ನವದೆಹಲಿ: ಟಾಟಾ ಸಮೂಹದ ಒಡೆತನದಲ್ಲಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ನೂತನ ಲೋಗೊವನ್ನು ಗುರುವಾರ ಅನಾವರಣಗೊಳಿಸಲಾಯಿತು.
ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಟಾಟಾ ಸನ್ಸ್ ಸ್ವಾಧೀನಪಡಿಸಿಕೊಂಡ ಒಂದೂವರೆ ವರ್ಷಗಳ ಬಳಿಕ ಸಂಸ್ಥೆಗೆ ಹೊಸ ಬ್ರ್ಯಾಂಡ್ ಅನ್ನು ಪರಿಚಯಿಸಲಾಗಿದೆ.
ಹೊಸ ಲೋಗೋ ಮತ್ತು ಲಿವರಿ ಬಣ್ಣಗಳನ್ನು ಗುರುವಾರ ಬಹಿರಂಗಪಡಿಸಲಾಗಿದ್ದು, ಲೋಗೋದ ಭಾಗವಾಗಿ, ಏರ್ ಇಂಡಿಯಾ ನೇರಳೆ ಬಣ್ಣದ ಡ್ಯಾಶ್‌ನೊಂದಿಗೆ ಕೆಂಪು ಮತ್ತು ಬಿಳಿ ಬಣ್ಣವನ್ನು ಉಳಿಸಿಕೊಂಡಿದೆ. ಹೊಸ ಲೋಗೋವನ್ನು ‘ದಿ ವಿಸ್ಟಾ’ ಎಂದು ಕರೆಯಲಾಗುವುದು ಎಂದು ಸಂಸ್ಥೆ ಹೇಳಿಕೊಂಡಿದೆ.
ಕಾರ್ಯಕ್ರಮದ ಭಾಗವಾಗಿ ಏರ್‌ಲೈನ್ ತನ್ನ ಹೊಸ ಟೈಲ್ ವಿನ್ಯಾಸ ಮತ್ತು ಥೀಮ್ ಸಾಂಗ್ ಅನ್ನು ಕೂಡ ಬಿಡುಗಡೆ ಮಾಡಿದೆ. ಲಾಂಛನವು ಮಿತಿಯಿಲ್ಲದ ಸಾಧ್ಯತೆಗಳು ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಚಂದ್ರಶೇಖರನ್ ಹೇಳಿದ್ದಾರೆ.
ಜನವರಿ 27, 2022 ರಂದು, ಟಾಟಾ ಸನ್ಸ್ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಏರ್ ಇಂಡಿಯಾದಲ್ಲಿ ಸಂಪೂರ್ಣ ಮಾಲೀಕತ್ವದ ಪಾಲನ್ನು ಪಡೆದುಕೊಂಡಿತು.
ಈ ಸ್ವಾಧೀನದ ನಂತರ, ಟಾಟಾ ಸನ್ಸ್ ಏರ್ ಇಂ ಮತ್ತು ವಿಸ್ತಾರಾವನ್ನು ಒಂಡಿಯಾದೇ ಏಕೀಕೃತ ಘಟಕವಾಗಿ ವಿಲೀನಗೊಳಿಸುವ ಉದ್ದೇಶವನ್ನು ಬಹಿರಂಗಪಡಿಸಿತು.
ಈ ವಿಲೀನ ಪ್ರಕ್ರಿಯೆಯು ಮಾರ್ಚ್ 2024 ರೊಳಗೆ ಅಂತಿಮಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ವಿಲೀನದ ಭಾಗವಾಗಿ, ಸಿಂಗಾಪುರ್ ಏರ್‌ಲೈನ್ಸ್ ಹೊಸದಾಗಿ ರೂಪುಗೊಂಡ ಕಂಪನಿಯಲ್ಲಿ ಶೇ. 25 ಪ್ರತಿಶತ ಮಾಲೀಕತ್ವದ ಪಾಲನ್ನು ಹೊಂದಲು ಸಜ್ಜಾಗಿದೆ.