Facebook Twitter Instagram
    Saturday, June 13
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಚಿರತೆ ಸೆರೆಹಿಡಿಯಲು ಇಡಲಾಗಿದ್ದ ಬೋನಿಗೆ ಬಿದ್ದ ನಾಯಿ
    ಇತ್ತೀಚಿನ ಸುದ್ದಿ

    ಮಂಗಳೂರು: ಚಿರತೆ ಸೆರೆಹಿಡಿಯಲು ಇಡಲಾಗಿದ್ದ ಬೋನಿಗೆ ಬಿದ್ದ ನಾಯಿ

    February 27, 2026
    Share

    ಮಂಗಳೂರು: ನಗರದಲ್ಲಿ ಹಲವು ದಿನಗಳಿಂದ ಸುದ್ದಿಯಲ್ಲಿರುವ ಚಿರತೆಯ ಹಾವಳಿಯ ಮಧ್ಯೆಯೇ ಚಿರತೆಯನ್ನು ಸೆರೆ ಹಿಡಿಯಲು ಇರಿಸಿದ್ದ ಬೋನಿಗೆ ನಾಯಿ ಬಿದ್ದ ಘಟನೆ ಬೆಳಕಿಗೆ ಬಂದಿದೆ.

    ನಗರದ ಕದ್ರಿ ಕೈಬಟ್ಟಲು ಡಾಕ್ಟರ್ಸ್ ಲೇನ್ ಬಳಿ ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಚಿರತೆಯ ಓಡಾಟ ಕಂಡುಬಂದಿತ್ತು. ಅದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಬುಧವಾರ ನಾಗಬನದ ಬಳಿ ಬೋನು ಇರಿಸಿದ್ದರು. ಗುರುವಾರ ಬೆಳಗ್ಗೆ ಆ ಬೋನಿನಲ್ಲಿ ನಾಯಿ ಸೆರೆಯಾಗಿರುವುದು ಕಂಡು ಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ನಾಯಿಯನ್ನು ಬೋನಿನಿಂದ ಹೊರಗೆ ತೆಗೆದಿದ್ದಾರೆ.

    ಡಾಕ್ಟರ್ಸ್ ಲೇನ್‌ನಲ್ಲಿ ಎರಡು ದಿನ ರಾತ್ರಿ ವೇಳೆ ಪತ್ತೆಯಾಗಿದ್ದ ಚಿರತೆಯು ಬುಧವಾರ ರಾತ್ರಿ ಪತ್ತೆಯಾದ ಬಗ್ಗೆ ವರದಿಯಾಗಿಲ್ಲ. ಹಾಗಾಗಿ ಚಿರತೆಯ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗಿದೆ. ಗುರುವಾರವೂ ನಾಗಬನದ ಬಳಿ ಬೋನು ಇಡಲಾಗಿದೆ. ಇಲಾಖೆಯ ಸಿಬ್ಬಂದಿ ವರ್ಗವು ನಿಗಾ ವಹಿಸಿದೆ. ಈ ಮಧ್ಯೆ ನಗರದ ಪಂಪ್‌ವೆಲ್ ಬಳಿ ಕೂಡ ಚಿರತೆ ಓಡಾಡಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅದು ದೃಢಪಟ್ಟಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

    Post Views: 120

    Related Posts

    ಬಜಪೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ- ಪೋಕ್ಸೋ ಪ್ರಕರಣ ದಾಖಲು

    June 13, 2026

    ಬಂಟ್ವಾಳ : ಅಸ್ವಸ್ಥಗೊಂಡ ವ್ಯಕ್ತಿಯ ಜೀವ ಉಳಿಸಿದ ನೈಟ್ ಬೀಟ್ ಸಿಬ್ಬಂದಿ – ವ್ಯಾಪಕ ಶ್ಲಾಘನೆ

    June 13, 2026

    ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ ಪ್ರಕರಣ; ಅಂಚೆ ವಿತರಕ ಸುರೇಶ್ ಬಂಧನ

    June 12, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಬಜಪೆ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರ- ಪೋಕ್ಸೋ ಪ್ರಕರಣ ದಾಖಲು

    June 13, 2026

    ಬಂಟ್ವಾಳ : ಅಸ್ವಸ್ಥಗೊಂಡ ವ್ಯಕ್ತಿಯ ಜೀವ ಉಳಿಸಿದ ನೈಟ್ ಬೀಟ್ ಸಿಬ್ಬಂದಿ – ವ್ಯಾಪಕ ಶ್ಲಾಘನೆ

    June 13, 2026

    ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ ಪ್ರಕರಣ; ಅಂಚೆ ವಿತರಕ ಸುರೇಶ್ ಬಂಧನ

    June 12, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.