Facebook Twitter Instagram
    Wednesday, September 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಸುರತ್ಕಲ್: 2018ರ ಕೊಲೆ ಯತ್ನ ಪ್ರಕರಣ – ಆರೋಪಿ ಪ್ರಶಾಂತ್ ಭಂಡಾರಿ ದೋಷಮುಕ್ತ
    ಇತ್ತೀಚಿನ ಸುದ್ದಿ

    ಸುರತ್ಕಲ್: 2018ರ ಕೊಲೆ ಯತ್ನ ಪ್ರಕರಣ – ಆರೋಪಿ ಪ್ರಶಾಂತ್ ಭಂಡಾರಿ ದೋಷಮುಕ್ತ

    September 23, 2026
    Share

    ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಬಹುಚರ್ಚಿತ ಕೊಲೆ ಯತ್ನ ಪ್ರಕರಣವೊಂದರಲ್ಲಿ, ಆರೋಪಿಯನ್ನು ಮಾನ್ಯ 2ನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯವು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 95/2018ರಂತೆ ಭಾರತೀಯ ದಂಡ ಸಂಹಿತೆ (IPC) ಕಲಂ 341, 323, 324, 504, 506 ಹಾಗೂ 307ರ ಅಡಿಯಲ್ಲಿ ಪ್ರಶಾಂತ್ ಭಂಡಾರಿ ಎಂಬವರ ಮೇಲೆ ದಾಖಲಾಗಿದ್ದ ಈ ಪ್ರಕರಣದಲ್ಲಿ, ಎಸ್‌ಸಿ ಸಂಖ್ಯೆ 108/21ರಲ್ಲಿ ವಿಚಾರಣೆ ನಡೆಸಿ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ. ಆರೋಪಿ ಪರವಾಗಿ ಹೈಕೋರ್ಟ್/ವಿಶೇಷ ವಕೀಲರಾದ ಶಿವಾನಂದ ಎಂ. ವಕ್ತೀರಿ ವಿಟ್ಲ ಅವರು ವಾದ ಮಂಡಿಸಿದ್ದರು.

    ಪ್ರಕರಣದ ಹಿನ್ನೆಲೆ ಮತ್ತು ವಿವರ:
    ದೂರುದಾರರಾದ ಗಂಗಾಧರ ಪೂಜಾರಿ ಎಂಬವರು ನೀಡಿದ ದೂರಿನನ್ವಯ, 2018ರ ಮಾರ್ಚ್ 10ರಂದು ರಾತ್ರಿ ಸುಮಾರು 7:45 ಗಂಟೆಯ ವೇಳೆಗೆ ತಮ್ಮ ಮನೆಯಿಂದ ಬೊಂದೇಲ್ ಕಡೆಗೆ ತೆರಳುತ್ತಿದ್ದರು. ಅವರು 5ನೇ ಬ್ಲಾಕ್‌ನಿಂದ 9ನೇ ಬ್ಲಾಕ್‌ಗೆ ಹೋಗುವ ಒಳರಸ್ತೆಗೆ ತಲುಪಿದಾಗ, ಎದುರುಗಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಪ್ರಶಾಂತ್ ಭಂಡಾರಿ ದಾರಿ ತಡೆದು ನಿಲ್ಲಿಸಿದ್ದನು.

    ನಂತರ ಅಸಭ್ಯಯೆಯಿಂದ ಅವಾಚ್ಯ ಶಬ್ದಗಳಿಂದ ಬೈದು, ತಾನು ಕೈಯಲ್ಲಿದ್ದ ಹರಿತವಾದ ಚೂರಿಯಿಂದ ಗಂಗಾಧರ ಪೂಜಾರಿ ಅವರ ಬಲಗೈ ತೋಳು, ಬಲ ಭುಜ, ಎಡ ಕಿಬ್ಬೊಟ್ಟೆ, ಬೆನ್ನಿನ ಮಧ್ಯಭಾಗ ಹಾಗೂ ಬೆನ್ನಿನ ಎಡ ಬದಿಗೆ ತಿವಿದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಇವರ ನಡುವೆ ನಡೆದಿದ್ದ ಹಿಂದಿನ ಗಲಾಟೆಯೇ ಈ ಹಲ್ಲೆಗೆ ಕಾರಣ ಎಂದು ದೂರುದಾರರು ಆರೋಪಿಸಿದ್ದರು.

    ಈ ಘಟನೆಗೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ತನಿಖಾಧಿಕಾರಿಯಾದ ಗೋಪಾಲ್ ಜೋಗಲೇಕರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿದ್ದರು.

    ನ್ಯಾಯಾಲಯದ ತೀರ್ಪು:
    ಪ್ರಕರಣದ ವಿಚಾರಣೆ ವೇಳೆ ಸರ್ಕಾರದ ಪರವಾಗಿ ಒಟ್ಟು 14 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ, ವಿಚಾರಣೆಯ ಸಮಯದಲ್ಲಿ ಆರೋಪಿಯ ಮೇಲಿನ ಕೃತ್ಯವು ಸಾಕ್ಷ್ಯಾಧಾರಗಳ ಕೊರತೆಯಿಂದ ದೃಢಪಡದ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಲಯವು ಆರೋಪಿ ಪ್ರಶಾಂತ್ ಪೂಜಾರಿಯನ್ನು ದೋಷ ಮುಕ್ತ ಮಾಡಲಾಗಿದೆ

    Post Views: 1

    Related Posts

    ಉಡುಪಿ: ನಾಲ್ಕು ಕಾರುಗಳ ನಡುವೆ ಸರಣಿ ಅಪಘಾತ!!

    September 23, 2026

    ಮಂಗಳೂರು: ಅಕ್ರಮವಾಗಿ ಜಾನುವಾರು ಸಾಗಟ- ಲಾರಿ ಹಾಗೂ ಚಾಲಕ ವಶಕ್ಕೆ

    September 23, 2026

    ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಕೊಲೆ..!! ಕಾರಿನಲ್ಲಿ 9 ತುಂಡಾಗಿ ಶವ ಪತ್ತೆ!!

    September 23, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಸುರತ್ಕಲ್: 2018ರ ಕೊಲೆ ಯತ್ನ ಪ್ರಕರಣ – ಆರೋಪಿ ಪ್ರಶಾಂತ್ ಭಂಡಾರಿ ದೋಷಮುಕ್ತ

    September 23, 2026

    ಉಡುಪಿ: ನಾಲ್ಕು ಕಾರುಗಳ ನಡುವೆ ಸರಣಿ ಅಪಘಾತ!!

    September 23, 2026

    ಮಂಗಳೂರು: ಅಕ್ರಮವಾಗಿ ಜಾನುವಾರು ಸಾಗಟ- ಲಾರಿ ಹಾಗೂ ಚಾಲಕ ವಶಕ್ಕೆ

    September 23, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.