Facebook Twitter Instagram
    Tuesday, June 9
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಯುವಕನಿಗೆ ತಲವಾರಿನಿಂದ ಹಲ್ಲೆಗೆ ಯತ್ನ: ಜಾತಿ ನಿಂದನೆ ದೂರು ದಾಖಲು
    ಇತ್ತೀಚಿನ ಸುದ್ದಿ

    ಯುವಕನಿಗೆ ತಲವಾರಿನಿಂದ ಹಲ್ಲೆಗೆ ಯತ್ನ: ಜಾತಿ ನಿಂದನೆ ದೂರು ದಾಖಲು

    June 24, 2025
    Share

    ಕಾರ್ಕಳ : ಎರಡು ಗುಂಪುಗಳ ನಡುವಿನ ವೈಷಮ್ಯದ ಕಾರಣದಿಂದ ಮಾತಿಗೆ ಮಾತು ಬೆಳೆದು ಯುವಕನಿಗೆ ತಲವಾರಿನಿಂದ ಹಲ್ಲೆಗೆ ಯತ್ನಿಸಿ ಜಾತಿ ನಿಂದನೆಗೈದ ಆರೋಪದ ಮೇಲೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬೈಲೂರು ಸಮೀಪದ ಕೌಡೂರು ಗ್ರಾಮದ ಚರಣ್(22) ಹಾಗೂ ಆರೋಪಿಗಳಾದ ವಿಷ್ಣು ಮತ್ತು ಅಶ್ವಿನ್ ಎಂಬವರ ನಡುವೆ ಜೂ 21 ರಂದು ಬೈಲೂರಿನ ಪಳ್ಳಿ ಕ್ರಾಸ್ ಬಳಿ ರಾತ್ರಿ 8.30ರ ಸುಮಾರಿಗೆ ಜಗಳವಾಗಿತ್ತು.

    ಈ ಜಗಳದ ನಂತರ ವೈಯುಕ್ತಿಕ ದ್ವೇಷದಿಂದ ಅಶ್ವಿನ್ ಎಂಬಾತ ಚರಣ್ ಮೊಬೈಲ್ ಗೆ ಕರೆ ಮಾಡಿ ಅವಾಚ್ಯವಾಗಿ ಬೈದು ಬಳಿಕ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿದ್ದ. ಬಳಿಕ ಮತ್ತೆ ಮತ್ತೆ ಚರಣ್ ಗೆ ಕಾಲ್ ಮಾಡಿ ಜೋಡುರಸ್ತೆಗೆ ಬರುವಂತೆ ಒತ್ತಡ ಹಾಕಿ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆಯೊಡ್ಡಿದ್ದ.

    ಕೊನೆಗೂ ಚರಣ್ ಜೂ 22 ರಂದು ಭಾನುವಾರ ರಾತ್ರಿ 7.45ರ ವೇಳೆಗೆ ತನ್ನ ಚಿಕ್ಕಪ್ಪ ಜಗನ್ನಾಥ್, ಸುಂದರ್, ಕಿರಣ್, ರವಿ ಮತ್ತು ಕಿರಣ್ ಎಂಬವರೊoದಿಗೆ ರಂಗಪಲ್ಕೆಯ ಕೀರ್ತಿ ಬಾರ್ ಬಳಿ ನಿಂತುಕೊoಡಿದ್ದಾಗ ಅಲ್ಲಿಗೆ ಆರೋಪಿಗಳಾದ ಬೈಲೂರಿನ ಸುಜಿತ್, ವಿಷ್ಣು, ಅಶ್ವಿನ್, ಮಂಜುನಾಥ ಜಾರ್ಕಳ, ಯಶವಂತ್ ಹಾಗೂ ಇತರರು ಬೈಕಿನಲ್ಲಿ ಬಂದು ಚರಣ್ ಜತೆ ಗಲಾಟೆ ಮಾಡಿದ್ದಾರೆ.

    ಈ ವೇಳೆ ವಿಷ್ಣು ಎಂಬಾತನು ಚರಣ್ ಗೆ ತಲವಾರಿನಿಂದ ಹೊಡೆಯಲು ಬಂದಿದ್ದು, ಜಗನ್ನಾಥ್ ಮತ್ತು ಸುಂದರ್ ರವರು ತಡೆಯಲು ಹೋದಾಗ, ವಿಷ್ಣು ಜಗನ್ನಾಥ್‌ರವರಿಗೆ ಮುಖಕ್ಕೆ ಕೈಯಿಂದ ಹೊಡೆದ ಪರಿಣಾಮ ಎಡಬದಿಯ ಹಲ್ಲು ಮುರಿದಿದ್ದು, ಆಪಾದಿತರಾದ ಸುಜಿತ್ ಮತ್ತು ವಿಷ್ಣು ರವರು ಸುಂದರ್ ರವರಿಗೆ ಕೈಯಿಂದ ಎದೆಗೆ ಹೊಡೆದಿದ್ದಾರೆ ಎಂದು ಚರಣ್ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.

    Post Views: 161

    Related Posts

    ಮಂಗಳೂರು: ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

    June 9, 2026

    ವೆನ್‌ಲಾಕ್ ಆಸ್ಪತ್ರೆಯಲ್ಲಿ ಕನ್ನಡ ಕಡ್ಡಾಯ: ವೈದ್ಯರಿಗೆ ಅಧೀಕ್ಷಕರ ಕಟ್ಟುನಿಟ್ಟಿನ ಸೂಚನೆ

    June 9, 2026

    ಮಹಿಳಾ ಐಪಿಎಸ್ ಅಧಿಕಾರಿಯ ರಹಸ್ಯ ಎಂಟ್ರಿ; ಪಬ್‌ನ ಕರಾಳ ಮುಖ ಅನಾವರಣ

    June 8, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.