Facebook Twitter Instagram
    Monday, May 11
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಎಂಸಿಸಿ ಬ್ಯಾಂಕಿನಲ್ಲಿ 114ನೇ ಸಂಸ್ಥಾಪಕರ ದಿನಾಚರಣೆ
    ಇತ್ತೀಚಿನ ಸುದ್ದಿ

    ಎಂಸಿಸಿ ಬ್ಯಾಂಕಿನಲ್ಲಿ 114ನೇ ಸಂಸ್ಥಾಪಕರ ದಿನಾಚರಣೆ

    May 11, 2026
    Share

    ಮಂಗಳೂರು: ಎಂಸಿಸಿ ಬ್ಯಾಂಕ್ ಲಿಮಿಟೆಡ್ ತನ್ನ 114ನೇ ಸಂಸ್ಥಾಪಕರ ದಿನಾಚರಣೆಯನ್ನು ಆಡಳಿತ ಕಚೇರಿ ಆವರಣದಲ್ಲಿ ಭವ್ಯವಾಗಿ ಆಚರಿಸಿತು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಂಸ್ಥಾಪಕರಾದ ದಿವಂಗತ ಶ್ರೀ ಪಿ.ಎಫ್.ಎಕ್ಸ್. ಸಾಲ್ದಾನ್ಹ ಅವರ ದೂರದೃಷ್ಟಿಯ ಸೇವೆಯನ್ನು ಸ್ಮರಿಸಲಾಯಿತು ಹಾಗೂ ಸಹಕಾರಿ ಕ್ಷೇತ್ರದಲ್ಲಿ ಬ್ಯಾಂಕ್ ಸಾಧಿಸಿರುವ ನಿರಂತರ ಪ್ರಗತಿ ಹಾಗೂ ಸ್ಥೈರ್ಯವನ್ನು ಗೌರವಿಸಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯುನಿವರ್ಸಿಟಿ), ಮಂಗಳೂರು ಇದರ ಉಪಕುಲಪತಿ ರೆವ್. ಡಾ. ಪ್ರವೀಣ್ ಮಾರ್ಟಿಸ್ SJ ಕರ್ನಾಟಕ ಬ್ಯಾಂಕಿನ ಮಾಜಿ ಮಹಾಪ್ರಬಂಧಕ ಹಾಗೂ ಮುಖ್ಯ ಅನುಸರಣಾಧಿಕಾರಿ ಡಾ| ಮೀರಾ ಅರನ್ಹಾ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ಶ್ರೀ ರಾಯ್ ಕ್ಯಾಸ್ಟೆಲಿನೋ ಹಾಗೂ ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಶ್ರೀ ಐಸಾಕ್ ವಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ಯಾಂಕಿನ ಮಹಾಪ್ರಬಂಧಕರಾದ ಶ್ರೀ ಸುನಿಲ್ ಮಿನೇನೆಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಸಂಸ್ಥಾಪಕರ ಕುಟುಂಬ ಸದಸ್ಯರು ದಿವಂಗತ ಶ್ರೀ ಪಿ.ಎಫ್.ಎಕ್ಸ್. ಸಾಲ್ದಾನ್ಹ ಅವರ ಭಾವಚಿತ್ರಕ್ಕೆ ಪುಷ್ಪ್ಪನಮನ ಸಲ್ಲಿಸಿ ಗೌರವ ಸಲ್ಲಿಸಿದರು.

    ಸ್ವಾಗತ ಭಾಷಣದಲ್ಲಿ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಅವರು, ಸಂಸ್ಥಾಪಕರ ದೃಷ್ಟಿಕೋನ ಮತ್ತು ಧ್ಯೇಯವನ್ನು ಸ್ಮರಿಸುವ ಉದ್ದೇಶದಿಂದ ಸಂಸ್ಥಾಪಕರ ದಿನಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. 2018ರಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ ಬ್ಯಾಂಕ್ ವೃತ್ತಿಪರತೆಯೊಂದಿಗೆ ಗಮನಾರ್ಹ ಬೆಳವಣಿಗೆ ಸಾಧಿಸಿದೆ ಎಂದು ಹೇಳಿದರು. ಬ್ಯಾಂಕಿನ ಪ್ರಗತಿಯನ್ನು ವಿವರಿಸಿದ ಅವರು, 24 ವರ್ಷಗಳ ಬಳಿಕ ಶಾಖೆಗಳ ಸಂಖ್ಯೆ 16ರಿಂದ 21ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು. ಬ್ಯಾಂಕಿನ ಒಟ್ಟು ವ್ಯವಹಾರ ರೂ.500 ಕೋಟಿಯಿಂದ ರೂ.1,525 ಕೋಟಿಗೆ ಏರಿಕೆಯಾಗಿದ್ದು, ಠೇವಣಿಗಳು ರೂ.300 ಕೋಟಿಯಿಂದ ರೂ.875 ಕೋಟಿಗೆ ಹೆಚ್ಚಳವಾಗಿವೆ ಎಂದರು. ಬ್ಯಾಂಕ್ ರೂ.13 ಕೋಟಿ ಲಾಭ ದಾಖಲಿಸಿದ್ದು, ನಿರಂತರವಾಗಿ “ಎ” ದರ್ಜೆಯ ಲೆಕ್ಕಪರಿಶೋಧನಾ ವರ್ಗೀಕರಣವನ್ನು ಪಡೆಯುತ್ತಿದೆ ಎಂದು ತಿಳಿಸಿದರು. ಪ್ರಸ್ತುತ ಇರುವ 21 ಶಾಖೆಗಳನ್ನು ಈ ಆರ್ಥಿಕ ವರ್ಷದಲ್ಲಿ 25ಕ್ಕೆ ವಿಸ್ತರಿಸುವ ಯೋಜನೆಯನ್ನೂ ಘೋಷಿಸಿದರು.

    ತಮ್ಮ ಭಾಷಣದಲ್ಲಿ ವಂ. ಡಾ| ಪ್ರವೀಣ್ ಮಾರ್ಟಿಸ್ ಅವರು ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಅವರ ನಾಯಕತ್ವವನ್ನು ಶ್ಲಾಘಿಸಿ, ಬ್ಯಾಂಕ್ ಕಳೆದ ಕೆಲವು ವರ್ಷಗಳಲ್ಲಿ ಸಾಧಿಸಿರುವ ಪರಿವರ್ತನೆಯನ್ನು ಮೆಚ್ಚಿದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ನೆರವಾಗುವ “ವಿದ್ಯಾಧನ ವಿದ್ಯಾರ್ಥಿ ಕ್ರೆಡಿಟ್ ಯೋಜನೆ”ಯನ್ನು ವಿಶೇಷವಾಗಿ ಪ್ರಶಂಸಿಸಿದರು. ಎಂಸಿಸಿ ಬ್ಯಾಂಕ್ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವ ಜನಪರ ಬ್ಯಾಂಕಾಗಿ ಹೊರಹೊಮ್ಮಿದೆ ಎಂದು ಹೇಳಿದರು.

    ಡಾ| ಮೀರಾ ಅರನ್ಹಾ ಅವರು “ವಿದ್ಯಾಧನ ಶಿಕ್ಷಣ ಯೋಜನೆ”ಯನ್ನು ಉದ್ಘಾಟಿಸಿದರು. ತಮ್ಮ ಭಾಷಣದಲ್ಲಿ ಕಳೆದ ಏಳು-ಎಂಟು ವರ್ಷಗಳಲ್ಲಿ ಬ್ಯಾಂಕ್ ಸಾಧಿಸಿರುವ ಪ್ರಗತಿಯನ್ನು ಅಭಿನಂದಿಸಿದ ಅವರು, ಬ್ಯಾಂಕಿನ ಭವಿಷ್ಯ ಬೆಳವಣಿಗೆಯಲ್ಲಿ ಕೃತಕ ಬುದ್ಧಿಮತ್ತೆ, ಹವಾಮಾನ ಹಾಗೂ ESG ಅಪಾಯ ನಿರ್ವಹಣೆ ಮತ್ತು ವಿಶ್ವಾಸದ ಕಾಪಾಡುವಿಕೆ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು.

    ಶ್ರೀ ರಾಯ್ ಕ್ಯಾಸ್ಟೆಲಿನೋ ಅವರು ಕೇವಲ ಏಳು ವರ್ಷಗಳಲ್ಲಿ ಬ್ಯಾಂಕ್ ಮೂರು ಪಟ್ಟು ಬೆಳವಣಿಗೆ ಸಾಧಿಸಿರುವುದಕ್ಕೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು.

    ಶ್ರೀ ಐಸಾಕ್ ವಾಸ್ ಅವರು ಸಂಪಾದಕರಾದ ಡಾ. ಜೆರಾಲ್ಡ್ ಪಿಂಟೊ ಅವರೊಂದಿಗೆ ಬ್ಯಾಂಕಿನ ಬುಲೆಟಿನ್ ಬಿಡುಗಡೆ ಮಾಡಿದರು. ತಮ್ಮ ಭಾಷಣದಲ್ಲಿ ಸಂಸ್ಥಾಪಕರು ಬ್ಯಾಂಕನ್ನು ಸಮುದಾಯದ ವಿಶ್ವಾಸದ ಸಂಕೇತವಾಗಿ ಸ್ಥಾಪಿಸಿದ್ದಾರೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಹೊಸದಾಗಿ ಅರ್ಹತೆ ಪಡೆದ ಚಾರ್ಟರ್ಡ್ ಅಕೌಂಟೆAಟ್ಸಳಾದ ಸಿಎ ಮ್ಯೂರಿಯಲ್ ಮಸ್ಕರೇನ್ಹಾಸ್ ಹಾಗೂ ಸಿಎ ಜಾಯ್ಸ್ಟನ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಸೆಂಟ್ರಲ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ಹೆನ್ರಿ ಮೆಂಡೋನ್ಕಾ (ಎಚ್.ಎಂ. ಪೆರ್ನಾಲ್), ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ರಿಶೆಲ್ ಫೆರ್ನಾಂಡಿಸ್ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ| ಜೋಸೆಫ್ ಲೋಬೊ, ಶ್ರೀ ಝೇವಿಯರ್ ಡಿಸೋಜಾ ಮತ್ತು ಶ್ರೀ ಪ್ರೇಮ್ ಜೆ. ಮೊರಾಸ್ ಅವರನ್ನು ಗೌರವಿಸಲಾಯಿತು.

    ನಿರ್ದೇಶಕರಾದ ಶ್ರೀ ರೋಶನ್ ಡಿಸೋಜಾ ಹಾಗೂ ಶ್ರೀ ಅನಿಲ್ ಪತ್ರಾವೊ ಅವರನ್ನು ಅವರ ಜನ್ಮದಿನದ ಅಂಗವಾಗಿ ಸನ್ಮಾನಿಸಲಾಯಿತು. ಬ್ಯಾಂಕಿನ ಹೊಸ ಲೋಗೋ ವಿನ್ಯಾಸಗೊಳಿಸಿದ ಶ್ರೀ ಬನ್ನು ಫೆರ್ನಾಂಡಿಸ್ ಹಾಗೂ ಪಿಎಫ್ಎಕ್ಸ್ ಮೆಮೋರಿಯಲ್ ಆಡಿಟೋರಿಯಂ ವಿನ್ಯಾಸಗೊಳಿಸಿದ ವಾಸ್ತುಶಿಲ್ಪಿ ಶ್ರೀ ದೀಪಕ್ ಡಿಸೋಜಾ ಅವರನ್ನು ಸಹ ಗೌರವಿಸಲಾಯಿತು.

    ಕಾರ್ಯಕ್ರಮವು ಶ್ರೀ ಮನೋಜ್ ಲೋಪೆಸ್ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಬ್ಯಾಂಕಿನ ಮಹಾಪ್ರಬಂಧಕರಾದ ಶ್ರೀ ಸುನಿಲ್ ಮೆನೆಜಸ್ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಶ್ರೀ ಜೇಸನ್ ಶಿರ್ತಾಡಿ ನಿರೂಪಿಸಿದರು.

    ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶ್ರೀ ಆಂಡ್ರೂ ಡಿಸೋಜಾ, ಶ್ರೀ ಹೆರಾಲ್ಡ್ ಮೊಂತೋರೊ, ಶ್ರೀ ಅನಿಲ್ ಪತ್ರಾವೊ, ಶ್ರೀ ಡೇವಿಡ್ ಡಿಸೋಜಾ, ಶ್ರೀ ಜೆ.ಪಿ. ರೋಡ್ರಿಗಸ್, ಶ್ರೀ ರೋಶನ್ ಡಿಸೋಜಾ, ಶ್ರೀ ಮೆಲ್ವಿನ್ ವಾಸ್, ಶ್ರೀ ವಿನ್ಸೆಂಟ್ ಲಸ್ರಾದೊ, ಶ್ರೀ ಸುಶಾಂತ್ ಸಾಲ್ದಾನ್ಹಾ, ಶ್ರೀಮತಿ ಐರಿನ್ ರೆಬೆಲ್ಲೊ, ಶ್ರೀ ಆಲ್ವಿನ್ ಪಿ. ಮೊಂತೇರೊ, ಶ್ರೀ ಫೆಲಿಕ್ಸ್ ಡಿಕ್ರೂಜ್, ಡಾ| ಜೆರಾಲ್ಡ್ ಪಿಂಟೊ ಹಾಗೂ ಶ್ರೀ ಸಿ.ಜಿ. ಪಿಂಟೊ ಉಪಸ್ಥಿತರಿದ್ದರು.

    Post Views: 12

    karnataka mangalore

    Related Posts

    ‘ಜೈ’ ಸಿನೆಮಾ 100 ದಿನ ಪೂರೈಕೆ: ತುಳು ಚಿತ್ರರಂಗದಲ್ಲಿ ಮತ್ತೊಂದು ಹ್ಯಾಟ್ರಿಕ್‌ಗೆ ಸಜ್ಜಾದ ರೂಪೇಶ್ ಶೆಟ್ಟಿ

    May 11, 2026

    ಪ್ರೇಮ ವಿವಾದಕ್ಕೆ ಅಣ್ಣನೇ ಬಲಿಯಾದ ಘಟನೆ: ಬ್ಯಾಡರಹಳ್ಳಿಯಲ್ಲಿ ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ

    May 11, 2026

    ಮಂಗಳೂರು ರೈಲು ನಿಲ್ದಾಣದಲ್ಲಿ ಕುಖ್ಯಾತ ದರೋಡೆಕೋರನ ಬಂಧನ- ₹13 ಲಕ್ಷ ಮೌಲ್ಯದ ಚಿನ್ನಾಭರಣ ವಶ

    May 10, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.