Facebook Twitter Instagram
    Sunday, September 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: OLX ಮೂಲಕ ಐಷಾರಾಮಿ ಬೈಕ್ ಮೋಸ; ಹಣ ಕಳೆದುಕೊಂಡ ತಂದೆ-ಮಗ
    ಇತ್ತೀಚಿನ ಸುದ್ದಿ

    ಮಂಗಳೂರು: OLX ಮೂಲಕ ಐಷಾರಾಮಿ ಬೈಕ್ ಮೋಸ; ಹಣ ಕಳೆದುಕೊಂಡ ತಂದೆ-ಮಗ

    June 24, 2026
    Share

    ಮಂಗಳೂರು : ಒಎಲ್‌ಎಕ್ಸ್ (OLX) ಆನ್‌ಲೈನ್ ಮಾರುಕಟ್ಟೆಯಲ್ಲಿ ಐಷಾರಾಮಿ ‘ಕಾಂಟಿನೆಂಟಲ್ ಜಿಟಿ 650’ ಮೋಟಾರು ಸೈಕಲ್ ಮಾರಾಟಕ್ಕಿದೆ ಎಂದು ನಕಲಿ ಜಾಹೀರಾತು ನೀಡಿ, ತಂದೆ-ಮಗನಿಗೆ ಬರೋಬ್ಬರಿ ₹5,58,710 ಹಣ ವಂಚಿಸಿ, ಬಳಿಕ ಜೀವ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ವಂಚಕನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ದೂರುದಾರರು ತಮ್ಮ ಮಗ ಬೈಕ್ ಕೊಡಿಸುವಂತೆ ಕೇಳಿದ ಕಾರಣಕ್ಕಾಗಿ OLX ನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಕಾಂಟಿನೆಂಟಲ್ ಜಿಟಿ 650 ಬೈಕ್ ಮಾರಾಟಕ್ಕಿರುವ ಮಾಹಿತಿ ಲಭ್ಯವಾಗಿತ್ತು.

    ಬೈಕ್ ಮಾರಾಟಗಾರ ತನ್ನನ್ನು ಬೆಂಗಳೂರಿನ ವಿ.ವಿ.ಪುರಂನಲ್ಲಿರುವ ‘ಉಸ್ಮಾನ್ ಆಟೋ ಕನ್ಸಲ್ಟೆಂಟ್ಸ್’ ಏಜೆನ್ಸಿಯ ಸೈಯದ್ ತೌಸಿಫ್ ಪಾಷಾ ಎಂದು ಪರಿಚಯಿಸಿಕೊಂಡಿದ್ದನು. ಆರಂಭದಲ್ಲಿ ರಿಜಿಸ್ಟ್ರೇಷನ್ ಮೊತ್ತವಾಗಿ ₹5,000 ಹಾಗೂ ಕಮಿಷನ್ ಆಗಿ ₹10,000 ನೀಡಬೇಕು ಎಂದು ನಂಬಿಸಿದ್ದನು. ಇದನ್ನು ನಂಬಿದ ತಂದೆ-ಮಗ ಬೈಕ್ ಖರೀದಿಗೆ ಒಪ್ಪಿದಾಗ, ಆರೋಪಿಯು ₹57,000 ಮುಂಗಡ ಹಣ ಕೇಳಿದ್ದಾನೆ. ಅದರಂತೆ ಫೆಬ್ರವರಿ 18, 2026 ರಂದು ಯುಪಿಐ (UPI) ಮುಖಾಂತರ ಆತನ ಮೊಬೈಲ್ ಸಂಖ್ಯೆಗೆ (6362848200) ಹಣ ವರ್ಗಾಯಿಸಲಾಗಿದೆ. ತದನಂತರ ಆರೋಪಿಯು ವಿವಿಧ ನೆಪಗಳನ್ನು ಹೇಳಿ ಬೇರೆ ಬೇರೆ ಬ್ಯಾಂಕ್ ಖಾತೆ ಹಾಗೂ ಯುಪಿಐ ಐಡಿಗಳಿಗೆ ನೆಫ್ಟ್ (NEFT), ಐಎಂಪಿಎಸ್ (IMPS) ಮೂಲಕ ಹಂತ ಹಂತವಾಗಿ ಮಾರ್ಚ್ 4, 2026 ರ ಒಳಗೆ ಒಟ್ಟು ₹5,58,710 ಹಣವನ್ನು ವರ್ಗಾಯಿಸಿಕೊಂಡಿದ್ದಾನೆ.

    ಇಷ್ಟೆಲ್ಲಾ ಹಣ ಪಡೆದ ಮೇಲೆಯೂ ಸೈಯದ್ ತೌಸಿಫ್ ಪಾಷಾ ಇನ್ನೂ ಹೆಚ್ಚಿನ ಹಣ ವರ್ಗಾಯಿಸುವಂತೆ ಸಂತ್ರಸ್ತ ಯುವಕನಿಗೆ ಪೀಡಿಸಿದ್ದಾನೆ. ಇದರಿಂದ ಅನುಮಾನಗೊಂಡು ತಂದೆ-ಮಗ ತಕ್ಷಣವೇ ಬೈಕ್ ಕೊಡಿ ಇಲ್ಲವೇ ನಮ್ಮ ಹಣ ವಾಪಸ್ ನೀಡಿ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಆರೋಪಿಯು ಯುವಕನಿಗೆ ಫೋನ್‌ನಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟೇ ಅಲ್ಲದೆ, “ನಾನು ಯಾರು ಎಂದು ನಿಮಗೆ ತೋರಿಸುತ್ತೇನೆ” ಎಂದು ಕೊಲೆ ಬೆದರಿಕೆ ಹಾಕಿದ್ದಾನೆ. ಒಎಲ್‌ಎಕ್ಸ್ ಹೆಸರಿನಲ್ಲಿ ಆನ್‌ಲೈನ್ ಮೂಲಕ ನಂಬಿಸಿ ವಂಚಿಸಿರುವ ಆರೋಪಿಯ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.

    Post Views: 121

    dakshina kannada PoliceInvestigation

    Related Posts

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.