Facebook Twitter Instagram
    Sunday, June 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»IPS ಅಧಿಕಾರಿಯ ವಿರುದ್ಧ SP ಗಂಭೀರ ಆರೋಪ – DGP ಗೆ ಪತ್ರ ಬರದು, “30 ನಿಮಿಷ ಕೊಡಿ, ಸತ್ಯ ಬಯಲು ಮಾಡ್ತೇನೆ” ಎಂದು ಉಲ್ಲೇಖ…!!!
    ಇತ್ತೀಚಿನ ಸುದ್ದಿ

    IPS ಅಧಿಕಾರಿಯ ವಿರುದ್ಧ SP ಗಂಭೀರ ಆರೋಪ – DGP ಗೆ ಪತ್ರ ಬರದು, “30 ನಿಮಿಷ ಕೊಡಿ, ಸತ್ಯ ಬಯಲು ಮಾಡ್ತೇನೆ” ಎಂದು ಉಲ್ಲೇಖ…!!!

    April 21, 2026
    Share

    ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸುವ ಬೆಳವಣಿಗೆಯಲ್ಲಿ, ಡಿ ಸಿ ಆರ್ ಇ ಎಸ್ ಪಿ ಕಾಶಿನಾಥ್ ಅವರು ಹಿರಿಯ IPS ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ DGP ಅವರಿಗೆ ಪತ್ರ ಬರೆದಿದ್ದಾರೆ.

    ಈ ಪತ್ರದಲ್ಲಿ, “30 ನಿಮಿಷ ಸಮಯ ನೀಡಿದರೆ IPS ಅಧಿಕಾರಿಯ ಕರ್ಮಕಾಂಡವನ್ನು ಸಂಪೂರ್ಣವಾಗಿ ಬಯಲು ಮಾಡುತ್ತೇನೆ” ಎಂದು SP ಕಾಶಿನಾಥ್ ಸ್ಪಷ್ಟವಾಗಿ ತಿಳಿಸಿದ್ದಾರೆ. DGP ಅವರಿಗೆ ಬರೆದಿರುವ ಪತ್ರದಲ್ಲಿ ಮಾನಸಿಕ ಕಿರುಕುಳ ಮತ್ತು ತಾರತಮ್ಯ ಆರೋಪಗಳನ್ನು ಉಲ್ಲೇಖಿಸಿರುವ ಅವರು, ತನ್ನ ಮೇಲೆ ಅನ್ಯಾಯವಾಗುತ್ತಿರುವುದಾಗಿ ದೂರಿದ್ದಾರೆ.

    SP ಅವರ ಪ್ರಕಾರ, “ಅವರು ಹೇಳಿದಂತೆ ಕೆಲಸ ಮಾಡದಿದ್ದರೆ ಮೆಮೊ ನೀಡುವ ಮೂಲಕ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ವಿಶೇಷವಾಗಿ ಕರ್ನಾಟಕದ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

    ಈ ಕುರಿತು ಈಗಾಗಲೇ ಹಲವು ಬಾರಿ ಲಿಖಿತ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ, ಈ ವಿಷಯವನ್ನು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಗಮನಕ್ಕೂ ತರಬೇಕು ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಇದೇ ಹಿನ್ನಲೆಯಲ್ಲಿ, ಒಂದು ವಾರದೊಳಗೆ ತಮ್ಮನ್ನು ಭೇಟಿ ಮಾಡಲು ಅವಕಾಶ ಕಲ್ಪಿಸುವಂತೆ DGP ಅವರನ್ನು ವಿನಂತಿಸಿರುವ SP, ಮುಕ್ತವಾಗಿ ಮಾತನಾಡಿ ಸತ್ಯಾಂಶವನ್ನು ಬಯಲು ಮಾಡುವ ಉದ್ದೇಶ ಹೊಂದಿದ್ದಾರೆ.

    ಈ ಘಟನೆ ರಾಜ್ಯ ಪೊಲೀಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಹರಿದಿದೆ.

    Post Views: 101

    Related Posts

    ತಲೆಮರೆಸಿಕೊಂಡಿದ್ದ ದರೋಡೆಕೋರನಿಗೆ ಪೊಲೀಸರ ಬಲೆ: ಉಳ್ಳಾಲ ಠಾಣೆ ತಂಡದ ಯಶಸ್ಸು

    June 7, 2026

    ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ

    June 7, 2026

    ಟೂರ್‌ಗೆ ಹೋದವಳು ಮನೆಗೂ ಬರಲಿಲ್ಲ, ಪ್ರವಾಸಕ್ಕೂ ಹೋಗಿಲ್ಲ – ಯುವತಿ ನಾಪತ್ತೆ ಪ್ರಕರಣ

    June 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.