Facebook Twitter Instagram
    Monday, June 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಏರ್ ಇಂಡಿಯಾದ ನೂತನ ಲೋಗೋ ಬಿಡುಗಡೆ ಮಾಡಿದ ಟಾಟಾ ಸಂಸ್ಥೆ
    ಇತ್ತೀಚಿನ ಸುದ್ದಿ

    ಏರ್ ಇಂಡಿಯಾದ ನೂತನ ಲೋಗೋ ಬಿಡುಗಡೆ ಮಾಡಿದ ಟಾಟಾ ಸಂಸ್ಥೆ

    August 11, 2023
    Share

    ನವದೆಹಲಿ: ಟಾಟಾ ಸಮೂಹದ ಒಡೆತನದಲ್ಲಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ನೂತನ ಲೋಗೊವನ್ನು ಗುರುವಾರ ಅನಾವರಣಗೊಳಿಸಲಾಯಿತು.

    ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಟಾಟಾ ಸನ್ಸ್ ಸ್ವಾಧೀನಪಡಿಸಿಕೊಂಡ ಒಂದೂವರೆ ವರ್ಷಗಳ ಬಳಿಕ ಸಂಸ್ಥೆಗೆ ಹೊಸ ಬ್ರ್ಯಾಂಡ್ ಅನ್ನು ಪರಿಚಯಿಸಲಾಗಿದೆ.

    ಹೊಸ ಲೋಗೋ ಮತ್ತು ಲಿವರಿ ಬಣ್ಣಗಳನ್ನು ಗುರುವಾರ ಬಹಿರಂಗಪಡಿಸಲಾಗಿದ್ದು, ಲೋಗೋದ ಭಾಗವಾಗಿ, ಏರ್ ಇಂಡಿಯಾ ನೇರಳೆ ಬಣ್ಣದ ಡ್ಯಾಶ್‌ನೊಂದಿಗೆ ಕೆಂಪು ಮತ್ತು ಬಿಳಿ ಬಣ್ಣವನ್ನು ಉಳಿಸಿಕೊಂಡಿದೆ. ಹೊಸ ಲೋಗೋವನ್ನು ‘ದಿ ವಿಸ್ಟಾ’ ಎಂದು ಕರೆಯಲಾಗುವುದು ಎಂದು ಸಂಸ್ಥೆ ಹೇಳಿಕೊಂಡಿದೆ.

    ಕಾರ್ಯಕ್ರಮದ ಭಾಗವಾಗಿ ಏರ್‌ಲೈನ್ ತನ್ನ ಹೊಸ ಟೈಲ್ ವಿನ್ಯಾಸ ಮತ್ತು ಥೀಮ್ ಸಾಂಗ್ ಅನ್ನು ಕೂಡ ಬಿಡುಗಡೆ ಮಾಡಿದೆ. ಲಾಂಛನವು ಮಿತಿಯಿಲ್ಲದ ಸಾಧ್ಯತೆಗಳು ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಚಂದ್ರಶೇಖರನ್ ಹೇಳಿದ್ದಾರೆ.

    ಜನವರಿ 27, 2022 ರಂದು, ಟಾಟಾ ಸನ್ಸ್ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಏರ್ ಇಂಡಿಯಾದಲ್ಲಿ ಸಂಪೂರ್ಣ ಮಾಲೀಕತ್ವದ ಪಾಲನ್ನು ಪಡೆದುಕೊಂಡಿತು.

    ಈ ಸ್ವಾಧೀನದ ನಂತರ, ಟಾಟಾ ಸನ್ಸ್ ಏರ್ ಇಂ ಮತ್ತು ವಿಸ್ತಾರಾವನ್ನು ಒಂಡಿಯಾದೇ ಏಕೀಕೃತ ಘಟಕವಾಗಿ ವಿಲೀನಗೊಳಿಸುವ ಉದ್ದೇಶವನ್ನು ಬಹಿರಂಗಪಡಿಸಿತು.

    ಈ ವಿಲೀನ ಪ್ರಕ್ರಿಯೆಯು ಮಾರ್ಚ್ 2024 ರೊಳಗೆ ಅಂತಿಮಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ವಿಲೀನದ ಭಾಗವಾಗಿ, ಸಿಂಗಾಪುರ್ ಏರ್‌ಲೈನ್ಸ್ ಹೊಸದಾಗಿ ರೂಪುಗೊಂಡ ಕಂಪನಿಯಲ್ಲಿ ಶೇ. 25 ಪ್ರತಿಶತ ಮಾಲೀಕತ್ವದ ಪಾಲನ್ನು ಹೊಂದಲು ಸಜ್ಜಾಗಿದೆ.

    Post Views: 288

    Related Posts

    ಆಂಬ್ಯುಲೆನ್ಸ್ ಸಿಗದೆ ಹೃದಯಾಘಾತ ರೋಗಿ ಸಾವು; ಕೊಕ್ಕಡ ಆರೋಗ್ಯ ವ್ಯವಸ್ಥೆ ವಿರುದ್ಧ ಆಕ್ರೋಶ

    June 8, 2026

    ಹಠಾತ್ ಹವಾಮಾನ ವೈಪರೀತ್ಯದ ಹೊಡೆತ: ದೆಹಲಿ ಏರ್‌ಪೋರ್ಟ್‌ನಲ್ಲಿ 3 ವಿಮಾನಗಳು ಜಖಂ

    June 8, 2026

    ಕನ್ನಡಿಗರಿಗೆ ಅವಮಾನ, ಭಕ್ತರ ಮೇಲೆ ರೌಡಿಸಂ-ಕೊಟ್ಟಿಯೂರು ಮಹೋತ್ಸವದಲ್ಲಿ ವಿವಾದ

    June 8, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.