Facebook Twitter Instagram
    Friday, November 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಎಲೆಕ್ಟ್ರಿಷಿಯನ್‌ ನನ್ನು ತಡೆದು ಹಲ್ಲೆ, ಬೆದರಿಕೆ- ಮೂವರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲು
    ಇತ್ತೀಚಿನ ಸುದ್ದಿ

    ಮಂಗಳೂರು: ಎಲೆಕ್ಟ್ರಿಷಿಯನ್‌ ನನ್ನು ತಡೆದು ಹಲ್ಲೆ, ಬೆದರಿಕೆ- ಮೂವರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲು

    November 6, 2026
    Share

    ಮಂಗಳೂರು: ರಾತ್ರಿ ವೇಳೆ ಎಲೆಕ್ಟ್ರಿಷಿಯನ್ ಒಬ್ಬರನ್ನು ತಡೆದು ಹಲ್ಲೆ ನಡೆಸಿ, ಬೆದರಿಕೆ ಹಾಕಿ ಒಟ್ಟು 4,000 ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

    ವಿಟ್ಲ ಮುಡ್ನೂರು ಮೂಲದ ರವಿರಾಜ್ ದೂರು ನೀಡಿದವರಾಗಿದ್ದಾರೆ. ಅವರು ಪಾಂಡೇಶ್ವರದ ಶಿವನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕಂಕನಾಡಿಯ ಖಾಸಗಿ ಸಂಸ್ಥೆಯೊಂದರಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.

    ದೂರಿನ ಪ್ರಕಾರ, ಮೊದಲ ಘಟನೆ ಆಗಸ್ಟ್ 25 ರಂದು ರಾತ್ರಿ ಸುಮಾರು 10 ಗಂಟೆಗೆ ನಡೆದಿದೆ. ರವಿರಾಜ್ ನೆಹರೂ ಮೈದಾನದಲ್ಲಿ ವಾಕಿಂಗ್ ಮುಗಿಸಿ ಬಾಡಿಗೆ ಮನೆಗೆ ಹಿಂತಿರುಗುತ್ತಿದ್ದಾಗ, ಆರ್‌ಟಿಒ ಕಚೇರಿ ಬಳಿ ಹೊಯ್ಸಳ ಗಸ್ತು ವಾಹನದಲ್ಲಿ ಬಂದ ಮೂವರು ಪೊಲೀಸ್ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಅವರನ್ನು ಪಾಂಡೇಶ್ವರ ಪೊಲೀಸ್ ಠಾಣೆಗೆ ಸೇರಿದ ಚಾಲಕ ಹಿರಣ್ಣ ಬೆನ್ನಿ, ಸಿಬ್ಬಂದಿಗಳಾದ ಶಿವರಾಜ್ ಮತ್ತು ಉಮಾಕಾಂತ್ ಎಂದು ಗುರುತಿಸಲಾಗಿದೆ.ಆರೋಪಿ ಸಿಬ್ಬಂದಿ ರವಿರಾಜ್ ಅವರ ಭುಜ ಮತ್ತು ಕಾಲಿಗೆ ಲಾಠಿಯಿಂದ ಹೊಡೆದು, ಅವರ ಮೊಬೈಲ್ ಫೋನ್ ಹಾಗೂ ಕವರ್‌ನಲ್ಲಿದ್ದ 300 ರೂಪಾಯಿ ನಗದನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಅಲ್ಲದೆ, ಅಸಭ್ಯ ಭಾಷೆಯಿಂದ ನಿಂದಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾರೆ ಎನ್ನಲಾಗಿದೆ.ಆಗಸ್ಟ್ 27 ರಂದು ರವಿರಾಜ್ ಮತ್ತೆ ಅದೇ ಸ್ಥಳದಲ್ಲಿ ವಾಕಿಂಗ್ ಮಾಡುತ್ತಿದ್ದಾಗ, ಹಿರಣ್ಣ ಬೆನ್ನಿ ಮತ್ತು ಇತರ ಸಿಬ್ಬಂದಿ ಹೊಯ್ಸಳ ವಾಹನದಲ್ಲಿ ಬಂದು ಅವರ ಮೊಬೈಲ್ ಫೋನ್, ಕರ್ನಾಟಕ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್‌ನ ಎರಡು ಎಟಿಎಂ ಕಾರ್ಡ್‌ಗಳು, 1,000 ರೂಪಾಯಿ ನಗದು ಹಾಗೂ ದ್ವಿಚಕ್ರ ವಾಹನದ ಕೀಲಿಯನ್ನು ಕಸಿದುಕೊಂಡಿದ್ದಾರೆ. ಸ್ಥಳದಲ್ಲೇ ಇರಲು ಸೂಚಿಸಿ ಅವರು ತೆರಳಿದ್ದರು.ರಾತ್ರಿ 11:30 ರ ಸುಮಾರಿಗೆ ಮತ್ತೆ ಹೊಯ್ಸಳ ವಾಹನದಲ್ಲಿ ಬಂದ ಸಿಬ್ಬಂದಿ, ರವಿರಾಜ್ ಅವರನ್ನು ಬಲವಂತವಾಗಿ ವಾಹನದಲ್ಲಿ ಕುಳ್ಳಿರಿಸಿ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ತಮ್ಮ ಬಳಿ ಎಟಿಎಂ ಕಾರ್ಡ್‌ಗಳು ಮಾತ್ರ ಇವೆ ಎಂದು ರವಿರಾಜ್ ಹೇಳಿದಾಗ, ಮೊಬೈಲ್ ಪಾಸ್‌ವರ್ಡ್ ಪಡೆದು ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದ್ದಾರೆ. ಖಾತೆಯಲ್ಲಿ ಸುಮಾರು 5,000 ರೂಪಾಯಿ ಇರುವುದನ್ನು ಕಂಡು, 2,000 ರೂಪಾಯಿ ನೀಡುವಂತೆ ಪಟ್ಟು ಹಿಡಿದಿದ್ದಾರೆ.ಹಣ ನೀಡದಿದ್ದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹಣ ಸಾಲದ ಕಂತು ಪಾವತಿಗೆ ಮೀಸಲಿಟ್ಟಿದ್ದು, ತಾವೇನೂ ತಪ್ಪು ಮಾಡಿಲ್ಲ ಎಂದು ರವಿರಾಜ್ ಎಷ್ಟೇ ಹೇಳಿದರೂ ಸಿಬ್ಬಂದಿ ಕೇಳಲಿಲ್ಲ. ಬಳಿಕ ಅವರನ್ನು ಮಂಗಳಾದೇವಿ ದೇವಾಲಯದ ಬಳಿಯ ಎಸ್‌ಬಿಐ ಎಟಿಎಂಗೆಗೆ ಕರೆದೊಯ್ದು ಬಲವಂತವಾಗಿ ಹಣ ಡ್ರಾ ಮಾಡಿಸಿದ್ದಾರೆ. ಒಟ್ಟು 3,000 ರೂಪಾಯಿ ಪಡೆದುಕೊಂಡು ರವಿರಾಜ್ ಅವರನ್ನು ಅಲ್ಲೇ ಬಿಟ್ಟು ತೆರಳಿದ್ದಾರೆ.ಮತ್ತೊಂದು ಘಟನೆಯಲ್ಲಿ, ನವೆಂಬರ್ 4 ರಂದು ರವಿರಾಜ್ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಸಿಬ್ಬಂದಿ ವಾಹನದ ಕೀಲಿಯನ್ನು ಕಿತ್ತುಕೊಂಡು, ಹೊಯ್ಸಳ ವಾಹನದಲ್ಲಿ ಪಾಂಡೇಶ್ವರದ ಮಾಲ್ ಒಂದರವರೆಗೆ ಕರೆದೊಯ್ದಿದ್ದಾರೆ. ಮೊಬೈಲ್ ಫೋನ್ ಕಸಿದುಕೊಂಡು, ಠಾಣೆಗೆ ಬಂದು ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.ಮೊದಲಿಗೆ ಮೊಬೈಲ್ ಹಿಂತಿರುಗಿಸಲು ದಂಡ ತೆರಬೇಕಾಗುತ್ತದೆ ಎಂದು ಹೇಳಿದ್ದ ಸಿಬ್ಬಂದಿ, ನಂತರ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಲು ಸಾಧ್ಯವಿಲ್ಲ, ಠಾಣೆಗೆ ಬರುವುದಾಗಿ ರವಿರಾಜ್ ತಿಳಿಸಿದ್ದಾರೆ. ಆ ನಂತರ ಅದೇ ರಾತ್ರಿ ರವಿರಾಜ್ ಅವರಿಗೆ ಕರೆ ಮಾಡಿ ದ್ವಿಚಕ್ರ ವಾಹನವನ್ನು ಪಡೆದುಕೊಳ್ಳುವಂತೆ ಹೇಳಿದ್ದಾರೆ.ಇದೀಗ ತಮ್ಮ ಮೇಲಿನ ಹಲ್ಲೆ, ಬೆದರಿಕೆ, ಕಿರುಕುಳ ಮತ್ತು ಸುಲಿಗೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ರವಿರಾಜ್ ಮೂವರೂ ಪೊಲೀಸ್ ಸಿಬ್ಬಂದಿ ವಿರುದ್ಧ ದೂರು ನೀಡಿದ್ದಾರೆ.

    Post Views: 1

    Related Posts

    ಮಂಗಳೂರು: HDFC ಇನ್ಶೂರೆನ್ಸ್ ಹೆಸರಿನಲ್ಲಿ ₹2 ಲಕ್ಷ ಸೈಬರ್ ವಂಚನೆ!!

    November 6, 2026

    ಮಂಗಳೂರು: ಗಾಂಜಾ ಮಾರಾಟ ಜಾಲಕ್ಕೆ ಪೊಲೀಸರ ಬೇಟೆ ; 3.8 ಕೆ.ಜಿ. ಗಾಂಜಾ ಸಹಿತ ಯುವಕ ಅರೆಸ್ಟ್

    November 6, 2026

    ಚಾರ್ಮಾಡಿ ಸೇತುವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕೊಲೆ ಶಂಕೆ

    November 6, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಂಗಳೂರು: ಎಲೆಕ್ಟ್ರಿಷಿಯನ್‌ ನನ್ನು ತಡೆದು ಹಲ್ಲೆ, ಬೆದರಿಕೆ- ಮೂವರು ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲು

    November 6, 2026

    ಮಂಗಳೂರು: HDFC ಇನ್ಶೂರೆನ್ಸ್ ಹೆಸರಿನಲ್ಲಿ ₹2 ಲಕ್ಷ ಸೈಬರ್ ವಂಚನೆ!!

    November 6, 2026

    ಪತ್ನಿಯ ಕುಟುಂಬದ ಮೇಲೆಯೇ ಸೇಡು ; ಏಳು ಮಂದಿಯನ್ನು ಕೊಂದು ಮೃತದೇಹಗಳನ್ನು ಬೇರೆ ಬೇರೆ ಕಡೆ ಎಸೆದ ಕಿರಾತಕ

    November 6, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.