Facebook Twitter Instagram
    Saturday, May 16
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ ಪತ್ತೆ: ಇಬ್ಬರ ಬಂಧನ, ಕರು ಹಾಗೂ ಕಾರು ವಶ
    ಇತ್ತೀಚಿನ ಸುದ್ದಿ

    ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ ಪತ್ತೆ: ಇಬ್ಬರ ಬಂಧನ, ಕರು ಹಾಗೂ ಕಾರು ವಶ

    May 16, 2026
    Share

    ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಹಾಗೂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ದಿನಾಂಕ 14 ಮೇ 2026ರಂದು ಬೆಳಿಗ್ಗೆ ಸುಮಾರು 7 ಗಂಟೆ ವೇಳೆಗೆ PSI ಕೃಷ್ಣಪ್ಪ ಹಾಗೂ ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಬೆಳುವಾಯಿ ಕಡೆಯಿಂದ ಮಾರ್ನಾಡು ಅಳಿಯೂರು ಕಡೆಗೆ ಮಾರುತಿ ಬ್ರೀಜಾ ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಮೇರೆಗೆ ಪೊಲೀಸರು ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ವಾಹನ ತಪಾಸಣೆ ನಡೆಸಿದರು.

    ಈ ವೇಳೆ KA19MK4265 ಸಂಖ್ಯೆಯ ಬೂದು ಬಣ್ಣದ ಮಾರುತಿ ಬ್ರೀಜಾ ಕಾರು ಬಂದಿದ್ದು, ನಿಲ್ಲಿಸಲು ಸೂಚಿಸಿದರೂ ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರು ವಾಹನವನ್ನು ಬೆನ್ನಟ್ಟಿದಾಗ, ಕಾರು ಗುಂಡುಕಲ್ಲು 5 ಸೈಂಟ್ಸ್ ರಸ್ತೆಯಲ್ಲಿರುವ ಸಾಹುಲ್ ಹಮೀದ್ ಅವರ ಮನೆ ಸಮೀಪ ನಿಲ್ಲಿಸಲಾಗಿತ್ತು.ವಾಹನದಲ್ಲಿದ್ದ ಹಂಡೇಲಿನ ಮೊಹಮ್ಮದ್ ಆರಿಫ್ ಹಾಗೂ ಗಂಟಾಲಕಟ್ಟೆಯ ಇಮ್ರಾನ್ @ ಇಬ್ರಾಹಿಂ ಓಡಿಹೋಗಲು ಯತ್ನಿಸಿದರೂ ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ.

    ಪರಿಶೀಲನೆ ವೇಳೆ ಕಾರಿನ ಹಿಂಭಾಗದ ಸೀಟ್ ತೆರವುಗೊಳಿಸಿ, ನೀಲಿ ಪ್ಲಾಸ್ಟಿಕ್ ಹಾಸಿ ಅದರ ಮೇಲೆ ಗಂಡು ಕರುವೊಂದನ್ನು ಕಾಲು ಹಾಗೂ ತಲೆಗೆ ಹಗ್ಗ ಕಟ್ಟಿ ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗುತ್ತಿರುವುದು ಪತ್ತೆಯಾಗಿದೆ.ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗಳು ಕಳೆದ ಒಂದು ವಾರದಿಂದ ವಿವಿಧ ಕಡೆಗಳಿಂದ ಜಾನುವಾರುಗಳನ್ನು ಕಳ್ಳತನ ಮಾಡಿ ತಂದು, ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ನಿವಾಸಿ ಸಾಹುಲ್ ಹಮೀದ್ ಅವರ ಮನೆ ಸಮೀಪ ಕಡಿಯಲು ಹಾಗೂ ಮಾಂಸ ಮಾರಾಟ ಮಾಡಲು ಸಂಗ್ರಹಿಸುತ್ತಿದ್ದರೆಂಬ ಮಾಹಿತಿ ಬಹಿರಂಗವಾಗಿದೆ. ಪೊಲೀಸರು ಕರು, ಮಾರುತಿ ಬ್ರೀಜಾ ಕಾರು ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಮೊಹಮ್ಮದ್ ಆರಿಫ್ ಎಂಬಾತನ ಮೇಲಿನ ಪ್ರಕರಣಗಳು;

    1) Bajpe ps cr.no. 150/2024 u/s 303(2) bns , 4, 5 ,7, 12 cow slaughter act 2020CC – 1491/2025 next date – 22/6/20262) Banakal ps cr.no. 31/2024 u/s 379 IPC, and 4, 5,12 cow slaughter act 2020 , 11 (d) animal cruelty act and 192(A) IMV act CC – 1684/2024, next date 30/5/20263) Moodbidri ps cr.no. 56/2025 u/s 303(2) BNS, and 4, 5,7, 12 cow slaughter act 2020 – UI 4) Moodbidri ps cr.no.130/ 2025 u/s 303(2) BNS – UIಇಮ್ರಾನ್ ಮೇಲಿನ ಪ್ರಕರಣಗಳು:1) Moodabidre ps cr.no . 133/2024 u/s 27 b NDPS 2) Moodabidre ps cr.no. 6/2025 u/s 87 KP act3) 40/2025 u/s 87 KP act 4) Moodbidri ps cr.no. 56/2025 u/s 303(2) BNS, and 4, 5,7, 12 cow slaughter act 2020 4) Moodbidri ps cr.no.130/ 2025 u/s 303(2) BNS – 5) Karkala town ps cr no 169/2025 u/s 303(2) BNS

    Post Views: 8

    Related Posts

    ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ವಿರುದ್ಧ ಪ್ರಕರಣ ದಾಖಲು

    May 15, 2026

    ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ನಾಲ್ಕು ಮಂದಿ ಕಾರ್ಮೆಲೈಟ್ ಗುರುಗಳಿಗೆ ಪವಿತ್ರ ಗುರುದೀಕ್ಷೆ

    May 15, 2026

    ವಂಚನೆ ಆರೋಪ: ಅನಿಲ್ ಅಂಬಾನಿ ಕಂಪನಿಗಳ ವಿರುದ್ಧ ಸಿಬಿಐ ಕಾರ್ಯಾಚರಣೆ

    May 15, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.