Facebook Twitter Instagram
    Saturday, June 13
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣ- ದಂಡ ಪಾವತಿ ಹೆಸರಿನಲ್ಲಿ ಹಲವರಿಗೆ ಸೈಬರ್‌ ವಂಚನೆ
    ಇತ್ತೀಚಿನ ಸುದ್ದಿ

    ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣ- ದಂಡ ಪಾವತಿ ಹೆಸರಿನಲ್ಲಿ ಹಲವರಿಗೆ ಸೈಬರ್‌ ವಂಚನೆ

    December 20, 2025
    Share

    ಮಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳಿಗೆ ಸಂಬಂಧಿಸಿ ವಾಹನ ಮಾಲಕರು ಪರಿವಾಹನ್‌ ವೆಬ್‌ ಸೈಟ್‌ ಅಥವಾ ಕರ್ನಾಟಕ ವನ್‌ ಕೇಂದ್ರಗಳ ಮೂಲಕ ದಂಡ ಪಾವತಿ ಮಾಡಬಹುದು. ದಂಡ ಪಾವತಿಗೆ ಯಾವುದೇ ಆ್ಯಪ್‌ ಗಳು ಇಲ್ಲ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

    ಸೈಬರ್‌ ವಂಚಕರು ಸಕ್ರಿಯ:

    ಸರಕಾರ ದಂಡವನ್ನು ರಿಯಾಯತಿ ದರದಲ್ಲಿ ಪಾವತಿಸುವ ಯೋಜನೆ ಜಾರಿಗೊಳಿಸುತ್ತಿದ್ದಂತೆ ಕೆಲವು ಸೈಬರ್‌ವಂಚಕರು ಸಕ್ರಿಯರಾಗಿದ್ದು, ಲಿಂಕ್‌ ಗಳನ್ನು ಕಳುಹಿಸಿ ನಿಮ¬¾ ದಂಡವನ್ನು ಎಪಿಕೆ ಫೈಲ್‌ ಇನ್‌ ಸ್ಟಾಲ್‌ ಮಾಡಿ ಅದರ ಮೂಲಕ ಪಾವತಿಸಬಹುದು ಎಂದು ಕೆಲವರಿಗೆ ಲಿಂಕ್‌ ಕಳುಹಿಸಿದ್ದಾರೆ. ಆ್ಯಪ್‌ ಡೌನ್‌ ಲೋಡ್‌ ಮಾಡುತ್ತಿದ್ದಂತೆ ಮೊಬೈಲ್‌ ಹ್ಯಾಕ್‌ ಆಗುತ್ತದೆ. ಮೊಬೈಲ್‌ ನಲ್ಲಿರುವ ಎಲ್ಲ ಮಾಹಿತಿಗಳು ವಂಚಕರಿಗೆ ದೊರೆಯುವುದು ಮಾತ್ರವಲ್ಲದೆ, ಒಟಿಪಿ ಮೂಲಕ ಬ್ಯಾಂಕ್‌ ಖಾತೆಯಿಂದ ಹಣವನ್ನೂ ತಾವೇ ವರ್ಗಾವಣೆ ಮಾಡಿಕೊಂಡು ವಂಚಿಸುತ್ತಾರೆ. ನಗರದ ವ್ಯಾಪ್ತಿಯಲ್ಲಿ ಈಗಾಗಲೇ ಇಬ್ಬರು ಆ್ಯಪ್‌ ಡೌನ್‌ ಲೋಡ್‌ ಮಾಡಿ ಹಣ ಕಳೆದುಕೊಂಡಿದ್ದಾರೆ.

    ವಂಚಕರು ನಕಲಿ ವೆಬ್‌ಸೈಟ್‌ಗಳು ಮತ್ತು ನಕಲಿ ಪಾವತಿ ಲಿಂಕ್‌ಗಳನ್ನು ಎಸ್ಸೆಮ್ಮೆಸ್, ವಾಟ್ಸ್‌ ಆ್ಯಪ್‌, ಇ ಮೇಲ್‌, ಹಾಗೂ ಇತರ ಸಾಮಾಜಿಕ ಜಾಲತಾಣಗಳ ಮೂಲಕ ವಾಹನ ಮಾಲಕರಿಗೆ ಕಳುಹಿಸಿ, ಇ ಚಲನ್‌ ದಂಡ ಪಾವತಿಗೆ ಇದು ಸಹಾಯ ಮಾಡುತ್ತದೆ ಎಂದು ನಕಲಿ ಸಂದೇಶ ಕಳುಹಿಸುತ್ತಿದ್ದಾರೆ. ವಾಹನ ಸವಾರರು ಈ ಲಿಂಕ್‌ ಬಳಸಿದಲ್ಲಿ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್‌ ಮಾಹಿತಿ ವಂಚಕರ ಪಾಲಾಗುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

    ಲಿಂಕ್‌ಗಳು ಬಂದಲ್ಲಿ ಮಂಗಳೂರು ನಗರ ಪೊಲೀಸ್‌ ಕಂಟ್ರೋಲ್‌ ರೂಂ. ವಾಟ್ಸ್‌ ಆ್ಯಪ್‌ ಸಂಖ್ಯೆ 9480802321ಗೆ ಕರೆ ಅಥವಾ ಸಂದೇಶದ ಮೂಲಕ ಮಾಹಿತಿ ನೀಡಬಹುದು. ರಾಷ್ಟ್ರೀಯ ಸೈಬರ್‌ ಸಹಾಯವಾಣಿ 1930ನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

    ಏನು ಮಾಡಬಾರದು?:

    ಎಸ್ಸೆಮ್ಮೆಸ್‌, ವಾಟ್ಸ್‌ ಆ್ಯಪ್‌ ಮೊದಲಾದ ಸಾಮಾಜಿಕ ಜಾಲತಾಣಗಳಿಂದ ಬರುವ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್‌ ಮಾಡಬಾರದು.
    ಒಟಿಪಿ, ಬ್ಯಾಂಕ್‌ ವಿವರ, ಪಾಸ್‌ವರ್ಡ್‌ ಇತ್ಯಾದಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.
    ರಿಯಾಯಿತಿ ದರದಲ್ಲಿ ದಂಡ ಪಾವತಿ ಮಾಡುತ್ತೇವೆ ಎಂಬ ಯಾವುದೇ ಅನಧಿಕೃತ ಸಂದೇಶಗಳನ್ನು ನಂಬಬಾರದು.
    ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣಗಳಿಗೆ ದಂಡ ಪಾವತಿಗೆ ಯಾವುದೇ ಆ್ಯಪ್‌ ಗಳನ್ನು ಪೊಲೀಸ್‌ ಇಲಾಖೆಯಾಗಲಿ ಸರಕಾರವಾಗಲೀ ಬಿಡುಗಡೆ ಮಾಡಿಲ್ಲ. ದಂಡ ಪಾವತಿ ಮಾಡಬೇಕಿದ್ದರೆ ಪರಿವಾಹನ್‌ ವೆಬ್‌ ಸೈಟ್‌, ಕರ್ನಾಟಕ ವನ್‌ ಸೆಂಟರ್‌ಅಥವಾ ಪೊಲೀಸ್‌ ಠಾಣೆಗಳಲ್ಲಿಯೂ ಪಾವತಿಸಬಹುದು. ಅನಧಿಕೃತವಾಗಿ ಬರುವ ಯಾವುದೇ ಲಿಂಕ್‌ ಗಳನ್ನು ಕ್ಲಿಕ್‌ ಮಾಡಬಾರದು. ಲಿಂಕ್‌ ಬಳಸಿದಲ್ಲಿ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್‌ ಮಾಹಿತಿ ವಂಚಕರ ಪಾಲಾಗುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು – ಸುಧೀರ್‌ ಕುಮಾರ್‌ ರೆಡ್ಡಿ, ಮಂಗಳೂರು ನಗರ ಪೊಲೀಸ್‌ ಆಯುಕ್ತರು

    Post Views: 155

    Related Posts

    ಬಜಪೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ- ಪೋಕ್ಸೋ ಪ್ರಕರಣ ದಾಖಲು

    June 13, 2026

    ಬಂಟ್ವಾಳ : ಅಸ್ವಸ್ಥಗೊಂಡ ವ್ಯಕ್ತಿಯ ಜೀವ ಉಳಿಸಿದ ನೈಟ್ ಬೀಟ್ ಸಿಬ್ಬಂದಿ – ವ್ಯಾಪಕ ಶ್ಲಾಘನೆ

    June 13, 2026

    ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ ಪ್ರಕರಣ; ಅಂಚೆ ವಿತರಕ ಸುರೇಶ್ ಬಂಧನ

    June 12, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಬಜಪೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ- ಪೋಕ್ಸೋ ಪ್ರಕರಣ ದಾಖಲು

    June 13, 2026

    ಬಂಟ್ವಾಳ : ಅಸ್ವಸ್ಥಗೊಂಡ ವ್ಯಕ್ತಿಯ ಜೀವ ಉಳಿಸಿದ ನೈಟ್ ಬೀಟ್ ಸಿಬ್ಬಂದಿ – ವ್ಯಾಪಕ ಶ್ಲಾಘನೆ

    June 13, 2026

    ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ ಪ್ರಕರಣ; ಅಂಚೆ ವಿತರಕ ಸುರೇಶ್ ಬಂಧನ

    June 12, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.