ಸುಳ್ಯ: ಸುಳ್ಯದ ಶ್ರೀರಾಂಪೇಟೆಯಲ್ಲಿರುವ ರಾಜೇಶ್ ಬಾರ್ ಮುಂಭಾಗದಲ್ಲಿ ನಿಂತಿದ್ದ ಯುವಕರಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದ ಘಟನೆ ಶನಿವಾರ ಸಂಜೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
ಚೂರಿ ಇರಿತಕ್ಕೊಳಗಾದ ಯುವಕರನ್ನು ಸುಳ್ಯ ಬೀರಮಂಗಲ ಬಂಗ್ಲಗುಡ್ಡೆ ನಿವಾಸಿಗಳಾದ ಹರೀಶ್ ಬಂಗ್ಲಗುಡ್ಡೆ ಹಾಗೂ ನಿತೇಶ್ ಕೆ.ಆರ್. ಬಂಗ್ಲಗುಡ್ಡೆ ಎಂದು ಗುರುತಿಸಲಾಗಿದೆ. ಗಾಯಗೊಂಡ ಇಬ್ಬರನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿಗಳಾದ ಅಜ್ಜಾವರ ಗ್ರಾಮದ ಕಾಂತಮಂಗಲ ಗಂಧದಗುಡ್ಡೆ ನಿವಾಸಿಗಳಾದ ದಯಾನಂದ ಮತ್ತು ರಾಜೇಶ್ ಬಿ.ಆರ್. ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಚೂರಿ ಇರಿತಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.




