ಮಂಗಳೂರು : ಇಲ್ಲಿನ ನಗರದ ನೆಹರು ಮೈದಾನದ ಸಮೀಪ ಅಕ್ರಮವಾಗಿ ವನ್ಯಜೀವಿಯಾದ ಜಿಂಕೆಯ ಕೊಂಬುಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಐಡಿ ಅರಣ್ಯ ಸಂಚಾರ ದಳದ ಅಧಿಕಾರಿಗಳು(FMS) ಖಚಿತ ಮಾಹಿತಿ ಮೇರೆಗೆ ನ.24 ರಂದು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದರಹಳ್ಳಿ ನಿವಾಸಿ ಕಿರಣ್ (23) ಬಂಧಿತ ಆರೋಪಿಯಾಗಿದ್ದು, ಈ ವೇಳೆ ಆತನ ಬಳಿಯಿದ್ದ ಮೂರು ಜಿಂಕೆ ಕೊಂಬುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಅರಣ್ಯ ಸಂಚಾರ ದಳದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ(FMS) ಪೊಲೀಸ್ ಅಧೀಕ್ಷಕರಾದ ಪವನ್ ನನ್ನೂರು, ಐಪಿಎಸ್ ಅವರ ಮಾರ್ಗದರ್ಶನದಂತೆ, ಮಂಗಳೂರು ಸಿಐಡಿ ಅರಣ್ಯ ಸಂಚಾರಿ ದಳದ (FMS)
ಪಿಎಸ್ಐ ದಿಲೀಪ್ ಜಿ.ಆರ್ ಮತ್ತು ಸಿಬ್ಬಂದಿಯಾದ ಜಯರಾಮ.ಕೆ.ಟಿ, ತಾರಾನಾಥ್.ಎಸ್, ಬಾಲಕೃಷ್ಣ.ಕೆ.ಎಮ್, ಇರ್ಷಾದ್ ಪಡಂಗಡಿ ಅವರು ಕಾರ್ಯಾಚರಣೆಯನ್ನು ಯಶಸ್ವಿಗೊಳಿಸುವಲ್ಲಿ ಕೈಜೋಡಿಸಿದ್ದರು.




