Facebook Twitter Instagram
    Tuesday, September 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಬಾಲಕಿಯ ಅಪಹರಿಸಿ ಅತ್ಯಾಚಾರ ಪ್ರಕರಣ, ಆರೋಪಿ ಖುಲಾಸೆ
    ಇತ್ತೀಚಿನ ಸುದ್ದಿ

    ಮಂಗಳೂರು: ಬಾಲಕಿಯ ಅಪಹರಿಸಿ ಅತ್ಯಾಚಾರ ಪ್ರಕರಣ, ಆರೋಪಿ ಖುಲಾಸೆ

    February 12, 2026
    Share

    ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರ ನಡೆಸಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಖುಲಾಸೆಗೊಳಿಸಿ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

    ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ವಿರುದ್ಧ ಹೊರಿಸಲಾದ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತೀರ್ಮಾನಿಸಿದ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕೆ.ಎಸ್. ಮಾನು ಅವರು ಈ ತೀರ್ಪು ಪ್ರಕಟಿಸಿದ್ದಾರೆ.

    ಪ್ರಕರಣದ ವಿವರ:2025ರ ಜುಲೈ ಎರಡನೇ ವಾರದಲ್ಲಿ ಮೂಲ್ಕಿ ಬಪ್ಪನಾಡು ದೇವಸ್ಥಾನದ ಬಳಿಯಿಂದ ಅಪ್ರಾಪ್ತ ಬಾಲಕಿಯನ್ನು ಆರೋಪಿ ತನ್ನ ಬೈಕ್‌ನಲ್ಲಿ ಕುಳ್ಳಿರಿಸಿ ಉಡುಪಿ ಜಿಲ್ಲೆಯ ಕಾಪು ಬೀಚ್‌ಗೆ ಕರೆದುಕೊಂಡು ಅಲ್ಲಿನ ಅರಣ್ಯ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದ ಮತ್ತು ಈ ವಿಷಯವನ್ನು ಮನೆಯವರಿಗೆ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆಯನ್ನೂ ಹಾಕಿದ್ದ.

    ಘಟನೆಗೆ ಸಂಬಂಧಿಸಿದಂತೆ ದಿನಾಂಕ 23-07-2025ರಂದು ದೂರು ದಾಖಲಿಸಿಕೊಂಡ ಮೂಲ್ಕಿ ಪೊಲೀಸರು, ಆರೋಪಿಯನ್ನು ಅದೇ ದಿನ ಬಂಧಿಸಿದ್ದರು. ನೊಂದ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಆಕೆ ಗರ್ಭಿಣಿ ಎಂದು ಗೊತ್ತಾಗಿತ್ತು.

    ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಂಗಳೂರಿನ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು.

    ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯ, ನೊಂದ ಬಾಲಕಿ ಮತ್ತು ಆಕೆಯ ಪೋಷಕರ ಹೇಳಿಕೆಯನ್ನು ದಾಖಲಿಸಿತ್ತು. ಪ್ರಾಸಿಕ್ಯೂಷನ್ ಪರವಾಗಿ ಎಂಟು ಮಂದಿಯನ್ನು ಸಾಕ್ಷಿ ವಿಚಾರಣೆ ನಡೆಸಿದ್ದು, 26 ದಾಖಲೆಗಳನ್ನು ಹಾಗೂ ಒಂದು ಮೊಬೈಲ್‌ನ್ನು ನಿಶಾನೆಯಾಗಿ ಗುರುತಿಸಲಾಯಿತು.

    ಅಭಿಯೋಜನೆಯ ಪರವಾಗಿ ಸಾಕ್ಷಿ ನೀಡಿದ್ದ ನೊಂದ ಬಾಲಕಿ ಹಾಗೂ ಪೋಷಕರು ಅತ್ಯಾಚಾರ ನಡೆದಿದೆ ಎಂಬುದನ್ನು ಹೇಳಿದ್ದರು. ಸಾಕ್ಷಿಗಳೂ ಅಭಿಯೋಜನೆಗೆ ಪೂರಕವಾಗಿ ಸಾಕ್ಷಿ ನೀಡಿದ್ದರು. ಆದರೆ, ಬಲವಾದ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಆರೋಪಿ ಮೇಲೆ ಹೊರೆಸಲಾದ ಆರೋಪವನ್ನು ಸಾಬೀತುಪಡಿಸುವಲ್ಲಿ ಅಭಿಯೋಜನೆ ವಿಫಲವಾಗಿದೆ ಎಂದು ತೀರ್ಮಾನಿಸಿದ ಮಾನ್ಯ ನ್ಯಾಯಾಲಯದ ನ್ಯಾಯಾಧೀಶರಾದ ಮಾನ್ಯ ಕೆ.ಎಸ್. ಮಾನು ಅವರು ಆರೋಪಿಯನ್ನು ಆರೋಪದಿಂದ ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದರು.

    ಆರೋಪಿಯ ಪರವಾಗಿ ಮಂಗಳೂರಿನ ನ್ಯಾಯವಾದಿ ಸುಕೇಶ್ ಕುಮಾರ್ ಶೆಟ್ಟಿ ವಾದಿಸಿದ್ದರು.

    Post Views: 188

    Related Posts

    ಮದುವೆಯಾಗುವುದಾಗಿ ನಂಬಿಸಿ ವಂಚನೆ, ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ- ಬೆಳ್ತಂಗಡಿಯ ಯುವ ವಕೀಲನ ವಿರುದ್ಧ FIR

    September 7, 2026

    ಉಡುಪಿ: ರಸ್ತೆ ಬದಿಯಲ್ಲಿ ನವಜಾತ ಹೆಣ್ಣು ಮಗು ಪತ್ತೆ..!!

    September 7, 2026

    ನಾಗರಿಕರ ವೈಯಕ್ತಿಕ ಮಾಹಿತಿ ಅಕ್ರಮ ಸಂಗ್ರಹ ಆರೋಪ: ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ

    September 7, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮದುವೆಯಾಗುವುದಾಗಿ ನಂಬಿಸಿ ವಂಚನೆ, ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ- ಬೆಳ್ತಂಗಡಿಯ ಯುವ ವಕೀಲನ ವಿರುದ್ಧ FIR

    September 7, 2026

    ಉಡುಪಿ: ರಸ್ತೆ ಬದಿಯಲ್ಲಿ ನವಜಾತ ಹೆಣ್ಣು ಮಗು ಪತ್ತೆ..!!

    September 7, 2026

    ನಾಗರಿಕರ ವೈಯಕ್ತಿಕ ಮಾಹಿತಿ ಅಕ್ರಮ ಸಂಗ್ರಹ ಆರೋಪ: ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ

    September 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.