Facebook Twitter Instagram
    Saturday, April 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು : ಕೋಸ್ಟ್‌ಗಾರ್ಡ್‌ಗೆ “ಎಎಲ್‌ಎಚ್‌ ಹೆಲಿಕಾಪ್ಟರ್‌ ಸಿಜಿ 87′ ಸೇರ್ಪಡೆ
    ಇತ್ತೀಚಿನ ಸುದ್ದಿ

    ಮಂಗಳೂರು : ಕೋಸ್ಟ್‌ಗಾರ್ಡ್‌ಗೆ “ಎಎಲ್‌ಎಚ್‌ ಹೆಲಿಕಾಪ್ಟರ್‌ ಸಿಜಿ 87′ ಸೇರ್ಪಡೆ

    November 17, 2022
    Share

    ಮಂಗಳೂರು: ಭಾರತೀಯ ತಟರಕ್ಷಣ ಪಡೆಗೆ ಸೇರ್ಪಡೆಗೊಳ್ಳಲಿರುವ ಬೆಂಗಳೂರಿನ ಎಚ್‌ಎಎಲ್‌ ನಿರ್ಮಿತ “ಅತ್ಯಾಧುನಿಕ ಹಗುರ ಹೆಲಿಕಾಪ್ಟರ್‌(ಎಎಲ್‌ಎಚ್‌) ಸಿಜಿ 870′ ಸ್ವೀಕಾರ ಸಮಾರಂಭ ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಮಂಗಳವಾರ ಜರಗಿತು.

    ಈ ಹೆಲಿಕಾಪ್ಟರ್‌ ಚೆನ್ನೈಯಲ್ಲಿ ಸೇವೆಗೆ ಸೇರ್ಪಡೆಗೊಳ್ಳಲಿದೆ. ಇದರೊಂದಿಗೆ ಎಚ್‌ಎಎಲ್‌ನೊಂದಿಗೆ ತಟರಕ್ಷಣ ಪಡೆ 2017ರ ಮಾ. 29ರಲ್ಲಿ ನಡೆಸಿದ ಒಪ್ಪಂದ ಮುಕ್ತಾಯಗೊಳ್ಳಲಿದ್ದು ಮುಂದೆ 9 ಸುಸಜ್ಜಿತ ಎಎಲ್‌ಎಚ್‌ ಎಂಕೆ-3 ಹೆಲಿಕಾಪ್ಟರ್‌ಗಳ ಉತ್ಪಾದನೆಗೆ ಎಚ್‌ಎಎಲ್‌ನೊಂದಿಗೆ ಒಡಂಬಡಿಕೆ ನಡೆಸಲು ಮುಂದಾಗಿದೆ.

    ಸಮಾರಂಭದಲ್ಲಿ ಭಾರತೀಯ ತಟರಕ್ಷಣ ಪಡೆ (ಪೂರ್ವ ವಿಭಾಗ) ಯ ಮಹಾನಿರ್ದೇಶಕ ವಿ.ಎಸ್‌. ಪಠಾನಿಯಾ ಮಾತನಾಡಿ, ಕಳೆದೆರಡು ದಶಕಗಳಲ್ಲಿ ಭಾರತೀಯ ಸಮುದ್ರ ತಟರಕ್ಷಣೆಯಲ್ಲಿ ಮಹತ್ವದ ಬೆಳವಣಿಗೆಗಳಾಗಿವೆ. ಕಣ್ಗಾವಲು, ಗುಪ್ತಚರ ಮಾಹಿತಿ ಸಂಗ್ರ ಮತ್ತು ಸಂಬಂಧಿಸಿದ ಭದ್ರತಾ ಸಂಸ್ಥೆಗಳೊಂದಿಗೆ ಮಾಹಿತಿ ವಿನಿಮಯ, ತುರ್ತು ಸಂದರ್ಭದಲ್ಲಿ ಪರಿಣಾಮಕಾರಿ ಸ್ಪಂದನೆ ಮಾಡಲಾಗುತ್ತಿದೆ. ತಟರಕ್ಷಣ ಪಡೆಯ ಜವಾಬ್ದಾರಿಗಳು ಹೆಚ್ಚಿರುವುದರಿಂದ ನಾಲ್ಕು ಎಎಲ್‌ಎಚ್‌ ಎಂಕೆ -3 ಹೆಲಿಕಾಪ್ಟರ್‌ಗಳ ಸೇರ್ಪಡೆ ಮಿಷನ್‌ ಆರಂಭಿಸಲಾಗಿದ್ದು ಇದು “ಎಎಲ್‌ಎಚ್‌ ಸಿಜಿ 870′ ಸೇರ್ಪಡೆಯೊಂದಿಗೆ ಪೂರ್ಣಗೊಳ್ಳುತ್ತಿದೆ’ ಎಂದರು.

    ತಟರಕ್ಷಣ ಪಡೆಯ ಹೆಚ್ಚುವರಿ ಮಹಾ ನಿರ್ದೇಶಕ ಕೆ.ಆರ್‌. ಸುರೇಶ್‌ ಉಪಸ್ಥಿತರಿದ್ದರು.

    ಭಾರತೀಯ ತಟರಕ್ಷಣಾ ಪಡೆ ದಿನದ 24 ಗಂಟೆಗಳ ಕಾಲ ಸಮುದ್ರ ತಟದಲ್ಲಿ ನಿಗಾ ವಹಿಸುತ್ತಿದೆ. ಭದ್ರತೆಯ ಜತೆಗೆ ತೈಲ, ಮೀನು, ಖನಿಜ ಸೇರಿದಂತೆ ಆಸ್ತಿಗಳ ಸಂರಕ್ಷಣೆ, ಜನರ ಪ್ರಾಣರಕ್ಷಣೆ ಮೊದಲಾದ ಕೆಲಸಗಳನ್ನು ಮಾಡುತ್ತಿದೆ.

    Post Views: 160

    Related Posts

    ಭಾರತದ ನಕ್ಷೆಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ರಾಜಧಾನಿಗೆ ಸಂಸತ್ತಿನ ಕಾನೂನು ಮಾನ್ಯತೆ

    April 24, 2026

    ಪಾತ್ರೆಯಲ್ಲಿ ಸಿಲುಕಿದ ಪುಟ್ಟ ಮಗು: ಪೊಲೀಸರ ಸಮಯೋಚಿತ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ

    April 24, 2026

    ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು

    April 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.