Author: main-admin

ಮಂಗಳೂರು: ಪ್ರವಾಸಿಗರನ್ನು ಕರೆದುಕೊಂಡು ನಗರಕ್ಕೆ ಆಗಮಿಸಿದ್ದ ಮಿನಿ ಬನ್ನೊಂದು ನಂತೂರು ಬಳಿ ಪಲ್ಟಿಯಾದ ಪರಿಣಾಮ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅ.26ರಂದು ಬೆಂಗಳೂರಿನಿಂದ ಆಗಮಿಸಿದ ಪ್ರವಾಸಿಗರ ತಂಡ ಕುತ್ತಾರು ಕೊರಗಜ್ಜನ ಗುಡಿಗೆ ತೆರಳಿತ್ತು. ಅಲ್ಲಿಂದ ಧರ್ಮಸ್ಥಳಕ್ಕೆ ಹೊರಟು ಸಂಜೆ ನಂತೂರು ಸಂದೇಶ ಕ್ರಾಸ್ ಬಳಿ ಬರುತ್ತಿದ್ದ ಸಂದರ್ಭ ಎದುರಿನಲ್ಲಿದ್ದ ಬೈಕ್ ಸವಾರ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ದಿಬ್ಬವೊಂದರ ಮೇಲೆ ಚಲಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಮತ್ತು 10ಮಂದಿಗೆ ಅಲ್ಪಸ್ವಲ್ಪ ಗಾಯವಾ ಗಿದೆ. ಎಲ್ಲರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಕಾರೊಂದಕ್ಕೂ ಹಾನಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Read More

ಬಜಪೆ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಟೀಲು ಕೊಂಡೆ ಮೂಲದ ಸರಕಾರಿ ಆಸ್ಪತ್ರೆಯ ಹಿಂಭಾಗದ ನೀರಿನ ಟ್ಯಾಂಕಿ ಬಳಿ ವ್ಯಕ್ತಿಯೊಬ್ಬರ ಶವ ಕೊಲೆಯಾದ ಸ್ಥಿತಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ತಾರಾನಾಥ (40) ಎಂದು ಗುರುತಿಸಲಾಗಿದೆ. ಮೃತ ತಾರಾನಾಥ ಕಟೀಲು ಪರಿಸರದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದು ಭಾನುವಾರ ಬೆಳಗಿನ ಜಾವ ಕೊಂಡೆಮೂಲ ನೀರಿನ ಟ್ಯಾಂಕಿ ಬಳಿ ಮೃತನ ಕುತ್ತಿಗೆಯಲ್ಲಿ ಬಟ್ಟೆ ಒಣಗಿಸುವ ಕೇಬಲ್ ವೈರ್ ಪತ್ತೆಯಾಗಿದ್ದು ಕೊಲೆಗೈದ ಸ್ಥಿತಿಯಲ್ಲಿ ಸಂಶಯಾತ್ಮಕ ರೀತಿಯಲ್ಲಿ ಶವ ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ಬಜಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಶ್ರೀಕಾಂತ್, ಬಜಪೆ ಇನ್ಸ್‌ಪೆಕ್ಟರ್ ಸಂದೀಪ್ ಅವರನ್ನೊಳಗೊಂಡ ಪೊಲೀಸರ ತಂಡ, ಫೋರೆನ್ಸಿಕ್, ಬೆರಳಚ್ಚು, ಶ್ವಾನ ದಳ ತನಿಖಾ ತಂಡಗಳು ಘಟನಾ ಸ್ಥಳದಲ್ಲಿ ಪರೀಲನೆ ನಡೆಸಿವೆ. ಮೃತದೇಹದ ಮರಣೋತ್ತರ ಶವಪರೀಕ್ಷೆ ಹಾಗೂ ತನಿಖಾ ತಂಡಗಳ ವರದಿಯ ಬಳಿಕ ಸ್ಪಷ್ಟ ಚಿತ್ರಣ ಹೊರಬರಲಿದೆ.…

Read More

ಸುಳ್ಯ : ಇತ್ತೀಚೆಗೆ ಪ್ರಕರಣವೊಂದರ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಲುವಾಗಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆತಂದ ವೇಳೆ ತಪ್ಪಿಸಿಕೊಂಡು ಪರಾಗಿಯಾಗಿದ್ದಾತನನ್ನು ಕೊನೆಗೂ ಸುಳ್ಯ ಪೊಲೀಸರು ಪತ್ತೆ ಹಚ್ಚಿದ್ದಾರೆ. ತಮಿಳುನಾಡಿನ ರಾಘವನ್ ಕೆಜೀಶ್ವರನ್ ಅಲಿಯಾಸ್ ಕೂಲಿ ಕರಣ್ (25 ವರ್ಷ)ಮತ್ತೆ ಪೊಲೀಸರ ವಶವಾದ ಆರೋಪಿ. ಅ.5 ರಂದು ಪೊಲೀಸರು ಆತನನ್ನು ಸಂಪಾಜೆಯ ಅಂಬರೀಶ್ ಭಟ್ಟರ ಮನೆಯ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಂಡಿದ್ದರು, ನಿಯಮ ಪ್ರಕಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ವೈದ್ಯಕೀಯ ತಪಾಸಣೆ ನಡೆಸಬೇಕು, ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಕರೆದುಕೊಂಡು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ಆತ ಪೊಲೀಸರನ್ನೇ ದೂಡಿ ಹಾಕಿ ಪರಾರಿಯಾಗಿದ್ದ. ಸುಳ್ಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಹಾಗೂ ಕ್ರೈಂ ಪಿಸಿಐ ಸರಸ್ವತಿ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಿದ್ದರು. ಸುಳ್ಯದಿಂದ ತಮಿಳುನಾಡಿಗೆ ಹೋಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ತಮಿಳುನಾಡಿಗೆ ತೆರಳಿದ್ದರು.ಸ್ಥಳೀಯರಿಂದ ಪೂರಕ ಮಾಹಿತಿ ಪಡೆದ ಪೊಲೀಸರು ತಲೆಕೂದಲು…

Read More

ಮಂಗಳೂರು: ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಜನಸೇವಾ ಕೇಂದ್ರ ಪುತ್ತೂರು ಆಶ್ರಯದಲ್ಲಿ ‘ಅಶೋಕ ಜನ-ಮನ 2024’ ವಸ್ತ್ರ ವಿತರಣಾ ಕಾರ್ಯಕ್ರಮ ನವೆಂಬರ್ 2 ನೇ ಶನಿವಾರ ಪುತ್ತೂರಿನ ಕೊಂಬೆಟ್ಟು ಜ್ಯೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ. ದೀಪಾವಳಿಯ ಪ್ರಯುಕ್ತ ಪ್ರತಿ ವರ್ಷದಂತೆ ನಡೆಯುವ ವಸ್ತ್ರ ವಿತರಣೆ ಹಾಗೂ ಗೂಡುದೀಪ ಸ್ಪರ್ಧೆಯನ್ನೊಳಗೊಂಡ ಕಾರ್ಯಕ್ರಮವು ಈ ಬಾರಿ ಅಶೋಕ ಜನ-ಮನ 2024 ಎಂಬ ಹೊಸ ಹೆಸರಿನೊಂದಿಗೆ ವಿನೂತನವಾಗಿ ವಿಜೃಂಭಣೆಯಿಂದ ನಡೆಯಲಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರೈ ಎಸ್ಟೇಟ್‌ನ ಸ್ವಂತ ಖರ್ಚಿನಿಂದ 3.5 ಕೋಟಿ ವೆಚ್ಚದಲ್ಲಿ ವಸ್ತ್ರ ವಿತರಣೆ ನಡೆಯಲಿರುವುದು. ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮಹಾಲಿಂಗೇಶ್ವರ ದೇವಸ್ಥಾನದಿಂದ ಕೊಂಬೆಟ್ಟು ವರೆಗೆ ವಯಸ್ಕರಿಗೆ ಆಟೋ ರಿಕ್ಷಾ ಅಥವಾ ಬಗ್ಗಿ ವಾಹನ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಹಾಗೂ ಗೂಡುದೀಪ ಸ್ಪರ್ಧೆಗೆ ವಿಶೇಷ ಬಹುಮಾನ ನೀಡಲಾಗುವುದು. ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ಸೂಕ್ಷ್ಮ ವಲಯದಲ್ಲಿ…

Read More

ಅ.11ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ ತನ್ನನ್ನು ಮಹಾರಾಷ್ಟ್ರದ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟ‌ರ್ ವಿನಯ ಕುಮಾರ ಎಂದು ಪರಿಚಯಿಸಿಕೊಂಡಿದ್ದ ಕಿರುಕುಳದ ಬಗ್ಗೆ ನಿಮ್ಮ ಮೇಲೆ ದೂರು ದಾಖಲಾಗಿದೆ. ಠಾಣೆಗೆ ಬರಬೇಕು ಎಂದು ತಿಳಿಸಿದ. ಬಳಿಕ ಆಕಾಶ ಕುಲ್ಲಹಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ತಾನು ಸಿಬಿಐನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ. ನರೇಶ್ ಗೋಯೆಲ್ ಎಂಬವರ ಮನೆಯನ್ನು ಜಪ್ತಿ ಮಾಡುವಾಗ ನಿಮ್ಮ ಎಟಿಎಂ ಕಾರ್ಡ್ ಸಿಕ್ಕಿದೆ. ಅದರಲ್ಲಿ 20 ಜನರು 2 ಕೋ.ರೂ.ಗಳನ್ನು ನಿಮ್ಮಮುಂಬೈಯ ಖಾತೆಯಲ್ಲಿ ಹೂಡಿಕೆ ಮಾಡಿದ್ದಾರೆ. ಆ ಬಗ್ಗೆ ಮನಿ ಲಾಂಡರಿಂಗ್ ಪ್ರಕರಣ ನಿಮ್ಮ ಮೇಲೆ ದಾಖಲಾಗಿದೆ. ಹಾಗಾಗಿ ನಿಮ್ಮನ್ನು ಬಂಧಿಸಲಾಗುವುದು ಎಂದು ತಿಳಿಸಿದ. ನಿಮ್ಮ ದಾಖಲಾತಿಗಳನ್ನು ಸುಪ್ರೀಕೋರ್ಟ್‌ಗೆ ಸಲ್ಲಿಸಬೇಕು. ನಿಮಗೆ ಬರಲು ಅಸಾಧ್ಯವಾದರೆ ನಾನೇ ಆನ್‌ಲೈನ್ ಮೂಲಕ ತನಿಖೆ ಮಾಡುತ್ತೇನೆ ಎಂದಿದ್ದು, ಮರುದಿನ ಮತ್ತೆ ಕರೆ ಮಾಡಿದ ಆಕಾಶ ಕುಲ್ಲಹಾರಿ ಬ್ಯಾಂಕ್ ಖಾತೆ ವಿವರಗಳನ್ನು ಕೇಳಿದ. ತಾನು ಎಲ್ಲ ವಿವರಗಳನ್ನು ನೀಡಿದೆ. ಆಗ ಕರೆ ಮಾಡಿ ನಿಮ್ಮ ಖಾತೆಯಲ್ಲಿರುವ…

Read More

ಮುಲ್ಕಿ: ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಯುವಕನೋರ್ವನನ್ನು ಹಣಕ್ಕಾಗಿ ಸುಲಿಗೆ ಮಾಡಿ ಕೊಲೆ ಮಾಡಿರುವ ಬಗ್ಗೆ ಶುಕ್ರವಾರ ಮುಲ್ಕಿಯಲ್ಲಿ ರೈಲ್ವೆ ಬೋಗಿಯ ಮ್ಯಾನೇಜರ್ ಪರಿಶೀಲನೆ ನಡೆಸುವಾಗ ಕಂಡುಬಂದಿದ್ದು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯುವಕನನ್ನು ಚಿಕ್ಕಬಳ್ಳಾಪುರದ ಕುಮಾರಪೇಟೆ ನಿವಾಸಿ ಅಮೀರ್ ಖಾನ್ ಎಂಬುವರ ಪುತ್ರ ಮೌಜಾಮ್( 35) ಎಂದು ಗುರುತಿಸಲಾಗಿದೆ. ಮೃತ ಮೌಜಾಮ್ ಸೇಲ್ಸ್ ರೆಪ್ ಕೆಲಸ ಮಾಡುತ್ತಿದ್ದ, ಈತ ಬೆಂಗಳೂರಿನಿಂದ ಮುರುಡೇಶ್ವರ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದುರುಳರು ಈತನ ಹಣ ಬ್ಯಾಗ್ ಮೊಬೈಲ್ ಸುಲಿಗೆ ಮಾಡುವ ಉದ್ದೇಶದಿಂದ ಯಾವುದೋ ಸಾಧನದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ. ಉಡುಪಿಯಲ್ಲಿ ರೈಲ್ವೇ ಬೋಗಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಈತನನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದು ತಿಳಿದು ಬಂದಿದೆ. ಮೃತ ಸಂಬಂಧಿಕರಾದ ಆರಿಫ್ ಉಲ್ಲಾಖಾನ್ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಈ ನಡುವೆ ಮೃತನ ಮೊಬೈಲ್ ಲೊಕೇಶನ್ ಸಕಲೇಶಪುರದಲ್ಲಿ ಕೊನೆಯ ಸಂಪರ್ಕ ಕಂಡುಬರುತ್ತಿದ್ದು ಸಕಲೇಶಪುರ ಆಸುಪಾಸಿನಲ್ಲಿ ಕೊಲೆಯಾಗಿರಬಹುದು…

Read More

ಮಂಗಳೂರು : ಸುಮಾರು 30 ವರ್ಷಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಂಆರ್ ಪಿಎಲ್ ಬಳಿಯಲ್ಲಿ ನಡೆದ ಕೊಲೆ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಸತತ ಕಾರ್ಯಾಚರಣೆ ಬಳಿಕ ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು  ಯಶಸ್ವಿಯಾಗಿದ್ದಾರೆ. ಕೇರಳದ ಕೊಟ್ಟಾರಕ್ಕರ ಕೊಲ್ಲಂ, ಕೈತಕೋಡ್ ನ ಕುರುವ ಮೂಲ ಹೌಸ್ ನಿವಾಸಿ ಜೋಸ್ ಕುಟ್ಟಿ ಪಾಪಚ್ಚನ್(55) ಬಂಧಿತ ಆರೋಪಿ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಗ್ರಾಮದಲ್ಲಿ ಎಂಆರ್ ಪಿಎಲ್ ಟೌನ್ ಶಿಪ್ ಸೈಟ್ ಪರಿಸರದಲ್ಲಿ 1995ರ ಮಾರ್ಚ್ 12ರಂದು ರಾತ್ರಿ 10:30 ಗಂಟೆ ಸುಮಾರಿಗೆ ಈ ಸೈಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ನಾರಾಯಣ ಅವರ ಜೊತೆ 2 ಮಂದಿ ಜಗಳ ಮಾಡಿ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ನಾರಾಯಣ ಅವರು ಕೊಲೆಯಾಗಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು 1995 ಮಾರ್ಚ್ 12ರಂದು ರಾತ್ರಿ ಮೇಲ್ಕಂಡ ಪ್ರಕರಣದ ಆರೋಪಿಗಳ ಪೈಕಿ ಅಚ್ಚನ್…

Read More

ಮಂಗಳೂರು: ಇಲ್ಲಿನ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ 32 ವರ್ಷದ ಸಾಝಿಯಾ ಎಂಬ ಯುವತಿ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಸಾಝಿಯಾಗೆ 8ವರ್ಷಗಳ ಹಿಂದೆ ಕಾಟಿಪಳ್ಳ ನಿವಾಸಿ ಇಮ್ತಿಯಾಜ್ ಎಂಬವರೊಂದಿಗೆ ವಿವಾಹವಾಗಿತ್ತು.‌ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಇಮ್ತಿಯಾಜ್ ವಿದೇಶದಲ್ಲಿರುವ ಕಾರಣ, ಸಾಝಿಯಾ ಪೋಷಕರೊಂದಿಗೆ ವಾಸಿಸುತ್ತಿದ್ದರು. ಅ.23ರಂದು ಬೆಳಗ್ಗೆ 11.30ಕ್ಕೆ ಸಾಝಿಯಾ ತನ್ನ ತಾಯಿಯಲ್ಲಿ ಹಣ ಕೇಳಿದ್ದರು. ಆದರೆ ತಾಯಿ ಹಣ ಇಲ್ಲ ಎಂದು ಹೇಳಿದ್ದು, ಆ ಬಳಿಕ ಮನೆಯವರಿಗೆ ಯಾವುದೇ ಮಾಹಿತಿ ನೀಡದೇ ಮನೆಯಿಂದ ಹೊರಟು ಹೋಗಿದ್ದಾರೆ. ಹಲವಾರು ಕಡೆ ಹುಡುಕಿದರೂ ಸಾಝಿಯಾ ಪತ್ತೆಯಾಗದೇ ಇರುವ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Read More

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿರುವ ಸಂಗತಿ ಬೆಳಕಿಗೆ ಬಂದಿದೆ. ತಮ್ಮ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿರುವ ಬಗ್ಗೆ ವಿಚಾರ ತಿಳಿದ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೊತೆಗೆ ‘ತಮ್ಮ ಹೆಸರಲ್ಲಿ ಬರುವ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬೇಡಿ’ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

Read More

ಕರ್ತವ್ಯನಿರತ ಸಂಚಾರಿ ಪೊಲೀಸ್ ಸಿಬ್ಬಂದಿಯ ಸೂಚನೆಯನ್ನು ನಿರ್ಲಕ್ಷಿಸಿ ಕಾರು ಚಲಾಯಿಸುವ ಮೂಲಕ ಪೊಲೀಸ್‌ಗೆ ಗಾಯಗೊಳಿಸಿ ಪರಾರಿಯಾದ ಆರೋಪದಡಿ ಕೊಡಗು ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರು ಸಹಿತ ಚಾಲಕನನ್ನು ಬಂಧಿಸಿದ್ದಾರೆ. ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮುನ್ನೂರು ಗ್ರಾಮದ ನಂದವಾರಕೋಟೆ ನಿವಾಸಿ ನಝೀರ್ (27) ಎಂದು ಗುರುತಿಸಲಾಗಿದೆ. ಅ.20 ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿ ಎರಡು ವಾಹನಗಳ ನಡುವೆ ಡಿಕ್ಕಿಯಾಗಿ ವಾಹನದಟ್ಟಣೆ ಹೆಚ್ಚಾಗಿತ್ತು. ಈ ಸಂದರ್ಭ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಸಂಜು.ಎ.ಜಿ (27) ಅವರು ಡಿಕ್ಕಿಪಡಿಸಿದ ನಝೀರ್ ನ ಕಾರನ್ನು ಪಕ್ಕಕ್ಕೆ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಇದನ್ನು ನಿರ್ಲಕ್ಷಿಸಿದ ನಝೀರ್ ಕಾರನ್ನು ಚಲಾಯಿಸಿ ಪರಾರಿಯಾಗಿದ್ದಾನೆ. ಈ ಸಂದರ್ಭ ಸಂಜು ಅವರ ಬಲಗಾಲಿಗೆ ಗಾಯವಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಮಹೇಶ್ ಕುಮಾರ್, ಮಡಿಕೇರಿ ನಗರ ಸಿಪಿಐ ರಾಜು.ಪಿ.ಕೆ, ಪಿಎಸ್‌ಐ ಲೋಕೇಶ್ ಹಾಗೂ ಸಿಬ್ಬಂದಿಗಳ ತನಿಖಾ ತಂಡ ಪತ್ತೆ…

Read More