ ನಂಬಿಸಿ 32.06 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಸೆ.9ರಂದು ಫೇಸ್‌ಬುಕ್ ನೋಡುತ್ತಿರುವಾಗ ಕಾವ್ಯ ಶೆಟ್ಟಿ ಹೆಸರಿನಲ್ಲಿ ಫ್ರೆಂಡ್ಸ್ ರಿಕ್ವೆಸ್ಟ್ ಬಂದಿದೆ. ಅದನ್ನು ಅಕ್ಸೆಪ್ಟ್ ಮಾಡಿ ಅವರೊಂದಿಗೆ ಚಾಟ್ ಮಾಡಿದ್ದಾರೆ. ಆಕೆ ತಾನು ಮುಂಬಯಿನಲ್ಲಿ ಟ್ರೇಡಿಂಗ್ ಕೆಲಸ ಮಾಡಿಕೊಂಡಿದ್ದು, ಅದರಿಂದ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿದ್ದಾಳೆ.

    ಇದರಿಂದ ಆಸಕ್ತಿಗೊಂಡು ಟ್ರೇಡಿಂಗ್‌ನಲ್ಲಿ ಕೆಲಸ ಮಾಡಲು ಒಪ್ಪಿದ ದೂರುದಾರಿಗೆ ಅನಂತರ ಕಾವ್ಯ ಶೆಟ್ಟಿ ತನ್ನ ವಾಟ್ಸಾಪ್ ನಂಬರ್‌ನಿಂದ ಲಿಂಕ್ ಕಳುಹಿಸಿ ಅದಕ್ಕೆ ಸೇರುವಂತೆ ತಿಳಿಸಿದ್ದಾಳೆ. ಲಿಂಕ್ ಒತ್ತಿದಾಗ ಟ್ರೇಡಿಂಗ್ ಆ್ಯಪ್ ತೆರೆದುಕೊಂಡಿದೆ. ಬಳಿಕ ಹೆಸರು, ಮೇಲ್ ಐಡಿ ಹಾಗೂ ವೈಯಕ್ತಿಕ ವಿವರಗಳನ್ನು ನಮೂದಿಸಿದ್ದಾರೆ.

    ಬಳಿಕ ಟ್ರೇಡಿಂಗ್‌ನಲ್ಲಿ ಷೇರ್ ಖರೀದಿಸಲು 40,000 ರೂ. ಪಾವತಿ ಮಾಡಲು ತಿಳಿಸಿದಂತೆ ಸೆ.13ರಂದು ಪಾವತಿ ಮಾಡಿದ್ದು, ಲಾಭಾಂಶವಾಗಿ 9,504 ರೂ. ಹಣ ಖಾತೆಗೆ ಜಮೆಯಾಗಿದೆ. ಅನಂತರ 2,00,000 ರೂ. ಹಾಕಿದಾಗ ಅದಕ್ಕೆ ಲಾಭಾಂಶವಾಗಿ 23,760 ರೂ. ಜಮೆಯಾಗಿದೆ. ಇದರಿಂದ ನಂಬಿಕೆ ಬಂದಿದೆ. ಹೀಗೆ ಹಂತ ಹಂತವಾಗಿ ಒಟ್ಟು 32,06,880 ರೂ. ಸೆ.13ರಿಂದ ಅ.24ರ ವರೆಗೆ ಕಾವ್ಯ ಶೆಟ್ಟಿ ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿರುತ್ತಾರೆ. ಆದರೆ ಅನಂತರ ಯಾವುದೇ ಲಾಭಾಂಶ ದೊರೆಯದೆ ಹೂಡಿಕೆ ಮಾಡಿದ ಹಣವೂ ವಾಪಾಸು ನೀಡದೆ ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

    Post Views: 120

    Related Posts

    ಪಿಕಪ್ ಪಲ್ಟಿ; ಅಕ್ರಮ ಜಾನುವಾರು ಸಾಗಾಟ ಬಯಲು – ಇಬ್ಬರ ವಿರುದ್ಧ ಪ್ರಕರಣ ದಾಖಲು

    June 15, 2026

    ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕನಿಗೆ ಹೊಸ ಬದುಕು; ಕುಟುಂಬದೊಂದಿಗೆ ಪುನರ್ಮಿಲನ

    June 15, 2026

    ಆರೋಪಿಯಿಂದಲೇ ಹಣಕ್ಕೆ ಬೇಡಿಕೆ ಇಟ್ಟ ಹೆಚ್‌ಎಎಲ್ ಪೊಲೀಸರು: ಪಿಎಸ್ಐ ಸೇರಿ ಮೂವರು ಎಸಿಬಿ ಬಲೆಗೆ

    June 15, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪಿಕಪ್ ಪಲ್ಟಿ; ಅಕ್ರಮ ಜಾನುವಾರು ಸಾಗಾಟ ಬಯಲು – ಇಬ್ಬರ ವಿರುದ್ಧ ಪ್ರಕರಣ ದಾಖಲು

    June 15, 2026

    ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕನಿಗೆ ಹೊಸ ಬದುಕು; ಕುಟುಂಬದೊಂದಿಗೆ ಪುನರ್ಮಿಲನ

    June 15, 2026

    ಆರೋಪಿಯಿಂದಲೇ ಹಣಕ್ಕೆ ಬೇಡಿಕೆ ಇಟ್ಟ ಹೆಚ್‌ಎಎಲ್ ಪೊಲೀಸರು: ಪಿಎಸ್ಐ ಸೇರಿ ಮೂವರು ಎಸಿಬಿ ಬಲೆಗೆ

    June 15, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.