Facebook Twitter Instagram
    Saturday, October 3
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕಾರು ಕೊಡಿಸುವುದಾಗಿ ಹೇಳಿ 5 ಲಕ್ಷ ವಂಚನೆ!!
    ಇತ್ತೀಚಿನ ಸುದ್ದಿ

    ಕಾರು ಕೊಡಿಸುವುದಾಗಿ ಹೇಳಿ 5 ಲಕ್ಷ ವಂಚನೆ!!

    October 3, 2026
    Share

    ಕಾರವಾರ:ಕಾರು ಕೊಡಿಸುವುದಾಗಿ ನಂಬಿಸಿ ,ಗುತ್ತಿಗೆದಾರನಿಂದ 5.5 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ದಾಂಡೇಲಿಯಲ್ಲಿ ನಡೆದಿದೆ.

    ಈ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಯಲ್ಲಾಪುರ ತಾಲೂಕಿನ ಗುಳ್ಳಾಪುರ ನಿವಾಸಿ ಶಿವಕುಮಾರ ಮುರಗೇಶ ಗೌಂಡರ (33) ವಂಚಿಸಿದ ಆರೋಪಿಯಾಗಿದ್ದಾನೆ.

    ಹಳೇ ದಾಂಡೇಲಿಯ ಲಕ್ಷ್ಮಿ ಚಾಳ ನಿವಾಸಿ, ವೃತ್ತಿಯಲ್ಲಿ ಕಾಂಟ್ರಾಕ್ಟರ್ ಆಗಿರುವ 27 ವರ್ಷದ ಗೋಪಾಲ್‌ಸಿಂಗ್ ಸುಧೀರ್‌ಸಿಂಗ್ ರಜಪೂತ ಹಣ ಕಳೆದುಕೊಂಡವ.‌

    ಆರೋಪಿ ಶಿವಕುಮಾರ್ ಗೌಂಡರ್ , ಗುತ್ತಿಗೆದಾರ ಗೋಪಾಲ್‌ಸಿಂಗ್ ಗೆ ಸೋವಿ ರೇಟಿನಲ್ಲಿ ಕಾರು ಕೊಡಿಸುವುದಾಗಿ ನಂಬಿಸಿದ್ದ ಎನ್ನಲಾಗಿದೆ.ಮಾತು ನಂಬಿದ ಗೋಪಾಲ್‌ಸಿಂಗ್, ದಿನಾಂಕ 16 ಜುಲೈ 2025 ರಂದು ಫೋನ್‌ಪೇ ಮತ್ತು ಬ್ಯಾಂಕ್ ಖಾತೆಗಳ ಮೂಲಕ ಒಟ್ಟು 5,05,000 ರೂಪಾಯಿಗಳನ್ನು ಆರೋಪಿಗೆ ಪಾವತಿಸಿದ್ದರು.

    ಹಣ ಪಡೆದ ನಂತರ ಆರೋಪಿ ಶಿವಕುಮಾರ್, ಬೇರಾರಿಗೋ ಸೇರಿದ ಕಪ್ಪು ಬಣ್ಣದ ಕ್ರೆಟಾ (Creta) ಕಾರನ್ನು (ನೋಂದಣಿ ಸಂಖ್ಯೆ: KA 19 MF 4585) ತಂದು ಗೋಪಾಲ್‌ಸಿಂಗ್‌ಗೆ ನೀಡಿದ್ದ. ಅಲ್ಲದೆ, ಇನ್ನು 2 ದಿನಗಳಲ್ಲಿ ಕಾರಿನ ಅಧಿಕೃತ ಕಾಗದಪತ್ರಗಳನ್ನು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದ. ಆದರೆ, ಕೆಲ ದಿನಗಳ ಬಳಿಕ ಕಾರಿನ ಅಸಲಿ ಮಾಲೀಕರು ಬಂದು ತಮ್ಮ ಕಾರನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ.

    ಆ ಬಳಿಕ ಆರೋಪಿ ಶಿವಕುಮಾರ್, ಕಾಂಟ್ರಾಕ್ಟರ್‌ಗೆ ಬೇರೆ ಕಾರನ್ನೂ ಕೊಡದೆ ಹಾಗೂ ಪಡೆದುಕೊಂಡಿದ್ದ 5,05,000 ರೂ. ಹಣವನ್ನೂ ಹಿಂದಿರುಗಿಸದೆ ಉದ್ದೇಶಪೂರ್ವಕವಾಗಿ ವಂಚನೆ ಎಸಗಿದ್ದಾನೆ.

    ಹಣ ಕೊಟ್ಟು ಮೋಸ ಹೋದ ಬಗ್ಗೆ ಗೋಪಾಲ್‌ಸಿಂಗ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 318 (4) ರ ಅಡಿಯಲ್ಲಿ (ಅಪರಾಧ ಕ್ರಮಾಂಕ: 141/2026) ವಂಚನೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

    Post Views: 8

    Related Posts

    ಕಾಸರಗೋಡು: ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿಬಿದ್ದ ಬೋರ್‌ವೆಲ್ ಲಾರಿ – ಇಬ್ಬರು ಕಾರ್ಮಿಕರು ದುರ್ಮರಣ

    October 3, 2026

    ಕಾಪು: 5 ವರ್ಷದ ಮಗಳೊಂದಿಗೆ ತಂದೆ ನಾಪತ್ತೆ!! ಪ್ರಕರಣ ದಾಖಲು..!

    October 3, 2026

    ಬಂದೂಕು ತಪಾಸಣೆ ವೇಳೆ ನಿಯಮ ಉಲ್ಲಂಘನೆ ಪತ್ತೆ: ಪರವಾನಿಗೆದಾರನ ವಿರುದ್ಧ ಕೇಸ್

    October 2, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಕಾಸರಗೋಡು: ನಿಯಂತ್ರಣ ತಪ್ಪಿ ಮನೆ ಮೇಲೆ ಉರುಳಿಬಿದ್ದ ಬೋರ್‌ವೆಲ್ ಲಾರಿ – ಇಬ್ಬರು ಕಾರ್ಮಿಕರು ದುರ್ಮರಣ

    October 3, 2026

    ಕಾಪು: 5 ವರ್ಷದ ಮಗಳೊಂದಿಗೆ ತಂದೆ ನಾಪತ್ತೆ!! ಪ್ರಕರಣ ದಾಖಲು..!

    October 3, 2026

    ಕಾರು ಕೊಡಿಸುವುದಾಗಿ ಹೇಳಿ 5 ಲಕ್ಷ ವಂಚನೆ!!

    October 3, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.