Facebook Twitter Instagram
    Tuesday, September 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉಡುಪಿ: ಅಂದರ್ ಬಾಹರ್ ಜುಗಾರಿ‌ ಆಟ- 8 ಮಂದಿ ಅರೆಸ್ಟ್
    ಇತ್ತೀಚಿನ ಸುದ್ದಿ

    ಉಡುಪಿ: ಅಂದರ್ ಬಾಹರ್ ಜುಗಾರಿ‌ ಆಟ- 8 ಮಂದಿ ಅರೆಸ್ಟ್

    November 15, 2025
    Share

    ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿರುವ ಮಾಹಿತಿ ಮೇರೆಗೆ ಮಲ್ಪೆ ಪೊಲೀಸರು ದಾಳಿ ನಡೆಸಿ 8 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

    ಬಂಧಿತ ಆರೋಪಿಗಳು 1.ಉಮೇಶ್‌, 2.ಸಿದ್ರಾಮೇಶ,3.ಹನುಮೇಶ, 4.ಮಲ್ಲಿಕಾರ್ಜುನ ಹಡಪದ, 5.ಶಿವಪ್ಪ ಸರದಾರ, 6.ವಿರೂಪಾಕ್ಷ, 7.ಬಸವರಾಜ, 8.ಜಗದೀಶ ಎಂದು ಗುರುತಿಸಲಾಗಿದೆ.

    ಪೊಲೀಸರು ಬಂಧಿತ ಆರೋಪಿಗಳಿಂದ ಸೊತ್ತುಗಳನ್ನು ವಶಪಡಿಸಿಕೊಂಡು, ವಿಚಾರಣೆ ನಡೆಸಿದ್ದಾರೆ.

    ದಿನಾಂಕ: 13/11/2025 ರಂದು 17:00 ಗಂಟೆಗೆ ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆ ಹನುಮಾನ್‌ ನಗರ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್‌ ಜುಗಾರಿ ಆಟವನ್ನು ಆಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಅದರಂತೆ ಅನೀಲ್‌ ಕುಮಾರ್‌ ಡಿ ಪೊಲೀಸ್‌ ಉಪನಿರೀಕ್ಷಕರು ಮಲ್ಪೆ ಪೊಲೀಸ್‌ ಠಾಣೆ ಇವರು ಠಾಣಾ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತೆರಳಿ ನೋಡಲಾಗಿ ಅಲ್ಲಿನ ಇರುವ ಸಾರ್ವಜನಿಕ ಖಾಲಿ ಸ್ಥಳದಲ್ಲಿ 7-8 ಜನರು ನ್ಯೂಸ್‌ ಪೇಪರ್‌ ಹಾಸಿಕೊಂಡು ಕುಳಿತುಕೊಂಡಿದ್ದು, ಅಂದರ್ ಬಾಹರ್ ಎಂಬ ಇಸ್ಪೀಟ್ ಆಟ ಆಡುತ್ತಾ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ 1.ಉಮೇಶ್‌, 2.ಸಿದ್ರಾಮೇಶ,3.ಹನುಮೇಶ, 4.ಮಲ್ಲಿಕಾರ್ಜುನ ಹಡಪದ, 5.ಶಿವಪ್ಪ ಸರದಾರ, 6.ವಿರೂಪಾಕ್ಷ, 7.ಬಸವರಾಜ, 8.ಜಗದೀಶನನ್ನು ವಿಚಾರಿಸಿದ್ದು, ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ನಂತರ ತಕ್ಷೀರು ಸ್ಥಳದಲ್ಲಿ ಅಂದರ್‌ ಬಾಹರ್‌ ಜುಗಾರಿ ಆಟಕ್ಕೆ ಉಪಯೋಗಿಸಿದ ಸ್ವತ್ತುಗಳಾದ, ಹಳೆ ನ್ಯೂಸ್‌ ಪೇಪರ್‌-3, 52 ಇಸ್ಪೀಟ್‌ ಎಲೆಗಳು, ನಗದು ಹಣ ರೂ.5,860/- ಮತ್ತು VIVO ಮೊಬೈಲ್‌ ಫೋನ್-1‌, ಅಂದಾಜು ಮೌಲ್ಯ ರೂ. 3,000/-, SAMSUNG ಮೊಬೈಲ್‌ ಫೋನ್-1‌, ಅಂದಾಜು ಮೌಲ್ಯ ರೂ. 2,500/-, VIVO ಮೊಬೈಲ್‌ ಫೋನ್‌ ‌-1, ಅಂದಾಜು ಮೌಲ್ಯ ರೂ.2,000/- 4.ಕೆಂಪು ಬಣ್ಣದ Honda Activa ಕಂಪೆನಿಯ ಸ್ಕೂಟರ್‌ KA 26 EB 8057 ಅಂದಾಜು ಮೌಲ್ಯ ರೂ 15,000/- ಸ್ವತ್ತುಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ.

    ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 122/2025, ಕಲಂ: 87 kp Act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    Post Views: 217

    Related Posts

    ಆರೋಗ್ಯ ಇಲಾಖೆ ಬೃಹತ್ ಕಾರ್ಯಾಚರಣೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20 ನಕಲಿ ಕ್ಲಿನಿಕ್‌ಗಳಿಗೆ ಬೀಗ

    September 8, 2026

    ಹರೇಕಳ ಹಾಜಬ್ಬರಿಗೆ ಚುನಾವಣಾ ಆಯೋಗದ ನೋಟಿಸ್ – ಮನೆಗೆ ತೆರಳಿ ಕ್ಷಮೆಯಾಚಿಸಿದ ಅಧಿಕಾರಿಗಳು

    September 8, 2026

    ವಿಟ್ಲ: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ- ಮೂವರು ಆರೋಪಿಗಳ ಬಂಧನ

    September 8, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಆರೋಗ್ಯ ಇಲಾಖೆ ಬೃಹತ್ ಕಾರ್ಯಾಚರಣೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20 ನಕಲಿ ಕ್ಲಿನಿಕ್‌ಗಳಿಗೆ ಬೀಗ

    September 8, 2026

    ಹರೇಕಳ ಹಾಜಬ್ಬರಿಗೆ ಚುನಾವಣಾ ಆಯೋಗದ ನೋಟಿಸ್ – ಮನೆಗೆ ತೆರಳಿ ಕ್ಷಮೆಯಾಚಿಸಿದ ಅಧಿಕಾರಿಗಳು

    September 8, 2026

    ವಿಟ್ಲ: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ- ಮೂವರು ಆರೋಪಿಗಳ ಬಂಧನ

    September 8, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.